September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಡಿ 19:ಬೆಳ್ತಂಗಡಿ ವಕೀಲರ ಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ

ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘದ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ 19 ಶುಕ್ರವಾರದಂದು ಚರ್ಚ್ ರಸ್ತೆಯ ಹೋಲಿ ರೆಡಿಮರ್ ಅಡಿಟೋರಿಯಮ್ ನಲ್ಲಿ ಸಂಜೆ 6.30 ಕ್ಕೆ ನಡೆಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ ಹೇಳಿದರು.

ಅವರು ಡಿ 16 ರಂದು ಬೆಳ್ತಂಗಡಿ ವಕೀಲರ ಸಂಘದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನೆರವೇರಿಸಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಸರಕಾರಿ ವಕೀಲರಾದ ಮೆಲ್ವಿನ್ ಪ್ರಕಾಶ್ ನೊರೋನ್ಹಾ,ಬೆಳ್ತಂಗಡಿ ನ್ಯಾಯಾಲಯದ ಪ್ರಿನ್ಸಿಪಾಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ. ಎಮ್. ಎಫ್. ಸಿ ಮನು ಬಿ ಕೆ, ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ. ಎಮ್. ಎಫ್. ಸಿ ನ್ಯಾಯಾಧೀಶರಾದ ವಿಜಯೇಂದ್ರ ಟಿ. ಹೆಚ್, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರಾದ ಕೆ. ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬೆಳ್ತಂಗಡ ತಾಲೂಕಿನ ತಹಶೀಲ್ದಾರರು,DYSP ರೋಹಿನಿ ಸಿ.ಕೆ, ವೃತ್ತ ನಿರೀಕ್ಷಕರು, ಪೋಲಿಸ್ ಸಿಬ್ಬಂದಿ ವರ್ಗ, ಸರಕಾರಿ ಅಧಿಕಾರಿ ವರ್ಗ, ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು, ನ್ಯಾಯಲಯದ ಸಿಬ್ಬಂದಿ ವರ್ಗ ಹಾಗೂ ವಕೀಲ ವೃಂದದ ಕುಟುಂಬದ ಸದಸ್ಯರು ಭಾಗವಹಿಸಲ್ಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗೆ, ಅಶಕ್ತ ಕುಟುಂಬಕ್ಕೆ ಅರ್ಥಿಕ ನೆರವು ಹಸ್ತಾಂತ ಮಾಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.ಸಮಾರಂಭವು ಸಮಯಕ್ಕೆ ಸರಿಯಾಗಿ ಪ್ರಾರಂಭಗೊಂಡು ಮುಕ್ತಾಯಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಮುಮ್ತಾಜ್ ಬೇಗಂ,ಕೋಶಾಧಿಕಾರಿ ಹರ್ಷಿತ್ ಹೆಚ್,ಉಷಾ ಎಂ,ಸಂದೀಪ್ ಡಿಸೋಜಾ ಉಪಸ್ಥಿತರಿದ್ದರು.

Related posts

ಕುತ್ಲೂರು ಸರಕಾರಿ ಉನ್ನತೀಕರಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ: ಅಸಮಪ೯ಕ ಕಾಮಗಾರಿ ನಿರ್ವಹಣೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ

Suddi Udaya

ಮೂಡಿಗೆರೆ ಪಟ್ಟಣದಲ್ಲಿ ಮಾದಕ ವಸ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಬೆಳ್ತಂಗಡಿಯ ಇಬ್ಬರು ಯುವಕರ ಬಂಧನ

Suddi Udaya

ಸುನ್ನೀ ಸಮೂಹ ಸಂಘಟನೆಗಳ ವತಿಯಿಂದ ರಂಝಾನ್ ಕಿಟ್, ಸಾಮೂಹಿಕ ಇಫ್ತಾರ್ ಮೀಟ್

Suddi Udaya

ಮುಂಡಾಜೆ ಸೀಟು-ಅಂಬಡ್ತ್ಯಾರು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತ್ಯು

Suddi Udaya

ಬೆಳ್ತಂಗಡಿ: ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಎಸ್.ಐ.ಟಿ ವಿಚಾರಣೆಗೆ ಹಾಜರು

Suddi Udaya
error: Content is protected !!