September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅದ್ಬುತ ವೇದಿಕೆಯಲ್ಲಿ ಬಳಂಜ ಶಾಲೆಯ ಅಮೃತ ಮಹೋತ್ಸವದ ಉದ್ಘಾಟನೆ,ಸ್ವಾಗತ ದ್ವಾರ ಲೋಕಾರ್ಪಣೆ, ಶಾಸಕರ ನಿಧಿಯಿಂದ ನಿರ್ಮಾಣಗೊಂಡ ಮಕ್ಕಳ ತಂಗುದಾನ ಉದ್ಘಾಟನೆ

ಬಳಂಜ: ಬಳಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಮೃತ ಮಹೋತ್ಸವ ಸಮಿತಿ,ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವರ ಸಹಯೋಗದಲ್ಲಿ ಬಳಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವ ಉದ್ಘಾಟನೆಯು ಡಿ.13 ರಂದು ಕೀರ್ತಿಶೇಷ ಪಟೇಲ್ ಕಿನ್ನಿ ಯಾನೆ ಕೋಟಿ ಪಡಿವಾಳ ಸಭಾ ಮಂದಿರದಲ್ಲಿ ನಡೆಯಿತು.

ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ಸುಮಾರು ರೂ 5.00 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಕ್ಕಳ ತಂಗುದಾಣದ ಉದ್ಘಾಟನೆಯನ್ನು ನೇರವೇರಿಸಿ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಸಕ ಹರೀಶ್ ಪೂಂಜರವರು ಮಾತನಾಡಿ ಇಡೀ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ ಸಾಧಕರನ್ನು ಪಡೆದ ಮಿನುಗುವ ಊರು ಬಳಂಜ. ಶಾಲೆಯ ಸರ್ವತೋಮುಖ ಪ್ರಗತಿಗೆ ನನ್ನ ಸಹಕಾರ ಸದಾ ಇದೆ ಎಂದರು.

ಅಮೃತ ಮಹೋತ್ಸವ ಮತ್ತು ಸ್ವಾಗತ ದ್ವಾರದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮ ಪ್ರಸಾದ್ ಅಜಿಲರು ದೀಪ ಪ್ರಜ್ವಲನೆ ಮೂಲಕ ನೇರವೇರಿಸಿ ಮಾತನಾಡಿ ಊರಿನ ಶಾಲೆ ಹಾಗೂ ದೇವಸ್ಥಾನ ಬೆಳಗಿದಾಗ ಊರು ಬೆಳಗುತ್ತದೆ ಎಂದರು.

ವೇದಿಕೆಯಲ್ಲಿ ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ,ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬಳಂಜ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶೋಭಾ ಕುಲಾಲ್,ಅಳದಂಗಡಿ ಪ್ರಸಿದ್ದ ವೈದ್ಯ ಡಾ.ಎಮ್.ಎಂ ತುಳಪುಳೆ,ಬಳಂಜ ಪ್ರೌಢಶಾಲಾ ಉಪಾಧ್ಯಕ್ಷ ಕೆ .ವಸಂತ ಸಾಲಿಯಾನ್, ಹಿರಿಯರಾದ ಯುವರಾಜ್ ಪಡಿವಾಳ್ ಬಳಂಜ ಹೊಸಮನೆ, ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ,ಬಳಂಜ ಶಿಕ್ಷಣ ಟ್ರಸ್ಟ್ ಅದ್ಯಕ್ಷ ಮನೋಹರ್ ಬಳಂಜ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯ,ಬಳಂಜ ಗ್ರಾ.ಪಂ ಸದಸ್ಯರಾದ ಸುಚಿತ್ರಾ,ಯಕ್ಷಿತಾ ದೇವಾಡಿಗ,
ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ಪೂಜಾರಿ, ಶಾಲಾ ಮುಖ್ಯೋಪಾಧ್ಯಯರಾದ ರಂಗಸ್ವಾಮಿ ,ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಸುಲೋಚನಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ವೈ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಅಶ್ವಥ್ ಹೆಗ್ಡೆ ಸ್ವಾಗತಿಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿಕೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

ಅಮೃತ ಮಹೋತ್ಸವದಲ್ಲಿ ಬಳಂಜ ಪೇಟೆಯಿಂದ ವಿದ್ಯಾರ್ಥಿಗಳು ಹಾಗೂ ಊರವರಿಂದ ವೈಭವದ ಪಥಸಂಚಲನ ನಡೆಯಿತು.

Related posts

ಅಯೋಧ್ಯೆ ರಾಮ ದೇವರ ಪ್ರತಿಷ್ಠಾಪನೆಯ ಪ್ರಯುಕ್ತ ಮದ್ದಡ್ಕ ಭಜನಾ ಮಂದಿರದಲ್ಲಿ ವಿಶೇಷ ಭಜನಾ ಕಾರ್ಯಕ್ರಮ: ಕರಸೇವರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದೃಢ ಕಲಶ

Suddi Udaya

ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ನಲ್ಲಿ ಗುರುಜಯಂತಿ ಆಚರಣೆ

Suddi Udaya

ಕೊಕ್ಕಡ ಗ್ರಾಮ ಪಂಚಾಯತ್ ಅಭಿವೃದ್ಧಿ ಸಹಿಸದ ಕಿಡಿಗೇಡಿಗಳಿಂದ ಬ್ಯಾನರ್ ದ್ವಂಸ ಪ್ರಕರಣ

Suddi Udaya

ಕಲ್ಮಂಜ: ಬೂತ್ 89ರ ಪಂ. ಮಾಜಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!