September 6, 2026
ಗ್ರಾಮಾಂತರ ಸುದ್ದಿವರದಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯದ ಮನೆಮನೆ ಸಂಪರ್ಕದ ಪ್ರಯುಕ್ತ ಶ್ರೀರಾಮ ಕ್ಷೇತ್ರದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ

ಬೆಳ್ತಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯದ ಅಂಗವಾಗಿ ಮನೆಮನೆ ಸಂಪರ್ಕ ದ ಪ್ರಯುಕ್ತ ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರನ್ನು ಸಂಘದ ಕರ್ನಾಟಕ ದಕ್ಷಿಣದ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್, ಪುತ್ತೂರು ಜಿಲ್ಲಾ ಸಂಘಚಾಲಕ್ ವಿನಯಚಂದ್ರ,ಜಿಲ್ಲಾ ಕಾರ್ಯವಾಹ ನವೀನ್ ಕೈಕಾರ ಬೇಟಿಮಾಡಿ ಸಂಘಟನೆ ಮತ್ತು ಸೇವೆಯ 100ವರ್ಷಗಳ ಸಂಘ ಯಾತ್ರೆಯ ಬಗ್ಗೆ ತಿಳಿಸಿದರು. ಮತ್ತು ಸ್ವಯಂಸೇವಕರು ಸಮಾಜದ ಸಜ್ಜನಶಕ್ತಿಯ ಸಹಕಾರದೊಂದಿಗೆ ಪಂಚ ಪರಿವರ್ತನೆಯ ಐದು ವಿಷಯಗಳ ಕುರಿತಾಗಿ ಮನೆ ಮನೆ ಸಂಪರ್ಕದ ಸಂದರ್ಭ ಸಾಹಿತ್ಯಗಳನ್ನು ನೀಡುವ ಮೂಲಕ ಜನಜಾಗೃತಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಪಂಚ ಪರಿವರ್ತನೆ1)ಸಾಮಾಜಿಕ ಸಾಮರಸ್ಯ,2)ಪರಿಸರ ಸಂರಕ್ಷಣೆ ,3) ಕುಟುಂಬ ಪ್ರಬೋಧನ, 4)’ ಸ್ವ’ ಆಧಾರಿತ ಜೀವನ, 5)ನಾಗರಿಕ ಕರ್ತವ್ಯಪ್ರಜ್ಞೆ ಯ ಬಗ್ಗೆ ವಿವರಿಸಿದರು.ಈ ಸಂದರ್ಭ ಘುಮಂತು ಕಾರ್ಯ ವಿಭಾಗ ಸಹ ಸಂಯೋಜಕ ಸುದರ್ಶನ್ ಕನ್ಯಾಡಿ,ಉಜಿರೆ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ ಉಪಸ್ಥಿತರಿದ್ದರು.ಪೂಜ್ಯ ಸ್ವಾಮೀಜಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯವಾಹ ಡಾ ಜಯಪ್ರಕಾಶ್ ಅವರಿಗೆ ಶಾಲು ಹೊದಿಸಿ ಪ್ರಸಾದ ನೀಡಿ ಆಶೀರ್ವದಿಸಿದರು.

Related posts

ಹತ್ಯಡ್ಕ: ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಮೈರೋಳ್ತಡ್ಕ ಪುತ್ತಿಲ ನಿವಾಸಿ ಕಮಲ ನಿಧನ

Suddi Udaya

ದ.ಕ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಬೆಳ್ತಂಗಡಿಯ ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆ

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲದಿಂದ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ

Suddi Udaya

ನಾಳ: ಶ್ರೀ ದುರ್ಗಾ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ನಿಡ್ಲೆ ಅಗ್ರಿಲೀಫ್ ಸ್ಥಿರ ಉತ್ಪನ್ನ ನಾವೀನ್ಯತೆಗೆ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಗ್ರೀನ್ ಸಾರಥಿ ಪ್ರಶಸ್ತಿ

Suddi Udaya
error: Content is protected !!