September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮುಂಡೂರು ನಾಗಕಲ್ಲುರ್ಟಿ ಕ್ಷೇತ್ರದಲ್ಲಿ ಕುಣಿತ ಭಜನೋತ್ಸವ

ಮುಂಡೂರು: ಶ್ರೀ ನಾಗಾಂಬಿಕಾ ದೇವಸ್ಥಾನ, ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ, ಮುಂಡೂರು ಶ್ರೀ ನಾಗಾಂಬಿಕ ಭಜನಾ ಮಂಡಳಿ ಶ್ರೀ ಕ್ಷೇತ್ರ ಮಂಗಳಗಿರಿ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇದರ ಸಹಯೋಗದೊಂದಿಗೆ ಡಿ.14 ರಂದು ತಾಲೂಕಿನ 40 ಭಜನಾ ಮಂಡಳಿಗಳ ಭಜಕರಿಂದ ಏಕಕಾಲದಲ್ಲಿ ಭಜನೋತ್ಸವ ನಡೆಯಿತು.

ಶ್ರೀ ನಾಗಾಂಬಿಕಾ ಕ್ಷೇತ್ರ ಮಂಗಳಗಿರಿಯಲ್ಲಿ 12 ವರ್ಷಗಳ ನಂತರ ನಡೆಯಲಿರುವ ದೇವಸ್ಥಾನದ ಹಾಗೂ ದೈವಗಳ ಗುಡಿಗೋಪುರಗಳ ನವೀಕರಣ ಹಾಗೂ ಬ್ರಹ್ಮಕಲಶೋತ್ಸದ ಪೂರ್ವಭಾವಿಯಾಗಿ ಅಗಲಿರುವ ಕೆಲಸ ಕಾರ್ಯಗಳು ಶೀಘ್ರವಾಗಿ ನೆರವೇರಲು ಹಾಗೂ ಗ್ರಾಮದ ಮತ್ತು ಭಕ್ತರ ಶ್ರೇಯೋಭಿವೃದ್ಧಿಗೋಸ್ಕರ ಶ್ರೀ ನಾಗಬಿಂಕ ಭಜನಾ ಮಂಡಳಿ ಸದಸ್ಯರಿಂದ ಹಾಗೂ ಪೋಷಕರಿಂದ ದಿನಕ್ಕೆ ಒಬ್ಬರ ನೇತೃತ್ವದಲ್ಲಿ 48 ದಿನಗಳ ಭಜನಾ ಕಾರ್ಯಕ್ರಮವು ನಡೆಯಿತು. ಡಿ. 11 ರಂದು ಭಜನೆಯ ಮಂಗಳೋತ್ಸವ ಕುಣಿತ ಭಜನಾ ಕಾರ್ಯಕ್ರಮ ಹಾಗೂ ರಂಗ ಪೂಜೆ ಸೇವೆ ಆಡಳಿತ ಮೊಕ್ತೇಸರ ರಾಜೀವ್ ಇವರ ನೇತೃತ್ವದಲ್ಲಿ ಜರುಗಿತು.

ಭಜನೋತ್ಸವಕ್ಕೆ ಕಾಶಿಮಠ ವಾರಾಣಾಶಿಯ ಶ್ರೀ ವಿದ್ಯಾಶಂಕರನಂದಾ ಸರಸ್ವತಿ ಗುರೂಜಿ ದೀಪ ಪ್ರಜ್ವಲಿಸಿ ಚಾಲನೆ ನೀಡಿ, ಮಾತನಾಡಿ, ಕುಣಿತ ಭಜನೆಯನ್ನು ನನ್ನ ಜೀವನದಲ್ಲಿ ಪ್ರಥಮವಾಗಿ ನೋಡುತ್ತಿದ್ದೇನೆ. ದೈವಿಕ ಶಕ್ತಿಯನ್ನು ಈ ರೀತಿಯ ಭಜನೆಯಿಂದಲೂ ಅಹವಾನೆ ಮಾಡಿಕೊಳ್ಳಬಹುದು ಎಂಬುದಕ್ಕೆ ಮುಂಡೂರು ಶ್ರೀ ನಾಗಕಲ್ಲುರ್ಟಿ ಕ್ಷೇತ್ರದಲ್ಲಿ ನಡೆದ ಭಜನೋತ್ಸವ ಸಾಕ್ಷಿಯಾಗಿದೆ. ಮಕ್ಕಳಿಗೆ ಭಜನಾ ಸಂಸ್ಕಾರ ಕಲಿಸಬೇಕು. ದೈವ ದೇವರ ಮೇಲೆ ನಂಬಿಕೆ ಬೇಕು ಎಂದು ತಿಳಿಸಿದರು.


ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ ಅವರು ಮಾತನಾಡಿ, ಕುಣಿತ ಭಜನೆಯಿಂದ ಮಕ್ಕಳಲ್ಲಿ ದೈಹಿಕ ಆರೋಗ್ಯದ ಜೊತೆ, ದೇವರ ಮೇಲೆ ಭಕ್ತಿ, ನಂಬಿಕೆಯ ಜಾಗೃತಿ ಮನೋಭಾವ ಬೆಳೆಸುತ್ತದೆ ಎಂದು ತಿಳಿಸಿದರು. ಶ್ರೀ ನಾಗಕಲ್ಲುರ್ಟಿ ಕ್ಷೇತ್ರದ ಆಡಳಿತ ಮೋಕ್ತೇಸರ ರಾಜೀವ್ ಅವರ ಮಾರ್ಗದರ್ಶನದಲ್ಲಿ ಭಜನೋತ್ಸವ ಜರುಗಿತು.ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಧನ್ಯತೆಯನ್ನು ಪಡೆದರು. ಶ್ರೀ ನಾಗಂಬಿಕಾ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಪೂರ್ಣ ಸಹಕಾರ ನೀಡಿದರು.

Related posts

ಬೆಳ್ತಂಗಡಿಯಲ್ಲಿ ಕೆಆರ್‌ಎಸ್ ಪಕ್ಷ ಅಸ್ತಿತ್ವಕ್ಕೆ: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಗುರಿ: ವೇಣುಗೋಪಾಲ್

Suddi Udaya

ಕೊಯ್ಯೂರಿನಲ್ಲಿ ಜಾಗದ ತಕರಾರು; ಕಾರ್ಮಿಕನ ಮೇಲೆ ಹಲ್ಲೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಧರ್ಮಸ್ಥಳ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Suddi Udaya

ಸೇವಾಭಾರತಿಯಿಂದ ಈ ವರ್ಷದ “ಸೇವಾ ಶ್ರೇಷ್ಠ -2024” ಪುರಸ್ಕಾರ:

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಉಜಿರೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷ ಗ್ರಾಮ ಸಭೆ

Suddi Udaya
error: Content is protected !!