24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು ಕಥೋಲಿಕ್ ಸಭಾದಿಂದ ‘ಕ್ರಿಸ್ಮಸ್ ಬಂಧುತ್ವ ಉಡುಗೊರೆ ’ ಕಾರ್ಯಕ್ರಮ.

ಮಡಂತ್ಯಾರು: ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಮಡಂತ್ಯಾರು ಘಟಕದಿಂದ ಕ್ರಿಸ್ಮಸ್ ಬಂಧುತ್ವ ಉಡುಗೊರೆ ಕಾರ್ಯಕ್ರಮ ಡಿ.14 ರಂದು ಜರುಗಿತು.

ಸೇ. ಹಾ. ಚರ್ಚಿನ ಪ್ರಧಾನ ಧರ್ಮಗುರುಗಳು ವಂ| ಸ್ವಾಮಿ ಸ್ಟ್ಯಾನಿ ಗೋವಿಯಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕ್ರಿಸ್ತ ಜಯಂತಿ ನಾವು ಡಿ.25 ರಂದು ಆಚರಿಸುತ್ತೇವೆ. ದೇವರು ಬಡವರಾಗಿ ಮಾನವ ರೂಪ ತಾಳಿ ಈ ಧರೆಗೆ ಬಂದದ್ದು ನಮ್ಮನ್ನು ಶ್ರೀಮಂತಗೊಳಿಸಲು. ದೇವರು 2025 ವರ್ಷದ ಹಿಂದೆ ಕಿಸ್ತನ ಜನನದ ಸಂದೇಶ ಸಾರಲು ಕುರುಬರನ್ನು ಮತ್ತು ನಕ್ಷತ್ರವನ್ನು ಮಾಧ್ಯಮವಾಗಿ ಉಪಯೋಗಿಸಿದರು. ಕ್ರಿಸ್ಮಸ್ ಸರ್ವರ ಹಬ್ಬ, ಎಲ್ಲರೂ ಸಂತೋಷ ಪಡಬೇಕು” ಎಂದು ಹೇಳಿದರು.

ಮುಖ್ಯ ಅತಿಥಿ ಮಾಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾತನಾಡಿ ಮದರ್ ತೆರೆಜಾರವರು ಮಾನವ ಸೇವೆಯ ಮುಖಾಂತರ ದೇವರ ಸೇವೆ ಮಾಡಿದರು. ಡಿ.25 ದೇವ ಮಾನವ ಹುಟ್ಟಿದ ದಿನ. ಜನನ-ಮರಣ ಅದರ ಮಧ್ಯೆ ಜೀವನ. ನಮ್ಮಲ್ಲಿ ಒಂದೇ ಜಾತಿ, ಒಂದೆ ಮತ, ಒಂದೇ ದೇವರು ಈ ಕಲ್ಪನೆ ಇರಬೇಕು ಎಂದು ಹೇಳಿದರು.

ಯುನೈಟೆಡ್ ಫ್ರೆಂಡ್ಸ್, ಮಾಲಾಡಿ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ ಕ್ರಿಸ್ಮಸ್ ಕೇವಲ ಕ್ರಿಸ್ತರ ಹಬ್ಬ ಅಲ್ಲ, ಎಲ್ಲರ ಹಬ್ಬ. ಇದೊಂದು ಸುಂದರವಾದ ಕಾರ್ಯಕ್ರಮ. ಲೋಕದಲ್ಲಿ ಶಾಂತಿ ಸೌಹಾರ್ದತೆ ಮಾತ್ರವಲ್ಲ ‘ಬಂಧುತ್ವ’ ಸಹ ಮುಖ್ಯವಾಗಿರಬೇಕು ಎಂದು ತಿಳಿಸಿದರು.


ಮೈಸೂರು ಜಿ. ಕೆ. ಟಯರ್ಸ್‌ನ ಮಾಜಿ ಮ್ಯಾನೇಜರ್ ಕ್ಲಿಫರ್ಡ್ ಜೇಮ್ಸ್ ಡಿಸೋಜಾ, ಕ. ಸಭಾ ಮಂಗ್ಳುರ್ ಪ್ರದೇಶ್ ಉಪಾಧ್ಯಕ್ಷ ಲಿಯೋ ರಾಡ್ರಿಗಸ್ ಶುಭ ಹಾರೈಸಿದರು. ಸರ್ವ ಧರ್ಮಿಯರಿಗೆ ಕ್ರಿಸ್ಮಸ್ ಉಡುಗೊರೆ ನೀಡಿ ಗೌರವಿಸಲಾಯ್ತು.
ವೇದಿಕೆಯಲ್ಲಿ ವಿನ್ಸೆಂಟ್ ಡಿಸೋಜಾ, ಜೆರಾಲ್ಡ್ ಮೊರಾಸ್, ಶ್ರೀಮತಿ ಸೆಲೆಸ್ತಿನ್ ಡಿಸೋಜಾ ಉಪಸ್ಥಿತರಿದ್ದರು. ವಿನ್ಸೆಂಟ್ ಡಿಸೋಜಾ ಸ್ವಾಗತಿಸಿದರು, ರಿಚಾರ್ಡ್ ಮೊರಾಸ್ ವಂದಿಸಿದರು. ವಿನ್ಸೆಂಟ್ ಮೊರಾಸ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಐಟಿ ಪೆಸ್ಟ್ ನಲ್ಲಿ ಶ್ರೀ ಗುರುದೇವ ಕಾಲೇಜು ಸಮಗ್ರ ಚಾಂಪಿಯನ್

Suddi Udaya

ದ.ಕ ಜಿಲ್ಲಾ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ

Suddi Udaya

ಆರಂಬೋಡಿ: ರಸ್ತೆಯ ಬದಿ ನಿಲ್ಲಿಸಿದ ಬೈಕ್ ಕಳವು

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ‌ ಸ್ಥಾನ: ಸೈಂಟ್ ಮೆರೀಸ್ ಆಂ.ಮಾ. ಶಾಲಾ ವಿದ್ಯಾರ್ಥಿನಿ ಸಂಜನಾ ಎಂ.ಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕಲ್ಮಂಜ: ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದಲ್ಲಿ ಸೈನಿಕರ ಸುರಕ್ಷತೆಗಾಗಿ ವಿಪ್ರಬಾಂಧವರಿಂದ ರುದ್ರಪಾರಾಯಣ

Suddi Udaya

ಮೂರು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣ ಪತ್ತೆ: ಪಿಕಪ್ ಸಹಿತ ವಾಹನದಲ್ಲಿದ್ದ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರು ವಶ

Suddi Udaya
error: Content is protected !!