32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅನುಗ್ರಹ ಟ್ರೈನಿಂಗ್ ಕಾಲೇಜು ಫೈರ್ ಅಂಡ್ ಸೇಫ್ಟಿ ವಿಭಾಗದ ವಿದ್ಯಾರ್ಥಿಗಳಿಂದ ಅಗ್ನಿಶಾಮಕ ಘಟಕಕ್ಕೆ ಶೈಕ್ಷಣಿಕ ಭೇಟಿ

ಬೆಳ್ತಂಗಡಿ: ಬೆಳ್ತಂಗಡಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಫೈರ್ ಅಂಡ್ ಸೇಫ್ಟಿ ಕೋರ್ಸ್ ಪ್ರಾರಂಭಿಸಿ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಗಿದ್ದು ಈ ಫೈರ್ ಅಂಡ್ ಸೇಫ್ಟಿ ಕೋರ್ಸ್‌ನ ತರಬೇತಿಯ ಭಾಗವಾಗಿ ಡಿ. 16 ರಂದು ಕಾಲೇಜಿನ ವಿದ್ಯಾರ್ಥಿಗಳು ಬೆಳ್ತಂಗಡಿ ಅಗ್ನಿಶಾಮಕ ಘಟಕಕ್ಕೆ ಶೈಕ್ಷಣಿಕ ಭೇಟಿ ನೀಡಿದರು.

ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಮೇಲಿನ ಜವಾಬ್ದಾರಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಎಂ. ಜಿ. ತಲ್ಹತ್ ವಹಿಸಿಕೊಂಡು ಶಿಕ್ಷಣದ ಜೊತೆಗೆ ಪ್ರಾಯೋಗಿಕ ತರಬೇತಿಗೂ ಸಮಾನ ಮಹತ್ವ ನೀಡುವ ಅವರ ನೇತೃತ್ವವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುತ್ತಿದೆ ಎಂದು ಪ್ರಶಂಸಿಸಲಾಯಿತು.

ಲೀಡಿಂಗ್ ಫೈರ್‌ಮ್ಯಾನ್ ಉಸ್ಮಾನ್ ಗರ್ಡಾಡಿ ಅವರು ತಮ್ಮ ವಿಶಾಲ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಗ್ನಿ ನಿಯಂತ್ರಣ ಕ್ರಮಗಳು, ಅಪಾಯ ನಿರ್ವಹಣೆ (Risk Management), ರಿಸ್ಕ್ಯೂ ಕಾರ್ಯಾಚರಣೆಗಳು, ತುರ್ತು ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಫೈರ್ ಅಂಡ್ ಸೇಫ್ಟಿ ಉಪಕರಣಗಳ ಬಳಕೆಯ ಕುರಿತು ನೇರ ಪ್ರಾತ್ಯಕ್ಷಿಕೆ (Live Demonstration) ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಪ್ರಾಯೋಗಿಕ ತರಬೇತಿ ನೀಡಿದರು.

ಫೈರ್ ಅಂಡ್ ಸೇಫ್ಟಿ ವಿಭಾಗದ ಶಿಕ್ಷಕಿ ಶ್ರೀಮತಿ ಅಂಕಿತ, ಹಾಗೂ ಸಂಸ್ಥೆಯ ಮ್ಯಾನೇಜರ್ ಶಮೀಮಾ ನೆರಿಯ ಸಹಕರಿಸಿದರು. ಸಂಸ್ಥೆಯ ನಿರ್ದೇಶಕರಾದ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಮತ್ತು ಅಬ್ದುಲ್ ಖಾದರ್ ನಾವೂರು ಅವರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು.

ಬೆಳ್ತಂಗಡಿ ಅಗ್ನಿಶಾಮಕ ಘಟಕದ ಸಹಾಯಕ ಠಾಣಾಧಿಕಾರಿ ಕೆ. ನೀಲಯ ಗೌಡ, ಅಗ್ನಿಶಾಮಕ ಸಿಬ್ಬಂದಿಗಳಾದ ವೆಂಕಣ್ಣ ಹಂಚಿನಾಳ, ಶ್ರವಣ್ ನಾಯಕ, ಮಲಗೌಡ ಪಾಟೀಲ ಮತ್ತು ಶ್ರೀಶೈಲ ಬಿ. ಕಂಬಿ ಅವರು ಸಹಕರಿಸಿದರು.

Related posts

ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya

ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು.ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಪ್ರಕರಣವನ್ನು ಮರು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಶಾಸಕ ಹರೀಶ್ ಪೂಂಜರಿಂದ ಮನವಿ

Suddi Udaya

ಬೆಳಾಲು ಶ್ರೀಧ.ಮ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ನಾರಾವಿ ಮಾಂಡೋವಿ ಮೋಟಾರ್ ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆಗೆ ವಿಶೇಷ ಕೊಡುಗೆ

Suddi Udaya

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಶ್ರೀ ದೇವರಿಗೆ ವಿಶೇಷ ಪೂಜೆ

Suddi Udaya
error: Content is protected !!