ಬೆಳ್ತಂಗಡಿ: ಉಜಿರೆ ಗ್ರಾಮದ ಬದನಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಅಮೃತ ಮಹೋತ್ಸವ ಆಚರಣೆ ಸಮಾರಂಭ ಹಾಗೂ ಸುಜ್ಞಾನ ಸಭಾಂಗಣ ಲೋಕಾರ್ಪಣೆ ಡಿ.21 ಮತ್ತು 22 ರಂದು ನಡೆಯಲಿದೆ.
ಡಿ. 21ರಂದು ಉದ್ಘಾಟನಾ ಸಮಾರಂಭದಲ್ಲಿ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಧ್ವಜಾರೋಹಣ ನೆರವೇರಿಸುವರು, ಬಳಿಕ ಸುಜ್ಞಾನ ಸಭಾಂಗಣ ಲೋಕಾರ್ಪಣೆ ಹಾಗೂ ಅಮೃತ ಪಥ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ.
ಸಭಾ ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಘನ ಉಪಸ್ಥಿತಿಯಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿರವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಸ್. ಗೌರವ ಉಪಸ್ಥಿತರಿರುವರು, ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿರುವರು. ರಾಜ್ಯಸಭಾ ಸದಸ್ಯ ಡಾ| ಡಿ.ವೀರೇಂದ್ರ ಹೆಗ್ಗಡೆ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಹಾಗೂ ಕಿಶೋರ್ ಕುಮಾರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಉಜಿರೆ ಗ್ರಾ.ಪಂ.ಅಧ್ಯಕ್ಷೆ ಉಷಾಕಿರಣ್ ಕಾರಂತ್ ಗಣ್ಯ ಅತಿಥಿಗಳಾಗಿ ಭಾಗವಹಿಸುವರು.
ಎಸ್‌ಕೆಡಿಆರ್‌ಡಿಪಿ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಉಜಿರೆ ಬೆನಕ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕ ಡಾ| ಗೋಪಾಲಕೃಷ್ಣ ಭಟ್, ವೇದಸಾಯಿ ಪ್ರೇಮ್ ಮಂಗಳೂರು ಹಾಗೂ ಲ್ಯಾಂಡ್ ಟ್ರೇಡರ್ಸ್, ಬಿಲ್ಡರ್ಸ್ ಮತ್ತು ಡೆವಲಪರ್‌ನ ಕೆ.ಶ್ರೀನಾಥ್ ಹೆಬ್ಬಾರ್ ಸಹಿತ ಮತ್ತಿತರರು ಭಾಗವಹಿಸುವರು.
ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ:
ಡಿ.21 ರಂದು ರಾತ್ರಿ 7ಕ್ಕೆ ಬದನಾಜೆ ಸುಜ್ಞಾನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮಯ್ಯ ಗೌಡ ಅಧ್ಯಕ್ಷತೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯಲಿದೆ.
ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಕೆ.ಮೋಹನ್ ಕುಮಾರ್ ಪ್ರಧಾನ ಭಾಷಣ ಮಾಡಲಿದ್ದಾರೆ. ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಶೇಖ್ ಲತೀಫ್, ಡಾ.ಪಿ. ದಯಾನಂದ ಪೈ, ಪಿ. ಸತೀಶ್ ಪೈ.ಸ.ಪ್ರ.ದ. ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮಹಮ್ಮದ್ ಇಕ್ಬಾಲ್, ಕುಂದಾಪುರ ಸ.ಪ್ರ.ದ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರೋಹಿಣಿ ಗುರುಪ್ರಸಾದ್, ಉಜಿರೆ ವಿಶಾಲ್ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ವಲೇರಿಯನ್ ಡಿಸೋಜ, ನಿವೃತ್ತ ಶಿಕ್ಷಣ ಸಹಾಯಕ ಬಾಬು ಗೌಡ ಬಾಜಿಮಾರು, ಬೆಳಾಲು ಸಿ.ಎ. ಬ್ಯಾಂಕ್ ನಿರ್ದೇಶಕ ಪ್ರವೀಣ್ ವಿಜಯ್ ಹಾಗೂ ಎಸ್‌ಡಿಎಂಸಿ ಮಾಜಿ ಉಪಾಧ್ಯಕ್ಷೆ ಬಬಿತಾ ಮೋರಾಸ್ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ:
ಡಿ.22 ರಂದು ಸಂಜೆ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಗಿರಿರಾಜ ಬಾರಿತ್ತಾಯ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವಾರಂ, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ.ಪುಷ್ಪಗಿರಿ, ಸಂಸ್ಕಾರ ಭಾರತಿ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್., ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಹೆಚ್‌ಆರ್ ಚಿತ್ತಾರ ಹಾಗೂ ಪಿಲ್ಯ ಶಾಲೆಯ ಜಿಪಿಟಿ ಶಿಕ್ಷಕಿ ಸುನಂದ ಭಾಗವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಡಿ.21 ರಂದು ಶಾಲೆಯಲ್ಲಿ ಶಿಕ್ಷಕರಾಗಿ ಸಲ್ಲಿಸಿದ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗೌರವಾರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 2-೦೦ರಿಂದ ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಸಂಜೆ ಗಂಟೆ 6-೦೦ರಿಂದ ಶ್ರೀ ಲಕ್ಷö್ಮಣ ಗೌಡ ಬೆಳಾಲು ಹಾಗೂ ಪ್ರಭಾಕರ ನಾಯ್ಕ ಮಾಪಾಲರ ಮಾರ್ಗದರ್ಶನದಲ್ಲಿ ಬದನಾಜೆ ಶಾಲಾ ಮಕ್ಕಳ ಅಭಿನಯದಲ್ಲಿ ಪೌರಾಣಿಕ ಯಕ್ಷಗಾನ ಕಥಾಭಾಗ ಶ್ರೀ ಕೃಷ್ಣ ಲೀಲಾಮೃತಮ್ ಹಾಗೂ ಸಂಜೆ ಎಸ್‌ಡಿಎಂ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿ.22 ರಂದು ಶಾಲೆಯಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳಿಗೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಿಗೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಸೇವೆ ಪಡೆದುಕೊಂಡ ಹಿರಿಯ ವಿದ್ಯಾರ್ಥಿಗಳಿಗೆ, ಕ್ರೀಡೆ ಮತ್ತು ಶೈಕ್ಷಣಿಕವಾಗಿ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 7 ಗಂಟೆಗೆ ಲ.ಕಿಶೋರ್ ಡಿ. ಶೆಟ್ಟಿಯವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಅಭಿನಯಿಸುವ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಬಿಂದಾಸ್ ಪಾತ್ರದಲ್ಲಿ ತುಳು ಹಾಸ್ಯಮಯ ನಾಟಕ ಆಂಟೀ ಬೊಕ್ಕ ಅಂಕಲ್ ಪ್ರದರ್ಶನಗೊಳ್ಳಲಿದೆ.











