26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ ಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಶನ್‌ ಟ್ರಸ್ಟ್( ರಿ) ನಡೆಸುತ್ತಿರುವ ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ ಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಸಮರ್ಥ ಸಂಪತ್ತು ನಿರ್ಮಾಣದ ಮಾರ್ಗಗಳು – ಮ್ಯೂಚುವಲ್ ಫಂಡ್ಸ್ ಮತ್ತು ಹೂಡಿಕೆದಾರ ಜಾಗೃತಿ”ಎಂಬ ವಿಷಯದ ಮೇಲೆ ಮಾಹಿತಿ ಕಾರ್ಯಾಗಾರವನ್ನು ಡಿ.11 ರಂದು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಿಗೆ ಹೂಡಿಕೆ, ಮ್ಯೂಚುವಲ್ ಫಂಡ್ಸ್, ಮತ್ತು ಸಮರ್ಪಕ ಹಣಕಾಸು ಯೋಜನೆಗಳ ಮಹತ್ವವನ್ನು ತಿಳಿಸುವುದಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅರ್ಜುನ ಮಹೇಶ್ ಅವರು ಹಾಜರಿದ್ದರು. ಅವರು ಪ್ರಸ್ತುತ ಫೈನಾನ್ಸ್ ಕ್ಷೇತ್ರದಲ್ಲಿ ತಜ್ಞರಾಗಿ, ಶಿಕ್ಷಕರಾಗಿಯು ಸೇವೆ ಸಲ್ಲಿಸುತ್ತಿದ್ದು, ಮ್ಯೂಚುವಲ್ ಫಂಡ್ಸ್, ಹೂಡಿಕೆ ತಂತ್ರಗಳು, ಮತ್ತು ಹಣಕಾಸು ನಿರ್ವಹಣೆಯ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಯುವ ಪೀಳಿಗೆ ಹಣಕಾಸು ಜಾಗೃತಿಯನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವೆಂದು ಅವರು ತಮ್ಮ ಉಪನ್ಯಾಸದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಸಂಯೋಜಕರಾದ ಯಶವಂತ್. ಜಿ. ನಾಯಕ್, ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಫಾತಿಮಾ ತೃತೀಯ ಬಿ. ಕಾಮ್ ಸ್ವಾಗತಿಸಿ, ಸುಪ್ರಿಯಾ ತೃತೀಯ ಬಿ.ಕಾಮ್ ವಂದಿಸಿದರು.

Related posts

ಕಣಿಯೂರು: ಕುಡುವಂತಿ ನಿವಾಸಿ ಪುತ್ತು ನಾಯ್ಕ ನಿಧನ

Suddi Udaya

ಸೋಮಂತಡ್ಕ: ಸೂಪರ್ ಮಾರ್ಕೆಟ್ ಗೆ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ಬಿ.ಕಾ೦ ವಿದ್ಯಾರ್ಥಿಗಳಿಗೆ ಪ್ರಾಡಕ್ಟ್ ಲಾಂಚ್ ಸ್ಪರ್ಧೆ

Suddi Udaya

ನಡ: ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ಯಾಮಸುಂದರ ಗೌಡ ಆಯ್ಕೆ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಕಾರ್ಯಕ್ರಮ

Suddi Udaya

ಜೋಗಿ ಪುರುಷರ ವೃಂದ ನಿಟ್ಟಡ್ಕ ನಾಲ್ಕೂರು ವತಿಯಿಂದ ರಾಶಿಪೂಜೆ: ನಾಲ್ಕು ಪುರುಷ ಕಲಾವಿದರಿಗೆ ಸನ್ಮಾನ, ಪೂಜೆಯಲ್ಲಿ ನೂರಾರು ಭಕ್ತರು ಭಾಗಿ

Suddi Udaya
error: Content is protected !!