25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಬೀದಿ ನಾಯಿ ಕಡಿತದ ಮತ್ತು ರೇಬಿಸ್ ರೋಗದ ಬಗ್ಗೆ ಮಾಹಿತಿ

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಬೀದಿ ನಾಯಿ ಕಡಿತದ ಮತ್ತು ರೇಬಿಸ್ ರೋಗದ ಬಗ್ಗೆ ಮಾಹಿತಿ ಕಾರ್ಯಕ್ರಮವು ನಡೆಯಿತು.

ಇತ್ತೀಚೆಗೆ ಬೀದಿ ನಾಯಿಗಳ ದಾಳಿಯಿಂದ ಅನೇಕ ಮಕ್ಕಳು, ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದನ್ನು ಘನನ್ಯಾಯಾಲಯವು ಸುಮೋಟೋ ಕೇಸ್ ದಾಖಲಿಸಿದ್ದು, ಪ್ರತೀ ಇಲಾಖೆಗಳ ಜವಾಬ್ದಾರಿಯನ್ನು ಕೂಡ ನಿಗದಿಪಡಿಸಿದೆ. ನಮ್ಮ ಇಲಾಖೆ ಕೂಡಾ ಸೂಚನೆ ನೀಡಿದ್ದು ಜಾಗೃತಿ ಮೂಡಿಸಿ ವರದಿ ನೀಡುವಂತೆ ಸೂಚಿಸಿದೆ.ಪೋಷಕರ ಎಚ್ಚರಿಕೆ, ಇವುಗಳ ಬಗ್ಗೆ ಜಾಗೃತಿ ಮೂಡಿಸಿ. ಅಲ್ಲದೆ ಶಾಲಾ ಅಕ್ಕ ಪಕ್ಕದಲ್ಲಿ ಬೀದಿ ನಾಯಿಗಳು ಕಂಡುಬಂದರೆ ತಕ್ಷಣ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ, ವೆಟರಿನರಿ ಇಲಾಖೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಅಲ್ಲದೆ, ಉಳಿಕೆಯಾದ ಬಿಸಿಯೂಟ, ತಿಂಡಿ ತಿನಸುಗಳನ್ನು ಶಾಲಾ ವರಾಂಡ ಅಥವಾ ಸುತ್ತ ಮುತ್ತ, ಎಲ್ಲೆಂದರಲ್ಲಿ ಚೆಲ್ಲದಂತೆ ಜಾಗ್ರತೆ ವಹಿಸಿ. ಕೆಲವೊಂದು ನಾಯಿಗಳು ಶಾಲಾ ವರಾಂಡದಲ್ಲೇ ಸುತ್ತುತ್ತಿರುತ್ತದೆ ಒಟ್ಟಾರೆಯಾಗಿ ನಮ್ಮ ಮಕ್ಕಳು ಬೀದಿನಾಯಿಗಳ ಆಕ್ರಮಣಕ್ಕೆ ತುತ್ತಾಗದಿರಲಿ ಎಂದು ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನೀರಿಕ್ಷಣಾಧಿಕಾರಿ ಸ್ವತಂತ್ರ ರಾವ್ ಹಾಗೂ ಮುಂಡಾಜೆ ಪ್ರಾಥಮಿಕ ಆರೋಗ್ಯ ನೀರಿಕ್ಷಣಾಧಿಕಾರಿ ಗೌರೀಶ್ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿದ್ಯಾ ಕಿರಣ್ ನಿಮ್ಮ ಪೋಷಕರಿಗೆ ಈ ಮಾಹಿತಿಯನ್ನು ತಿಳಿಸಿ ಎಂದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕ ರಾಧಾಕೃಷ್ಣ ಉಪಸ್ಥಿತರಿದ್ದರು. ಶಿಕ್ಷಕಿಯಾದ ಉಷಾ ವಂದಿಸಿದರು. ಲಲಿತಾ ಎಂ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಮಚ್ಚಿನ: ಕಲ್ಲಗುಡ್ಡೆ ರಸ್ತೆಯಲ್ಲಿ ತುಂಬಿದ ನೀರು

Suddi Udaya

ಮಹಿಳೆ ಮಗುವಿಗೆ ಮಾನಸಿಕ ಹಿಂಸೆ- ವರದಕ್ಷಿಣೆ ಕಿರುಕುಳ ಆರೋಪ: ಬೆಳಾಲಿನ ಮಹಿಳೆ ನೀಡಿದ ದೂರಿನಂತೆ ಪತಿ, ಮನೆಯವರ ಮೇಲೆ ಕೇಸು

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗಳಿದ್ದ ಲಾರಿ ಪಲ್ಟಿ

Suddi Udaya

ಅಳದಂಗಡಿ: ಸತ್ಯದೇವತೆ ಎಂಟರ್ ಪ್ರೈಸಸ್ ಶುಭಾರಂಭ

Suddi Udaya

ಕಾಂತರಾಜ್ ವರದಿ ಬಿಡುಗಡೆ, ಮುಸ್ಲಿಮ್ ಮೀಸಲಾತಿ ಶೇ.8ಕ್ಕೆ ಏರಿಸಲು ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ಎಂಎಲ್‌ಸಿ ಹರೀಶ್ ಕುಮಾರ್‌ಗೆ ಮನವಿ

Suddi Udaya

ನಿಕಟ ಪೂರ್ವ ರಾಜಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶ್ರೀ ರಾಮಸ್ವಾಮಿ(ವಿಸಿಎನ್ಆರ್ ಗ್ರೂಪ್) ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya
error: Content is protected !!