September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಹೊಟೇಲ್ ಕೆಲಸಗಾರ ಶೌಚಾಲಯದಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ : ಹೊಟೇಲ್ ಕಾರ್ಮಿಕ ಶೌಚಾಲಯಕ್ಕೆ ಹೋಗಿ ಶವವಾಗಿ ಪತ್ತೆಯಾದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ರೆಖ್ಯಾ ಗ್ರಾಮದ ಹೊಟೇಲ್ ನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮಲ್ನಾಡ್ ಹೊಟೇಲ್ ನ ಕೆಲಸಗಾರ ಉತ್ತರ ಪ್ರದೇಶ ಮೂಲದ ಹರಿಶಂಕರ್(52) ಎಂಬಾತ ಏ.18 ರಂದು ಸಂಜೆ ಶೌಚಾಲಯಕ್ಕೆ ಹೋಗಿ ವಾಪಸ್ ಬಾರದೆ ಬಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಕೆಲಸಗಾರ ಶೌಚಾಲಯಕ್ಕೆ ಹೋಗಿ ಎಷ್ಟೇ ಸಮಯವಾದರೂ ವಾಪಸ್ ಬಾರದೆ ಇದ್ದಾಗ ಕೆಲಸಗಾರರು ಕಿಟಕಿಯಿಂದ ಇಣುಕಿ ನೋಡಿದಾಗ ಮೃತಪಟ್ಟು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಹೊಟೇಲ್ ಮಾಲೀಕರು ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.ಮಲ್ನಾಡ್ ಹೊಟೇಲ್ ಮಾಲೀಕರಾದ ಮಂಗಳೂರಿನ ಸತೀಶ್ ಎಂಬವರು ಕೆಲಸಗಾರನನ್ನು ಕೆಲಸಕ್ಕೆ ಸೇರಿಸುವ ವೇಳೆ ಸರಿಯಾದ ಯಾವುದೇ ದಾಖಲೆಗಳನ್ನು ಪಡೆಯದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಮೃತಪಟ್ಟ ಕೆಲಸಗಾರನ ಹೆಸರು ಮತ್ತು ರಾಜ್ಯ ಮಾತ್ರ ತಿಳಿದಿದ್ದು ಯಾವ ವಿಳಾಸದವನು ಎಂದು ಈವರೆಗೆ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸರು ಮನೆಮಂದಿಯ ಪತ್ತೆಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Related posts

ಶ್ರೀರಾಮ ಕ್ರೆಡಿಟ್ ಕೋ ಆಪರೇಟ್ ಸೊಸೈಟಿನಲ್ಲಿ ಗ್ರಾಹಕರ ಹಣ ವಂಚನೆ ಪ್ರಕರಣ: ತನಿಖೆಗಾಗಿ ಬ್ಯಾಂಕಿಗೆ ಎಂಟ್ರಿಯಾದ ಸಿಐಡಿ ತಂಡ

Suddi Udaya

ನಾಳೆ (ಎ.9) ವಿದ್ಯುತ್ ನಿಲುಗಡೆ

Suddi Udaya

ಕರಾಟೆ ಚಾಂಪಿಯನ್ಶಿಪ್: ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಶಹೀರ್ ಅನಸ್ ಕುಮಿಟೆ ಯಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ ಪದಕ

Suddi Udaya

ರಿಕ್ಷಾ ಚಾಲಕರ ಅಪತ್ಕಾಲದ ನೆರವಿನ ಯೋಜನೆ ಕ್ಷೇಮ ನಿಧಿ ಉಜಿರೆಯ ಉದ್ಯಮಿ, ಲಕ್ಷ್ಮಿ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್ ಅವರಿಂದ 50 ಸಾವಿರ ದೇಣಿಗೆ ಹಸ್ತಾಂತರ

Suddi Udaya

ಬಾವಿ ಒಳಗೆ ನೀಲಿ ಬಣ್ಣ ನೀರು ಸುತ್ತಮುತ್ತ ಕೆಂಪು ನೀರು

Suddi Udaya

ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ.ಮೌಲ್ಯದ ಚಿನ್ನದ ಬ್ರಾಸ್ ಲೈಟ್: ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಬಳಂಜದ ಯುವಕ,ಉದ್ಯಮಿ ಜಗದೀಶ್ ಪೂಜಾರಿ ಪೆರಾಜೆ

Suddi Udaya
error: Content is protected !!