ಕನ್ಯಾಡಿಯ ಮಾತೃಶ್ರೀ ಮನೆಯಲ್ಲಿ ಯಕ್ಷಭಾರತಿ ಟ್ರಸ್ಟಿ , ಹವ್ಯಾಸಿ ಕಲಾವಿದ ಶಶಿಧರ.ಕೆ ಅವರ ಷಷ್ಟ್ಯಬ್ಧ ಕಾರ್ಯಕ್ರಮದ ನಿಮಿತ್ತ ಯಕ್ಷಭಾರತಿ ತಂಡದಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ- ಶ್ರೀಕೃಷ್ಣ ತುಲಾಭಾರ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ, ಚೆಂಡೆ ಮದ್ದಳೆಯಲ್ಲಿ ಜಗನ್ನಿವಾಸ ರಾವ್ ಪುತ್ತೂರು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.
ಮುಮ್ಮೇಳದಲ್ಲಿ ಕೃಷ್ಣನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ಸತ್ಯಭಾಮೆಯಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ನಾರದನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ಬಲರಾಮನಾಗಿ ರವೀಂದ್ರ ಶೆಟ್ಟಿ ಬಳೆಂಜ, ರುಕ್ಮಿಣಿಯಾಗಿ ಕುl ವೈಷ್ಣವಿ ಜೆ. ರಾವ್ ಪಾತ್ರ ನಿರ್ವಹಿಸಿದರು. ವಿಘ್ನೇಶ್ವರ ಪ್ರಸಾದ್ ಮತ್ತು ವಿಶ್ವೇಶ್ವರ ಪ್ರಸಾದ್ ಕಲಾವಿದರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಜೀವಿತದ ಅರುವತ್ತು ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಶಿಧರ. ಕೆ ಅವರನ್ನು ಸಂಸ್ಥೆಯ ವತಿಯಿಂದ ಅಭಿವಂದಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಹರಿದಾಸ ಗಾಂಭೀರ ಅಭಿವಂದಿಸಿ ಮಾತನಾಡಿದರು. ಸಂಚಾಲಕ ಮಹೇಶ ಕನ್ಯಾಡಿ ಅಭಿವಂದನಾಪತ್ರ ವಾಚಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆಯವರು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿಗಳಾದ ಕುಸುಮಾಕರ ಕೊತ್ತೋಡಿ, ಹರೀಶ್ ಕೊಳ್ತಿಗೆ, ಯಶೋಧರ ಇಂದ್ರ ಹಾಗೂ ಪತ್ನಿ ಮಮತಾ ಶಶಿಧರ ಪುತ್ರರಾದ ಕಶ್ಯಪ್, ಕೌಶಲ್, ಕೌಸ್ತುಭ ಮತ್ತು ಬಂಧುಮಿತ್ರರು ಉಪಸ್ಥಿತರಿದ್ದರು.











