23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುದುವೆಟ್ಟಿನಲ್ಲಿ ವಿಕಲಚೇತನರ ಸಮನ್ವಯ ಗ್ರಾಮಸಭೆ

ಬೆಳ್ತಂಗಡಿ: ಪುದುವೆಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 43 ಮಂದಿ ಗುರುತಿನ ಚೀಟಿ ಪಡೆದ ವಿಶೇಷಚೇತರಿದ್ದು, ಅವರಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಪುನರ್ವಸತಿ ಕಾರ್ಯಕರ್ತೆ ಶಮೀಮಾ ಬಾನು ಅವರ ಮೂಲಕ ಪೂರಕ ಕೆಲಸ ಮಾಡಲಾಗುತ್ತಿದೆ. ಅವರೆಲ್ಲರ ಬಗ್ಗೆ ವಿಶೇಷ ಕಾಳಜಿಯನ್ನು ಗ್ರಾಮ ಪಂಚಾಯತ್ ಹೊಂದಿದೆ ಎಂದು ಗ್ರಾ.ಪಂ ಅಧ್ಯಕ್ಷ ಪೂರ್ಣಾಕ್ಷ ತಿಳಿಸಿದರು.

ವಿಶ್ವ ವಿಶೇಷ ಚೇತನರ ದಿನಾಚರಣೆಯ ಅಂಗವಾಗಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿ. 11 ರಂದು ನಡೆದ ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಪಂಚಾಯತ್ ನಿಂದ ವಿಶೇಷಚೇತನರ ಮೀಸಲು ಅನುದಾನವನ್ನು ಅವರಿಗಾಗಿಯೇ ವಿನಿಯೋಗಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಪುದುವೆಟ್ಟು ಪಂಚಾಯತ್ ಸಣ್ಣ ಮತ್ತು ಕಡಿಮೆ ಆದಾಯ ಹೊಂದಿರುವುದರಿಂದ 5 % ಮೀಸಲು ಅನುದಾನದ ಪ್ರಮಾಣ ಕಡೀಮೆ ಇದೆ. ಅದಾಗ್ಯೂ ಲಭ್ಯ ಅನುದಾನದಲ್ಲಿ ದಾನಿಗಳ ಸಹಕಾರದೊಂದಿಗೆ ಪೂರಕವಾಗಿ ಸ್ಪಂದಿಸಲಾಗುತ್ತಿದೆ ಎಂದೂ ಅವರು ಹೇಳಿದರು.

ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಮಾತನಾಡಿ, ವಿಕಲಚೇತನರಿಗೆ ಸರಕಾರದಿಂದ ಇರುವ ಸೌಲಭ್ಯಗಳ ಸಮಗ್ರ ಮಾಹಿತಿ ನೀಡುತ್ತಾ ವಿಕಲಚೇತನರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ಗ್ರಾಮ ಸಭೆಗೆ ಸಹಯೋಗ ನೀಡಿದ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಬೆಳ್ತಂಗಡಿ ಇದರ ಸಲಹಾ ಸಮಿತಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಮಾತನಾಡಿ, ಸಂಘದ ಸದಸ್ಯತ್ವ ವಿಶೇಷಚೇತನರಿಗಾಗಿಯೇ ರಾಜ್ಯಮಟ್ಟದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನಲ್ಲಿ ಈಗ ಇರುವ ವ್ಯವಹಾರ ವಿವರ, ಸಾಲಸೌಲಭ್ಯಗಳ ಮಾಹಿತಿ, ವಿಕಲಚೇತನರ ಅಭಿವೃದ್ಧಿಗೆ ಇರುವ ಅವಕಾಶಗಳ ವಿವರ ನೀಡಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಯಶವಂತ್ ಗೌಡ , ಭಾಸ್ಕರ, ರೇಣುಕಾ, ವನಿತಾ, ಅಪ್ಪಿ, ಇಂದಿರಾ, ಜಯಲಕ್ಷ್ಮಿ, ರಾಮೇಂದ್ರ, ಸೌಭಾಗ್ಯ ಸೊಸೈಟಿಯ ಸಲಹಾ ಸಮಿತಿ ಸದಸ್ಯೆ ಸಿ.ಕೆ ಚಂದ್ರಕಲಾ, ಮೆನೇಜರ್ ಸಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಪಿಡಿಒ ರವಿ ಎನ್.ಬಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬಿಲ್ ಕಲೆಕ್ಟರ್ ರವಿಶಂಕರ್ ನಿರೂಪಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶಮೀಮಾ ಬಾನು ಧನ್ಯವಾದ ಸಲ್ಲಿಸಿದರು. ವಿಕಲಚೇತನರು ಮತ್ತು ಅವರ ಪೋಷಕರ ಅಹವಾಲು‌ ಸ್ವೀಕರಿಸಲಾಯಿತು. ಕೆಲವು ಬೇಡಿಕೆಗಳಿಗೆ ಎಂಆರ್‌ಡಬ್ಲ್ಯೂ ಮೂಲಕ ಪರಿಹಾರವನ್ನೂ ಕಂಡುಕೊಳ್ಳಲಾಯಿತು.

Related posts

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

Suddi Udaya

ಮಾ:29: ನಿಡ್ಲೆ ಪ್ರೌಢಶಾಲಾ ಕೊಠಡಿಗಳ ಹಸ್ತಾಂತರ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಉಜಿರೆ ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲಾಕ್ಮಿ ಕಂಪನಿಯ ಕಾಸ್ಮೆಟಿಕ್ಸ್ ಹೊಸ ಕೌಂಟರ್ ಶುಭಾರಂಭ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಇಳಂತಿಲ: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಸಾವು

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಪ್ರಶಸ್ತಿ

Suddi Udaya
error: Content is protected !!