23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಜೀವ ಬೆದರಿಕೆ ಆರೋಪ : ಕೆ.ಎನ್ ಗೌಡರಿಂದ ಠಾಣೆಗೆ ದೂರು

ಬೆಳ್ತಂಗಡಿ: ನಾಳ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ. ಅವರು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ, ಕಳಿಯ ಗ್ರಾಮದ `ದೇವಿ ಕೃಪಾ’ ಪೆಲತ್ತಳಿಕೆ ನಿವಾಸಿ, ಉದಯವಾಣಿ ವರದಿಗಾರ ಕೆ.ಎನ್. ಗೌಡ ಅವರು ಡಿ.10ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಡಿ.3ರಂದು ನಾಳ ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ 2027ನೇ ವರ್ಷದಲ್ಲಿ ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಮತ್ತು ಭಕ್ತರ ಸಭೆಯಲ್ಲಿ ಊರಿನ ಭಕ್ತನಾಗಿ ಹಾಗೂ ಪತ್ರಿಕೆ ವರದಿಗಾರನಾಗಿ ಭಾಗವಹಿಸಿರುತ್ತೇನೆ. ಅದರಂತೆಯೇ ಅ ದಿನ ಸಭೆಯಲ್ಲಿ ನಡೆದಿರುವ ವಿಷಯವನ್ನು ಅಧರಿಸಿ ನೈಜ ವರದಿಯನ್ನು ಕಳುಹಿಸಿ ಕೊಟ್ಟಿದ್ದು, ಅದು ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಪತ್ರಿಕೆಯಲ್ಲಿ ಬಂದ ಬಳಿಕ ಡಿ.9 ರಂದು ಶ್ರೀ ಕ್ಷೇತ್ರದ ವಾಟ್ಸಫ್ ಗ್ರೂಪ್‌ನಿಂದ ನನ್ನ ಮೊಬೈಲ್ ಸಂಖ್ಯೆಯನ್ನು ರಿಮೂವ್ ಮಾಡಿದ್ದನ್ನು ವಿಚಾರಿಸಿದಾಗ ಮೊಬೈಲ್ ಪೋನ್ ಮೂಲಕ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿ, ವಾಯ್ಸ್ ರೆಕಾರ್ಡ್ ಕಳುಹಿಸಿ, ನನ್ನ ಪತ್ನಿ, ಮಗಳ ವಿಷಯ ಪ್ರಸ್ತಾಪಿಸಿ ಜೀವ ಬೆದರಿಕೆ ಹಾಕಿರುವುದಾಗಿ ಕೆ.ಎನ್ ಗೌಡ ದೂರಿನಲ್ಲಿ ಆರೋಪಿಸಿದ್ದಾರೆ.

Related posts

ಶಿಲ್ಪಕಲಾ ಅಕಾಡೆಮಿ ಕಲಾಕೃತಿ ಪ್ರಶಸ್ತಿಗೆ ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ಆಯ್ಕೆ

Suddi Udaya

ಪತಿಯೊಂದಿಗೆ ಕೋಪಗೊಂಡು ಆತ್ಮಹತ್ಯೆಗೆ ಯತ್ನ: ನದಿ ಹಾರಲು ಯತ್ನಿಸಿದ ಮಹಿಳೆಯ ಜೀವ ಕಾಪಾಡಿದ ಸಾಕು ನಾಯಿ

Suddi Udaya

ಉಜಿರೆ ಶೀತಲ್ ಗಾರ್ಡನ್ ನಲ್ಲಿ ಸುಸಜ್ಜಿತವಾದ ವಿಜಯ ಸಭಾಭವನ ಉದ್ಘಾಟನೆ

Suddi Udaya

ಕನ್ನಡ ಸೇನೆ -ಕರ್ನಾಟಕ ಬೆಳ್ತಂಗಡಿ ಸಮಿತಿ ವತಿಯಿಂದ ಬೆಳ್ತಂಗಡಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಇಂದಬೆಟ್ಟು ಆರೋಗ್ಯ ಕೇಂದ್ರದಲ್ಲೊಂದು ಅಚ್ಚರಿ; ಆಸ್ಪತ್ರೆ ಬಾಗಿಲು ಹಾಕದೆ ಹೋದ ಸಿಬ್ಬಂದಿಗಳು

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಿಂದ ವರ್ಗಾವಣೆಗೊಂಡ ಪ್ರಾಂಶುಪಾಲರು ಬಾಲಕೃಷ್ಣ ಬೇರಿಕೆಯವರಿಗೆ ಬೀಳ್ಕೊಡುಗೆ

Suddi Udaya
error: Content is protected !!