ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಭ್ಯಾಸ್ ಪಿಯು ಕಾಲೇಜು ಹಾಗೂ ಪ್ರಸನ್ನ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಬ್ಬಕ್ಕ ರಾಣಿಯ ವರ್ಷಾಚರಣೆಯ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ತುಳುನಾಡಿನ ಕಡಲ ತಡಿಯ ಉಳ್ಳಾಲವನ್ನು ಆಳುತ್ತಲೇ ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯ ಸಮರ ಸಾರಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎನಿಸಿಕೊ೦ಡ ತುಳುನಾಡ ರಾಣಿ ಅಬ್ಬಕ್ಕನ ಸಾಹಸಗಾಥೆ ಇಡೀ
ಜಗತ್ತಿನ ಇತಿಹಾಸ ಪುಟಗಳಲ್ಲಿ ದಾಖಲುಗೊಂಡಿದ್ದರೂ ಸಹಾ ಭಾರತದ ಇತಿಹಾಸ ಬಿಡಿ, ಕನಿಷ್ಠ ಪಠ್ಯ ಪುಸ್ತಕಗಳಲ್ಲಾದರೂ ದಾಖಲಾಗದಿರುವುದು ಘೋರ ದುರಂತವೆಂದು ಉಪನ್ಯಾಸಕ ಸಾಹಿತಿ ಬಿ.ಎ..ಲೋಕಯ್ಯ ಶಿಶಿಲ ವಿಷಾದ ವ್ಯಕ್ತಪಡಿಸಿದರು.

ಅವರು ಡಿ.15 ರಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಸಂಘ ಮಂಗಳೂರು ಇದರ ವತಿಯಿಂದ ಬೆಳ್ತಂಗಡಿ ಅಭ್ಯಾಸ್ ಪಿಯುಸಿ ಕಾಲೇಜು ಹಾಗೂ ಪ್ರಸನ್ನ ಕಾಲೇಜುಗಳ ಜಂಟಿ ಆಶ್ರಯದಲ್ಲಿ ನಡೆದ ಅಬ್ಬಕ್ಕ ರಾಣಿ ಆಳ್ವಿಕೆಯ 500ನೇ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸರಣಿ ಉಪನ್ಯಾಸ ಮಾಲಿಕಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ತುಳುನಾಡು ಸೇರಿದಂತೆ ಭಾರತದ ಬಹುತೇಕ ರಾಜರು ತಮ್ಮ ಸ್ವಾರ್ಥ ಸಾಧನೆಗೋಸ್ಕರ ಪರಕೀಯರಾದ ಪೋರ್ಚುಗಿಸರೊಂದಿಗೆ ಸೇರಿಕೊಂಡು ತಮ್ಮ ತಮ್ಮ ತಮ್ಮೊಳಗೇ ಪರಸ್ಪರ ಯುದ್ಧ ಕಲಹಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ತುಳುನಾಡು ಸೇರಿದಂತೆ ಭಾರತದ ನೆಲದಲ್ಲಿ ಭದ್ರವಾಗಿ ನೆಲೆಯೂರಲು ಯತ್ನಿಸುತ್ತಿದ್ದ ಆ ಪರಕೀಯ ಪೋರ್ಚುಗೀಸರ ವಿರುದ್ಧ, ತುಳುನಾಡು ನೆಲದ ಓರ್ವ ಹೆಣ್ಣುಮಗಳಾಗಿ ಕೆಚ್ಚೆದೆಯಿಂದ ಹೋರಾಡಿ ಭಾರತದಲ್ಲಿ ಮೊತ್ತ ಮೊದಲು ಸ್ವಾತಂತ್ರ್ಯದ ಕ್ರಾಂತಿ ಕಹಳೆ ಮೊಳಗಿಸಿದ ಕೀರ್ತಿ ರಾಣಿ ಅಬ್ಬಕ್ಕನದ್ದಾಗಿದೆ.

ಪೋರ್ಚುಗೀಸರ ವಿರುದ್ಧ ಹೋರಾಡಲು ಸ್ವತಃ ತನ್ನ ಗಂಡನನ್ನೇ ತ್ಯಜಿಸಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಕಹಳೆ ಮೊಳಗಿಸಿದ ಕಡಲ ತಡಿಯ ಸಿಂ ಹಿಣಿಯಾಗಿದ್ದ ಈ ತುಳುನಾಡ ರಾಣಿ ಅಬ್ಬಕ್ಕನಿಗೆ ಮಾತ್ರ ಭಾರತದ ಇತಿಹಾಸದ ಪುಟಗಳಲ್ಲಾಗಲೀ ಅಥವಾ ಕನಿಷ್ಠ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳಲ್ಲಾಗಲಿ ಯಾವುದೇ ಸ್ಥಾನ ಮಾನ ಸಿಗದಂತಾಗಿರುವುದು ಮತ್ತು ತುಳುನಾಡಿನ ತುಳುವರು ಸೇರಿದಂತೆ ಪ್ರತಿಯೊಬ್ಬ ಭಾರತೀಯನೂ ಸಹ ಈಕೆಯ ಕುರಿತಾಗಿ ಕೃತಘ್ನ ರಾಗಿರುವುದು ಘೋರಾತಿ ಘೋರ ದುರಂತವೆಂದು ಅವರು ಖೇದ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕರಾದ ಡಾ. ಮಾಧವ್ ಎಂ.ಮಾತನಾಡುತ್ತಾ ಅಬ್ಬಕ್ಕ ರಾಣಿ ಆಗಿನ ಕಾಲದಿಂದ ಹಿಡಿದು ಈಗಿನ ಮತ್ತು ಮುಂದಿನ ತಲೆಮಾರಿಗೂ ಸಾರ್ವಕಾಲಿಕ ಪ್ರೇರಕ ಶಕ್ತಿಯಾಗಿ ಉಳಿಯುತ್ತಾಳೆ. ಈ ಕಾರಣಕ್ಕಾಗಿಯೇ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಸಂಘ ಸರಣಿ ಉಪನ್ಯಾಸ ಮಾಲಿಕಾ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿ ಸಮುದಾಯಗಳಲ್ಲಿ ಪ್ರೇರಣೆ ಮೂಡಿಸುವ ಕಾರ್ಯದಲ್ಲಿ ತೊಡಗಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಭ್ಯಾಸ್ ಪಿಯುಸಿ ಕಾಲೇಜಿನ ಚೇರ್ಮನ್ ಕಾರ್ತಿಕೇಯ ಎಂ ಎನ್ ಅವರು ಅಬ್ಬಕ್ಕ ರಾಣಿಯ ಧೈರ್ಯ ಸ್ಥೈರ್ಯ,ಛಲ ಸಾಹಸ, ದಿಟ್ಟತನಗಳು ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು.

ಪ್ರಸನ್ನ ಕಾಲೇಜಿನ ಪ್ರಾಂಶುಪಾಲರಾದ ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಶೃತಿ ಎನ್ ಧನ್ಯವಾದವಿತ್ತರು. ಬಳಿಕ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.

Related posts

ಗುರುವಾಯನಕೆರೆ ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ತೋಟತ್ತಾಡಿ: ಕೃಷಿಕ ದುಗ್ಗಪ್ಪ ಗೌಡ ನಿಧನ

Suddi Udaya

ಭಾರಿ ಮಳೆಗೆ: ಪುತ್ತಿಲ ನಡುಕೇರ್ಯದಲ್ಲಿ ಬರೆ ಕುಸಿತ

Suddi Udaya

ಕಡಿರುದ್ಯಾವರ ಜಿ. ಪಂ. ಹಿ. ಪ್ರಾ ಶಾಲಾ ಎಸ್.ಡಿ.ಎಮ್.ಸಿ ಹಾಗೂ ಪೋಷಕರ ಸಭೆ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಗುರುನಮನ ಕಾರ್ಯಕ್ರಮ

Suddi Udaya

ಕುಕ್ಕೇಡಿ: ಪ್ರಭಾಕರ ಪೂಜಾರಿ ನಿಧನ

Suddi Udaya
error: Content is protected !!