25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯಿಂದ ಉದ್ಯಮದೊಂದಿಗೆ ಸಮಾಜಮುಖಿ ಸೇವೆ:

ಬೆಳ್ತಂಗಡಿ:ಬೆಳ್ತಂಗಡಿಯಲ್ಲಿ ಕಳೆದ 10 ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಒಳ್ಳೆಯ ಸೇವೆ ನೀಡುತ್ತಿರುವ ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಸ್ಕೀಮ್ವನ ಸೀಸನ್ 6ರ ಯಶಸ್ವಿ ಮುಕ್ತಾಯದೊಂದಿಗೆ ಮತ್ತೆ ಸೀಸನ್ 7 ರ ಜೊತೆಗೆ ನಿಮ್ಮಮುಂದೆ ಬರಲಿದ್ದೇವೆ ಎಂದು ಪವರ್ ಆನ್ ಸಂಸ್ಥೆಯ ಮಾಲಕರಾದ ಶೀತಲ್ ಜೈನ್ ತಿಳಿಸಿದರು.

ನಮ್ಮ ಸಂಸ್ಥೆಯ ಮಹತ್ತರವಾದ ಆಶಯವನ್ನು ನಿಮಗೆ ಹೇಳಲೇಬೇಕು ನಾವು ಯಾವ ಯೋಜನೆಯನ್ನು ಶುರು ಮಾಡಿದರೂ ಅದನ್ನು ಮಧ್ಯದಲ್ಲಿ ನಿಲ್ಲಿಸುವಂತಹ ಯಾವುದೇ ಯೋಚನೆ ನಮ್ಮಲ್ಲಿಲ್ಲ ಮತ್ತು ಹಾಗೆ ಯಾವತ್ತೂ ಆಗೋದಿಲ್ಲ.ಪ್ರತೀ ಸೀಸನನ್ನು ಗ್ರಾಹಕರ ಸಂಪೂರ್ಣ ವಿಶ್ವಾಸದೊಂದಿಗೆ, ನಿಗದಿತ ರೀತಿಯಲ್ಲಿ ಮುಗಿಸಿ, ಮತ್ತೆ ಹೊಸ ಯೋಜನೆಯನ್ನು ಆರಂಭಿಸುತ್ತಿದ್ದೇವೆ. ಅವಧಿ ಹೆಚ್ಚಾಯಿತು, ದೊಡ್ಡ ದೊಡ್ಡ ಬಹುಮಾನ ಇಲ್ಲ ಅಂತ ನಿಮ್ಮಲ್ಲೊಂದು ಪ್ರಶ್ನೆ ಇರಬಹುದು. ಆದರೆ ಬೆಳ್ತಂಗಡಿ ಮತ್ತು ಗ್ರಾಮೀಣ ಭಾಗದ ಜನರ ನಿಜವಾದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು,ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ನೋಡಿ ನಮ್ಮ ಯೋಜನೆಯಲ್ಲಿ ಬಹುಮಾನಗಳನ್ನು ನಿಗದಿ ಪಡಿಸುತ್ತೇವೆ. ಪ್ಲಾಟ್, ಕಾರ್ ಗಳಂತಹ ದೊಡ್ಡ ಗಿಫ್ಟ್ ಇಡುವುದಿಲ್ಲ ಅದಕ್ಕೆ ಕಾರಣ- ಈ ರೀತಿಯ ದೊಡ್ಡ ಗಿಫ್ಟ್ ಗಳು ಕೇವಲ ಒಬ್ಬರಿಗೆ ಹಂಚಿ ಹೋಗುವುದೇ ಆಗಿದೆ. ಹಾಗಾಗಿ, ಅದೇ ಮೌಲ್ಯದ ಬೇರೆ ಗುಣಮಟ್ಟದ ವಸ್ತುಗಳನ್ನು ಹೆಚ್ಚಿನ ಜನರಿಗೆ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವುದೇ ನಮ್ಮಗುರಿಯಾಗಿದೆ ಎಂದವರು ತಿಳಿಸಿದ್ದಾರೆ.

ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ಸಾಮಾನ್ಯ ಕುಟುಂಬಗಳುಗೂ ಉಪಯೋಗವಾಗುವಂತಹ ಯೋಜನೆಯನ್ನು ರೂಪಿಸುತ್ತೇವೆ. ಜನಸಾಮಾನ್ಯರಿಗೆ ಯಾವುದೇ ಒತ್ತಡವಿಲ್ಲದೆ ಸೇರಬಹುದಾದ ಹಾಗೂ ನಮ್ಮಿಂದ ಮುಂದುವರಿಸಿಕೊಂಡು ಹೋಗಬಹುದಾದ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನಮ್ಮ ಉದ್ದೇಶ – ಹೆಚ್ಚು ಜನ ಭಾಗವಹಿಸಬೇಕು, ಪ್ರತಿಯೊಬ್ಬರೂ ಗೆಲ್ಲುವ ಅವಕಾಶ ಹೊಂದಿರಬೇಕು! ಆದ್ದರಿಂದ ಸೀಸನ್ 7 ರಲ್ಲಿ ಕೂಡ ಹಾಗೇಯೇ ಯೋಚಿಸಿದ್ದೇವೆ. ಜನರ ವಿಶ್ವಾಸವೇ ಪವರ್ ಆನ್ ನ ಶಕ್ತಿ. ನಾವು ಆರಂಬಿಸುತ್ತಿರುವ ಲಕ್ಕಿ ಸ್ಟಾರ್ ಸ್ಕೀಂ ಸೀಸನ್ 7-ನಿಮಗಾಗಿ, ನಿಮ್ಮ ಮನೆಯ ಸಂತೋಷಕ್ಕಾಗಿ, ನಿಮ್ಮ ವಿಶ್ವಾಸಕ್ಕೆ ನಮ್ಮಸೇವೆ ಎಂದು ಶೀತಲ್ ಜೈನ್ ತಿಳಿಸಿದರು.

Related posts

ನಾಲ್ಕೂರು: ಭಾರಿ ಮಳೆಗೆ ಕುರೆಲ್ಯ ರಾಜೇಂದ್ರ ಶೆಟ್ಟಿಯವರ ಮನೆಗೆ ಬರೆ ಕುಸಿದು ಹಾನಿ: ಬಿಜೆಪಿ ಬೆಳ್ತಂಗಡಿ ಮಂಡಲದಿಂದ ಭೇಟಿ

Suddi Udaya

ತಾಲೂಕು ಮಟ್ಟದ ಚದುರಂಗ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಡಿ.20-21: ಮಡಂತ್ಯಾರ್ ನಲ್ಲಿ ಕ್ಯಾಂಪೋರಿ 2025- 26

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮತ್ತು ವಾಣಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ 

Suddi Udaya

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಮಸ್ಜಿದ್ ಮೇಲಂತಸ್ತಿನ ಕಾಮಗಾರಿಗೆ ಚಾಲನೆ

Suddi Udaya
error: Content is protected !!