24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ : ಆಕಾಶಕಾಯಗಳ ವೀಕ್ಷಣೆ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಕಾಶಕಾಯಗಳ ವೀಕ್ಷಣೆಯ ‘ ಸ್ಟಾರಿ ನೈಟ್’ ವಿಶೇಷ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಭೌತಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸುವ ಉದ್ದೇಶದಿಂದ ಸ್ನಾತಕೋತ್ತರ ಕೇಂದ್ರದ ಮುಂಭಾಗದ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಎಸ್.ಡಿ.ಎಂ (ಸ್ವಾಯತ್ತ) ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ. ಕೇಶವ್ ಟಿ ವೀಕ್ಷಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆಕಾಶಕಾಯಗಳ ವಿಸ್ಮತೆಯ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾರ್ಯಕ್ರಮವನ್ನು ಸಂಯೋಜಿಸಿದ ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ರಾಘವೇಂದ್ರ ಎಸ್.
ನಕ್ಷತ್ರ, ನಕ್ಷತ್ರಪುಂಜಗಳು ಸೇರಿದಂತೆ ಗೆಲಕ್ಸಿಗಳು ಹಾಗು ದೂರದರ್ಶಕದ ಕುರಿತಾಗಿ ವಿವರಣೆ ನೀಡಿದರು. ವಿಭಾಗದ ವಿದ್ಯಾರ್ಥಿಗಳಾದ ಹರ್ಷವರ್ಧನ್ ಮತ್ತು ಶ್ರೀಮಾನ್ ಖಗೋಳಶಾಸ್ತ್ರದ ಮೂಲಭೂತ ಅಂಶಗಳನ್ನು ವಿವರಿಸಿದರು.

ವೀಕ್ಷಣಾ ಸಂದರ್ಭದಲ್ಲಿ ಆಕಾಶವು ವಿಶೇಷವಾಗಿ ಸ್ಪಷ್ಟ ಮತ್ತು ತಿಳಿಯಾಗಿದ್ದುದ್ದರಿಂದ ಓರಿಯನ್ ನೆಬ್ಯುಲಾ, ಪ್ಲೆಯೇಡ್ಸ್ ನಕ್ಷತ್ರಪುಂಜ, ಶನಿ ಆಕಾಶಕಾಯಗಳು ವಿಶೇಷವಾಗಿ ಕಾಣಿಸಿಕೊಂಡವು. ಈ ವಿಶೇಷ ಆಕಾಶಕಾಯಗಳ ವೀಕ್ಷಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿವರ್ಗದವರು ಸಕ್ರಿಯವಾಗಿ ಭಾಗವಹಿಸಿದರು.

Related posts

ನಾಳ ದೇವಸ್ಥಾನದಲ್ಲಿ ಭೀಷ್ಮಾರ್ಜುನ ತಾಳಮದ್ದಳೆ

Suddi Udaya

ವೇಣೂರು: ಬಜಿರೆ ಬಾಡಾರು ಕೊರಗಲ್ಲು ಕೊರಗಜ್ಜನ ಗುಡಿಗೆ ಕಿಡಿಗೇಡಿಗಳಿಂದ ಬೆಂಕಿ

Suddi Udaya

ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಪವನ್ ಸಾಲ್ಯಾನ್ ಆಯ್ಕೆ

Suddi Udaya

ಬಾಜಾರು – ಜೋಡುಕಟ್ಟೆ ರಸ್ತೆ ಕೆಸರುಮಯ ಓಡಾಟ ಶೋಚನೀಯ ! : ಹಲವು ವರ್ಷಗಳಿಂದ ದೊರೆಯದ ಕಾಯಕಲ್ಪ

Suddi Udaya

ಕಾಶಿಬೆಟ್ಟುನಲ್ಲಿ ರಸ್ತೆ ಮಧ್ಯೆ ಕೈಕೊಟ್ಟ ಟ್ರಕ್: ತಾಸುಗಟ್ಟಲೆ ವಾಹನ ಬ್ಲಾಕ್

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ವಾಟರ್ ಬೆಡ್ ವಿತರಣೆ

Suddi Udaya
error: Content is protected !!