ಬೆಳ್ತಂಗಡಿ:ತಾಲೂಕಿನ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾದ ಪವರ್ ಆನ್ ಸಂಸ್ಥೆಯ 2026 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಯನ್ನು ದಯಾ ವಿಶೇಷ ಮಕ್ಕಳ ಪಾಲನ ಕೇಂದ್ರ ವಿಮುಕ್ತಿ ಕೊಯ್ಯೂರು ಇಲ್ಲಿ ಡಿ. 17ರಂದು ಮಾಡಲಾಯಿತು.
ಕ್ಯಾಲೆಂಡರ್ ಬಿಡುಗಡೆಯನ್ನು ದಯಾ ವಿಶೇಷ ಮಕ್ಕಳ ಪಾಲನ ಕೇಂದ್ರದ ನಿರ್ದೇಶಕರಾದ ಫಾದರ್ ವಿನೋದ್ ಮಸ್ಕರೇನಸ್ ನೇರವೇರಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ದಯಾ ಶಾಲಾ ನಿರ್ವಹಣಾ ಅಧಿಕಾರಿ ಮೇರಿನ್,ಪವರ್ ಆನ್ ಸಂಸ್ಥೆಯ ಮಾಲಕರು ಶೀತಲ್ ಜೈನ್- ಮಾನಸ ಶೀತಲ್ ಜೈನ್,ಸುದೀರ್ ಜೈನ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.











