ಉಪ್ಪಿನಂಗಡಿ: ಡಿ.10ರಂದು ಬಂದಾರು ಗ್ರಾಮದ ಅಂಡಿಲ ನಿವಾಸಿ ದೀಕ್ಷಾ ರಕ್ಷಿತ್ ರವರ ಕಳೆದು ಹೋಗಿದ್ದ ರೂ.2.50 ಲಕ್ಷ ಮೌಲ್ಯದ ಚಿನ್ನ ಹಾಗೂ 10 ಸಾವಿರ ನಗದು ಇದ್ದ ಪರ್ಸ್ ನ್ನು ಹಿಂದಿರುಗಿಸಿ ಕೊಟ್ಟ ವಿನಯ್ ನಿವೇದಿತಾ ರವರಿಗೆ ದೀಕ್ಷಾ ರಕ್ಷಿತ್ ದಂಪತಿಗಳು ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿದರು.
ಘಟನೆ ವಿವರ: ಬಂದಾರು ಗ್ರಾಮದ ಅಂಡಿಲ ನಿವಾಸಿ ರಕ್ಷಿತ್ ಇವರ ಪತ್ನಿ ದೀಕ್ಷಾ ರಕ್ಷಿತ್ ರವರ ರೂ 2.50 ಲಕ್ಷ ಮೌಲ್ಯದ ಚಿನ್ನ ಹಾಗೂ 10 ಸಾವಿರ ನಗದು ಇದ್ದ ಪರ್ಸ್ ಉಪ್ಪಿನಂಗಡಿ ಹೋಟೆಲ್ ನಲ್ಲಿ ಡಿ.10 ರಂದು ಸಂಜೆ ಕೈ ತಪ್ಪಿ ಕಳೆದು ಹೋಗಿದ್ದು, ಮನೆಗೆ ಹೋಗಿ ನೋಡುವಾಗ ಚಿನ್ನ, ನಗದು ಕಳೆದು ಹೋಗಿರುವ ಬಗ್ಗೆ ಅರಿವಾಗುತ್ತದೆ, ತಕ್ಷಣ ತನ್ನ ಸಂಬಂಧಿಕರಲ್ಲಿ ತಿಳಿಸಿ ಪರಿಶೀಲಿಸಿದಾಗ ಯಾರಿಗೆ ಸಿಕ್ಕಿದೆ ಎನ್ನುವುದು ತಿಳಿಯುತ್ತದೆ. ಡಿ.11ರಂದು ಬಜತ್ತೂರು ಗ್ರಾಮದ ವಲಾಲ್ ಬೆದ್ರೂಡಿ ನಿವಾಸಿ ವಿನಯ್ ನಿವೇದಿತಾ ರವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರಸುದಾರರಿಗೆ ಚಿನ್ನ, ನಗದು ಹಸ್ತಾಂತರ ಮಾಡಿದರು. ಇವರನ್ನು ದೀಕ್ಷಾ ರಕ್ಷಿತ್ ದಂಪತಿಗಳು ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿದರು. ಉಪ್ಪಿನಂಗಡಿ ಪೊಲೀಸ್ ಅಧಿಕಾರಿ ವರ್ಗಕ್ಕೂ ಕೃತಜ್ಞತೆ ಸಲ್ಲಿಸಿದರು.











