25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

ಬೆಳಾಲು : ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಇದರ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ ಸೇವೆಯು ಡಿಸೆಂಬರ್ 24 ಮತ್ತು 25 ರಂದು ನಡೆಯಲಿದ್ದು , ಆ ಸಲುವಾಗಿ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಧರ್ಮಸ್ಥಳ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಸಮಿತಿಯ ಸದಸ್ಯರು ಭೇಟಿ ನೀಡಿ ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ನೀಡಲಾಯಿತು.

ಈ ಸಮಯದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಗೌಡ, ಅಸ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಳ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ,ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ, ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಲಿಂಗಪ್ಪ ಪೂಜಾರಿ ಬನಂದೂರು, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರು ಮಹಿಳಾ ಸಮಿತಿ ಗೌರವಾಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳಾಲು ಇದರ ಗೌರವಾಧ್ಯಕ್ಷರಾದ ಶಿವಕುಮಾರ ಬಾರಿತ್ತಾಯ, ಸೀತಾರಾಮ್ ಬೆಳಾಲು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Related posts

ಮಚ್ಚಿನ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ

Suddi Udaya

ಗುರುವಾಯನಕೆರೆ: ದ.ಕ. ಜಿಲ್ಲಾ ಸಹಕಾರ ಭಾರತಿ ಮಹಿಳಾ ಅಭ್ಯಾಸ ವರ್ಗ

Suddi Udaya

ಆಪರೇಷನ್ ಸಿಂಧೂರ: ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ

Suddi Udaya

ಬಂದಾರು: ಕುಂಟಾಲಪಲ್ಕೆ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಪುನರ್ ರಚನೆ

Suddi Udaya

ಬೆಳಾಲು: ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸರ ದಾಳಿ

Suddi Udaya

ಕೊಕ್ರಾಡಿ: ಅರಣ್ಯ ಇಲಾಖೆಯವರು ತೋಟದಲ್ಲಿಟ್ಟಿದ್ದ ಬೋನಿಗೆ ಬಿದ್ದ ಚಿರತೆ

Suddi Udaya
error: Content is protected !!