September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ ಶಾಲೆಗೆ ಹಳೆವಿದ್ಯಾರ್ಥಿಗಳಿಂದ ಎರಡು ಟಿವಿ ಕೊಡುಗೆ

ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜ ಇದರ ಅಮೃತ ಮಹೋತ್ಸವದ ಪ್ರಯುಕ್ತ ಇಲ್ಲಿನ 2001- 2002ನೇ ಸಾಲಿನ ಹಳೆವಿದ್ಯಾರ್ಥಿಗಳು, ಶಾಲೆಯಲ್ಲಿ ಡಿಜಿಟಲ್ ತರಗತಿ ನಡೆಸುವ ಉದ್ದೇಶಕ್ಕಾಗಿ ಎರಡು ಟಿವಿ, ಹಾಗೂ ವೈಫೈ, ನೆಟ್ವರ್ಕ್ ಅನ್ನು ಕೊಡುಗೆಯಾಗಿ ನೀಡಿದರು. ಜೊತೆಗೆ ಅದಕ್ಕೆ ಸಂಬಂಧಿಸಿದ ರಿಚಾರ್ಜ್ ನ ಸಂಪೂರ್ಣ ಜವಾಬ್ದಾರಿಯನ್ನು ಹಳೆವಿದ್ಯಾರ್ಥಿಗಳು ವಹಿಸಿಕೊಂಡಿರುತ್ತಾರೆ.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಅಮೃತ ಮಹೋತ್ಸವದ ಸಮಿತಿ ಹಳೆ ವಿದ್ಯಾರ್ಥಿ ಸಂಘ ಶಾಲಾ ಅಭಿವೃದ್ಧಿ ಮೇಲೆ ಉಸ್ತುವಾರಿ ಸಮಿತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ವಿನೋದ, ಪ್ರಕಾಶ್ ಶೆಟ್ಟಿ, ನವೀನ್ ಪೂಜಾರಿ, ಸರಿತಾ, ನವೀನ್ ಶೆಟ್ಟಿ , ಅಶ್ವಥ್ ಎಚ್ ಡಿ , ಪ್ರಶಾಂತ್ ಶೆಟ್ಟಿ, ನಿತೇಶ್, ನವ್ಯ ,ಸುದರ್ಶನ್ , ಹೇಮಲತಾ, ಮಮತಾ, ಪ್ರಶಾಂತ್ ದೇವಾಡಿಗ, ಜಯಶ್ರೀ, ಭವ್ಯ ಜಯಶ್ರೀ ,ಮಮತಾ ,ಪ್ರವೀಣ್ ಪೂಜಾರಿ, ಧನವತಿ, ಪವಿತ್ರಕೆ, ಪ್ರಣಿತ್ , ಸುಧೀಶ್, ಜಯಪ್ರಸಾದ್ ಅಶ್ವಿತಾ ಎಚ್ಎಸ್., ಹರಿಶ್ಚಂದ್ರ, ರಾಜೇಶ್ ಅಕ್ಷಯ, ಅಶೋಕ, ವಾಸು, ವನಶ್ರೀ, ರಫೀಕ್, ಪುರಂದರ, ಶಿವಪ್ರಸಾದ್, ಸಾಧಿಕ್, ಸಲೀಂ, ಹನೀಫ್, ಅಕ್ಷತಾ ಶೆಟ್ಟಿ, ವಸಂತ, ರತ್ನಾಕರ್ ಶೆಟ್ಟಿ, ಸೌಮ್ಯ ಭಟ್ , ಪವಿತ್ರ ಎನ್., ನಜೀರ್, ನಾಸಿರ್, ಅಮಿತಾ, ಯತೀಶ್, ಸತೀಶ್, ಸುಕೇಶ್ ಹೆಗ್ಡೆ, ಜಗದೀಶ್, ಯಶೋದ, ರೋಹಿಣಿ, ಜಯಂತಿ, ಸುಧೀರ್ ಜೈನ್ ಉಪಸ್ಥಿತರಿದ್ದರು.

Related posts

ಕನ್ಯಾಡಿ ಸರ್ಕಾರಿ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಮೇಘಾಲಯ ರಾಜ್ಯದ ಸಹಕಾರ ಇಲಾಖೆಯ ಅಧಿಕಾರಿಗಳಿಂದ ಅಧ್ಯಯನ ಪ್ರವಾಸ

Suddi Udaya

ಶಿಶಿಲ: ಕಪಿಲಾ ನದಿ ಮಧ್ಯೆ ಸಿಲುಕಿದ ವ್ಯಕ್ತಿಯ ರಕ್ಷಣೆ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.1.85ಕೋಟಿ ನಿವ್ವಳ ಲಾಭ, ಶೇ.14 ಡಿವಿಡೆಂಟ್ ಘೋಷಣೆ

Suddi Udaya

ಮಂಗಳೂರು ಕ್ಯಾಂಪ್ಕೊ “ಸಾಂತ್ವನ” ಯೋಜನೆಯಡಿ ಸಹಾಯಧನ ಹಸ್ತಾಂತರ

Suddi Udaya

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘದಿಂದ ಕಿರಣ್ ಚಂದ್ರ ಪುಷ್ಪಗಿರಿ ರವರ ಭೇಟಿ

Suddi Udaya
error: Content is protected !!