22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದಿ| ಪದ್ಮನಾಭ ಆಚಾರ್ಯರ ಕುಟುಂಬಕ್ಕೆ ಸ್ನೇಹಿತರ ನೆರವು: ಶ್ರಮದಾನದ ಮೂಲಕ ಮನೆ ದುರಸ್ತಿ

ಕೊಕ್ಕಡ: ಕೆಲವು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದ ಕೊಕ್ಕಡ ಗ್ರಾಮದ ಪದ್ಮನಾಭ ಆಚಾರ್ಯ ಅವರ ಮನೆಯು ವಾಸಿಸಲು ಯೋಗ್ಯವಾಗದ ಮಟ್ಟಿಗೆ ಹಾಳಾಗಿದ್ದು ಮೃತರ ಆಪ್ತ ಸ್ನೇಹಿತರು ಹಾಗೂ ದಾನಿಗಳು ಶ್ರಮದಾನದ ಮೂಲಕ ಆಚಾರ್ಯರ ಮನೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡರು.

ಮನೆಗೆ ಹೊಸ ರೂಪ ನೀಡುವ ಉದ್ದೇಶದಿಂದ ಶ್ರಮದಾನ ಕಾರ್ಯ ತೀವ್ರಗತಿಯಲ್ಲಿ ನಡೆಯಿತು. ಕುಟುಂಬದ ಸಂಕಷ್ಟದ ವೇಳೆಯಲ್ಲಿ ನಾವು ಇದ್ದೇವೆ ಎಂಬ ಭರವಸೆಯನ್ನು ನೀಡಿ, ಮೃತರ ಸ್ನೇಹಿತರ ಬಳಗವೇ ಸಂಪೂರ್ಣ ಕಾರ್ಯವನ್ನು ಮುನ್ನಡೆಸಿದೆ.

ಈ ಕಾರ್ಯಕ್ಕೆ ಮೃತರ ಆಪ್ತ ಸ್ನೇಹಿತ, ಸಮಾಜಸೇವಕ ತುಕ್ರಪ್ಪ ಶೆಟ್ಟಿ ನೂಜೆ, ಉದ್ಯಮಿ ನಾರಾಯಣಗೌಡ, ಸೌತಡ್ಕ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಶಾಂತಪ್ಪ ಮಡಿವಾಳ, ರಜಾಕ್ ಕೊಕ್ಕಡ, ಜಾರ್ಜ್, ತಾಲೂಕು ಪಂಚಾಯತಿ ಮಾಜಿ ಸದಸ್ಯಲಕ್ಷ್ಮೀನಾರಾಯಣ ಇವರ ನೇತೃತ್ವದಲ್ಲಿ ಅವರೊಂದಿಗೆ ಶ್ಯಾಮರಾಜ್ ಪಟ್ರಮೆ, ಕಾಂಟ್ರಾಕ್ಟರ್ ಫಾರೂಕ್ ಮಡೆಂಜೋಡಿ, ಬಾಲಕೃಷ್ಣ ಗೌಡ ಬಳಕ್ಕ, ಧನಂಜಯ ಪಟ್ರಮೆ, ಜನಾರ್ಧನ, ಲಾರೆನ್ಸ್ ಪಾಯಿಸ್, ಶ್ರೀಧರ ಗೌಡ ಹಾಗೂ ಮೃತರ ಪತ್ನಿ, ಮಕ್ಕಳು, ಸಹೋದರ ಸೇರಿದಂತೆ ಸೇರಿ ಸುಮಾರು 70 ಮಂದಿ ಸ್ನೇಹಿತರ ತಂಡ ಶ್ರಮದಾನದಲ್ಲಿ ಪಾಲ್ಗೊಂಡು ಮನೆ ದುರಸ್ತಿಗೆ ಕೈ ಜೋಡಿಸಿದರು.

Related posts

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಒಂಭತ್ತನೇ ಸುತ್ತಿನಲ್ಲಿ 7398 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಗೇರುಕಟ್ಟೆ: ಕೃಷಿಕ ಪೆರಾಜೆ ಬಳ್ಳಿದಡ್ಡ ಕಾಂ ತಪ್ಪ ಗೌಡ ನಿಧನ

Suddi Udaya

ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರಾಟೆಜಿಕ್ ಲೀಡರ್ ಶಿಪ್ ಪ್ರೋಗ್ರಾಮ್ ಗೆ ಸುಳ್ಯದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆ

Suddi Udaya

ಆಕಾಂಕ್ಷ ಸಾವು ಪ್ರಕರಣಕ್ಕೆ ಹೊಸ ತಿರುವು; ಪೊಲೀಸರಿಂದ ಮೋಸದ ಆರೋಪ: ಇನ್ನೂ ನಡೆಯದ ಮರಣೋತ್ತರ ಪರೀಕ್ಷೆ

Suddi Udaya

ಲಾಯಿಲ: ಶ್ರೀ ಉಳ್ಳಾಲ್ತಿ, ಮೈಸಂದಾಯ ಹಾಗೂ ಗುಳಿಗ ದೈವಗಳ ಸಾನಿಧ್ಯ ಪಿಲಿಪಂಜರ ಕ್ಷೇತ್ರ ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಗೇರುಕಟ್ಟೆ ಹಿರಿಯರಾದ ಹಾಮದ್ ಕುಂಇೆ ನಿಧನ

Suddi Udaya
error: Content is protected !!