25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳೆ ವಿಮೆ ರೈತರ ಖಾತೆಗೆ ಜಮೆಯಾಗದೆ ತೊಂದರೆ : ಹರೀಶ್ ಸಾಲಿಯಾನ್ ಮೋರ್ತಾಜೆ

ಬೆಳ್ತಂಗಡಿ: ಅಡಿಕೆ ಮತ್ತು ಕಾಳುಮೆಣಸಿಗೆ ಬೆಳೆ ವಿಮೆ ಪರಿಹಾರ ಕಡಿಮೆ ಮೊತ್ತ ಪಾವತಿಯಾಗುತ್ತಿದ್ದು, ಬೆಳೆಗಾರರನ್ನು ಕಂಗಲಾಗಿಸಿದೆ. ಎರಡು ವರ್ಷ ಅತೀ ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿದ್ದರೂ ಕಡಿಮೆ ಪರಿಹಾರ ನೀಡುತ್ತಿರುವುದು ರೈತರಲ್ಲಿ ಗೊಂದಲ ಉಂಟು ಮಾಡಿದೆ. ನಮ್ಮ ಬಂಗಾಡಿ ಆಸುಪಾಸಿನಲ್ಲಿ 90% ಬೆಳೆವಿಮೆ ಬಾರದೆ ರೈತರು ತೊಂದರೆಯಾಗಿದೆ. ಕೂಡಲೇ ಸರಕಾರ ಬೆಳೆವಿಮೆ ರೈತರಿಗೆ ನೀಡಬೇಕು ಎಂದು ಬಂಗಾಡಿ ಸೊಸೈಟಿ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ ಸರಕಾರವನ್ನು ಒತ್ತಾಯಿಸಿದ್ದಾರೆ.

ಅಡಿಕೆ ಬೆಳೆಗಾರರು ಅಡಿಕೆ ಕೃಷಿಗೆ ಬಂದಿರುವ ಎಲೆ ಚುಕ್ಕಿ ರೋಗ, ಅತೀವ ಗಾಳಿ, ಮಳೆ, ಕೊಳೆ ರೋಗ, ಬೆಂಕಿ ರೋಗ, ಪ್ರಕೃತಿ ವಿಕೋಪದಿಂದ ಇಳುವರಿ ಕಮ್ಮಿ ಆಗಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಕಾಳುಮೆಣಸು ಸಮಸ್ಯೆ ಕೂಡ ಹೇಳತೀರದು, ಈ ವರ್ಷ ಹೆಚ್ಚಿನ ರೈತರಿಗೂ ಇನ್ನೂ ಬೆಳೆ ವಿಮೆ ಬ್ಯಾಂಕ್ ಖಾತೆಗೆ ಬಂದಿರುವುದಿಲ್ಲ.ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮದ ರೈತ ಸದಸ್ಯರಿಗೆ ಬೆಳೆವಿಮೆ ಬಂದರೂ ತಾರತಮ್ಯ ಮಾಡಲಾಗಿದೆ. ಆದಷ್ಟು ಬೇಗ ಈ ಗೊಂದಲ ನಿವಾರಿಸಿ ವಾರದ ಒಳಗೆ ರೈತರ ಖಾತೆಗೆ ಬೆಳೆ ವಿಮೆ ಜಮೆ ಮಾಡಬೇಕು ತಪ್ಪಿದ್ದಲ್ಲಿ ವಿಮಾ ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ ತಿಳಿಸಿದ್ದಾರೆ.

Related posts

ಕೇಳದಪೇಟೆ ಸ.ಹಿ.ಪ್ರಾ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಬೆಳ್ತಂಗಡಿ ಕಚೇರಿಗೆ ಆಗಮಿಸಿದ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ

Suddi Udaya

ಉಜಿರೆ: ಧರ್ಮಜಾಗೃತಿ ಸಮಿತಿಯ ಪ್ರಧಾನ ಸಂಚಾಲಕರಾಗಿ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಆಯ್ಕೆ

Suddi Udaya

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ (ನಿ.): ಅಧ್ಯಕ್ಷರಾಗಿ ರಂಜನ್ ಜಿ. ಗೌಡ, ಉಪಾಧ್ಯಕ್ಷರಾಗಿ ಶಿವಕಾಂತ ಗೌಡ

Suddi Udaya

ಅಳದಂಗಡಿ: ವಯೋವೃದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

Suddi Udaya

ಲಾಯಿಲ ಗ್ರಾಮ ಪಂಚಾಯತ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!