25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸರಕಾರದಿಂದ ಮಂಜೂರುಗೊಂಡಿರುವ ಜಾಗವನ್ನು ಸವೆ೯ ನಡೆಸಲು ನಾಗರಿಕರ ಆಕ್ಷೇಪಣೆ: ಶಿಶಿಲ ಗ್ರಾಮಸ್ಥರಿಂದ ಉಪ್ಪಿನಂಗಡಿ ಉಪ ವಲಯಾಣ್ಯಾಧಿಕಾರಿಗೆ ಮನವಿ

ಶಿಶಿಲ: ಕಳೆಂಜದ ಸರ್ವೇ ನಂಬರ್ 309ರ ಸರ್ವೇ ಕಾರ್ಯ, ಶಿಶಿಲ ಭಾಗದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು, ಸರ್ವೇ ಅಧಿಕಾರಿಗಳು ತಮ್ಮ ಪಟ್ಟ ಜಮೀನುಗಳಲ್ಲಿ ಸರ್ವೇ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಬೇಸತ್ತ ಅಲ್ಲಿನ ನಿವಾಸಿಗಳು ಉಪ್ಪಿನಂಗಡಿ ಉಪವಲಯಾರಣ್ಯಧಿಕಾರಿಗೆ ದೂರು ನೀಡಿದ್ದು ದೂರಿನ ಪತ್ರದಲ್ಲಿ ಶಿಶಿಲ ಗ್ರಾಮದ ಹೊಳೆಗಂಡಿ, ದೇನೋಡಿ ಭಾಗದಲ್ಲಿ ಅಲ್ಲಿನ 80 ಕುಟುಂಬಗಳಿಗೆ 1966ರಲ್ಲಿ ಅಕ್ರಮ ಸಕ್ರಮದ ಅಡಿಯಲ್ಲಿ ಜಮೀನು ಮಂಜೂರಾಗಿದ್ದು ಅದು ಅರಣ್ಯದಿಂದ ಕಂದಾಯಕ್ಕೆ ವಿಂಗಡಣೆಯಾಗಿರುತ್ತದೆ. ಆದ್ದರಿಂದ ಸರಕಾರವು ಮಂಜೂರು ಮಾಡಿರುವ ಭೂಮಿಯನ್ನು ಹೊರತುಪಡಿಸಿ ತಮ್ಮ ಅರಣ್ಯ ಭಾಗವನ್ನು ಮಾತ್ರ ಸರ್ವೇ ಮಾಡಬೇಕೆಂಬುದು ನಮ್ಮ ಮನವಿ ಸರಕಾರದಿಂದ ದೇನೋಡಿ ಭಾಗದಲ್ಲಿ ಮಂಜೂರಾಗಿರುವ ಜಮೀನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಪ್ರವೇಶ ಮಾಡಿ ಸರ್ವೇ ಮಾಡಿದ್ದು ಆ ಸರ್ವೇ ಕೂಡ ಅಸಮರ್ಪಕವಾಗಿದೆ.

ಇನ್ನೂ ಮುಂದಿನ ದಿನಗಳಲ್ಲಿ ಶಿಶಿಲ ಭಾಗದಲ್ಲಿ ಸರಕಾರದಿಂದ ಮಂಜೂರು ಗೊಂಡಿರುವ ಜಾಗವನ್ನು ಯಾವುದೇ ರೀತಿ ಸರ್ವೇ ನಡೆಸದಂತೆ ಆಕ್ಷೇಪಣೆ ಇರುತ್ತದೆ ಎಂದು ಉಪ್ಪಿನಂಗಡಿ ಉಪವಲಯಾರಣ್ಯಧಿಕಾರಿಗೆ ಶಿಶಿಲ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

Related posts

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನಡ ಮತದಾನ ಕೇಂದ್ರದಲ್ಲಿ ಮತದಾನ

Suddi Udaya

ಕಲ್ಮಂಜ: ಅಹಲ್ಯಾ ಯಾನೆ ರಮಾ ಚಿಪ್ಲೂಣ್ಕರ್ ನಿಧನ

Suddi Udaya

ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ದೆಹಲಿಯ ಗಣರಾಜ್ಯೋತ್ಸವ: ಉಜಿರೆ ಎಸ್.ಡಿ.ಎಂ ಎನ್.ಸಿ.ಸಿಯ 3 ಕೆಡೆಟ್‌ಗಳ ಆಯ್ಕೆ

Suddi Udaya

ವಿಶ್ರಾಂತ ಶಿಕ್ಷಕ ಮುಂಡಾಜೆ ಶಂಕರ್ ತಾಮನ್ಕರ್ ಅವರಿಂದ ಮಾದರಿ ಕಾರ್ಯಕ್ರಮ

Suddi Udaya

ಕಳೆಂಜ ಅರಣ್ಯ ಇಲಾಖೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮನೆ ನಿರ್ಮಾಣ: ಅಕ್ರಮ ಪ್ರವೇಶ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ: 11 ಜನರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!