ಮಚ್ಚಿನ: ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಶ್ರೀ ಈಶ್ವರ ದೇವರ ನೂತನ ಗರ್ಭಗೃಹದ ಶಿಲಾನ್ಯಾಸವು ಬ್ರಹ್ಮಶ್ರೀ ದೇರೆಬೈಲು ಡಾ| ಶಿವಪ್ರಸಾದ್ ತಂತ್ರಿ ಗಳ ನೇತೃತ್ವದಲ್ಲಿ ಡಿ.14 ರಂದು ನಡೆಯಿತು.

ಗರ್ಭ ಗೃಹದ ಶಿಲಾನ್ಯಾಸವನ್ನು ಶ್ರೀ ಕ್ಷೇತ್ರ ಕಟೀಲು ಅನುವಂಶೀಯ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ನೆರವೇರಿಸಿದರು.
ಈ ವೇಳೆ ಶಾಸಕ ಹರೀಶ್ ಪೂಂಜ, ವಿಷ್ಣುಮೂರ್ತಿ ದೇವಸ್ಥಾನ ತೆಂಕಕಾರಂದೂರು ಅನುವಂಶೀಯ ಆಡಳಿತ ಮೊಕ್ತೇಶ್ವರರಾದ ಕೆ ಕೃಷ್ಣ ಸಂಪಿಗೆತ್ತಾಯ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ವೆಂಕಟರಮಣ ದೇವಸ್ಥಾನ ಲಾಯಿಲ ಆಡಳಿತ ಮೊಕ್ತೇಶರರಾದ ವಿವೇಕಾನಂದ ಪ್ರಭು ಯಂ., ಬೆಂಗಳೂರು ಉದ್ಯಮಿಗಳಾದ ಗಿರಿಯಪ್ಪ ಗೌಡ ಪೊಸಂದೊಡಿ, ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಶರರಾದ ಡಾ| ಹರ್ಷ ಸಂಪಿಗೆತ್ತಾಯ ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.
ದೇವಾಲಯದ ಸಿಬ್ಬಂದಿಗಳಾದ ಬಾಲಕೃಷ್ಣ ಭಟ್ ಸ್ವಾಗತಿಸಿದರು.
✍️ವರದಿ ಹರ್ಷ ಬಳ್ಳಮಂಜ











