ಬೆಳ್ತಂಗಡಿ: ಈ ಭಾರಿಯ ಬೆಳೆ ವಿಮೆಯ ವಿತರಣೆಯಲ್ಲಿ ಕರಾವಳಿ ಭಾಗದ ಅಡಿಕೆ ಹಾಗೂ ಕರಿಮೆಣಸು ಬೆಳೆಗಾರರಿಗೆ ಅತೀ ಹೆಚ್ಚು ಮಳೆಯಿಂದಾಗಿ ಕೃಷಿಗೆ ಗರಿಷ್ಠ ಮಟ್ಟದ ಹಾನಿ ಉಂಟಾಗಿದ್ದರು ಅತ್ಯಂತ ಕಡಿಮೆ ವಿಮಾ ಪರಿಹಾರ ಬಂದಿದ್ದು ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ರೈತರಿಗೆ ಅನುಕೂಲವಾಗುವಂತೆ ಅತ್ಯಂತ ಹೆಚ್ಚಿನ ಮೊತ್ತದ ಪರಿಹಾರವನ್ನು ಒದಗಿಸುವಂತೆ ಶಾಸಕ ಹರೀಶ್ ಪೂಂಜ ಸರ್ಕಾರವನ್ನು ಸದನದಲ್ಲಿ ಒತ್ತಾಯಿಸಿದರು.
ಇಳಂತಿಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2023ರಲ್ಲಿ 3,791 ಮಿ.ಮೀ. ಮಳೆ ಬಿದ್ದಿರುವುದಾಗಿ ಮಳೆಮಾಪಕ ಯಂತ್ರದಲ್ಲಿ ದಾಖಲಾಗಿದೆ. 58ಸಾವಿರ ರೂ. ವಿಮೆ ಸಿಕ್ಕಿತ್ತು. 2024ರಲ್ಲಿ 4,876 ಮಿ.ಮೀ. ಮಳೆಯಾಗಿತ್ತಾದರೂ ವಿಮೆ ಪರಿಹಾರ ಸಿಕ್ಕಿದ್ದು ಮಾತ್ರ 25,000 ರೂಪಾಯಿ. ಈ ತಾರತಮ್ಯ ಏಕೆ? ಇದಕ್ಕೆ ಏನು ಮಾನದಂಡ? ಹೆಚ್ಚು ಮಳೆ ಬಿದ್ದರೂ ಕಡಿಮೆ ವಿಮೆ ಪರಿಹಾರ ಏಕೆ? ಅಡಿಕೆ, ಕರಿಮೆಣಸು, ರಬ್ಬರ್ ಬೆಳೆಗಾರರಿಗೆ ಇದರಿಂದ ಸಾಕಷ್ಟು ನಷ್ಟ ಆಗುತ್ತಿದೆ ಎಂದು ಗಮನ ಸೆಳೆದರು.











