July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಿ.21: ಜಂಇಯ್ಯತುಲ್ ಉಲಮಾ ಮತ್ತು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಸಹಯೋಗದಲ್ಲಿ ಮದ್ದಡ್ಕದಲ್ಲಿ ಬೃಹತ್ ಸಮಸ್ತ ಆದರ್ಶ ಪ್ರಚಾರ ಸಮ್ಮೇಳನ

ಬೆಳ್ತಂಗಡಿ: ಪರಿಶುದ್ದ ಇಸ್ಲಾಮಿನ ಆದರ್ಶವನ್ನು ಯಥಾಸ್ಥಿತಿಯಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ಕೇರಳದ ಉಲಮಾ ನೇತಾರರು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಎಂಬ ಸಂಘಟನೆಯನ್ನು 1926ರಲ್ಲಿ ಆರಂಭಿಸಿದರು. ಈ ಸಂಘಟನೆಯು ಇದೀಗ ನೂರನೇ ವರ್ಷಕ್ಕೆ ದಾಪುಗಾಲಿಡುತ್ತಿದೆ. ಇದರ ಭಾಗವಾಗಿ ಕಾಸರಗೋಡಿನ ಕುಣಿಯ ಎಂಬಲ್ಲಿ 2026 ಫೆಬ್ರವರಿ 2, ರಿಂದ 8 ವರೆಗೆ 100 ನೇ ವಾರ್ಷಿಕ ಮಹಾಸಮ್ಮೇಳನವು ನಡೆಯಲಿದೆ. ಅದರ ಪ್ರಚಾರಾರ್ಥ ಬೆಳ್ತಂಗಡಿ ತಾಲೂಕು ಜಂಇಯ್ಯತುಲ್ ಉಲಮಾ ಮತ್ತು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಸಹಯೋಗದಲ್ಲಿ ಮದ್ದಡ್ಕದಲ್ಲಿ ಡಿ.21 ರಂದು ಸಂಜೆ 4 ಗಂಟೆಗೆ ಬೃಹತ್ ಸಮಸ್ತ ಆದರ್ಶ ಪ್ರಚಾರ ಸಮ್ಮೇಳನ ನಡೆಯಲಿದೆ ಎಂದು ವೈಸ್ ಚೆಯರ್ಮೇನ್ ನಝೀರ್ ಅಝ್ಹರಿ ತಿಳಿಸಿದ್ದಾರೆ.

ಅವರು ಡಿ.19ರಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾರ್ಯಕ್ರಮದ ಮೊದಲಿಗೆ ಕಿನ್ನಿಗೋಳಿಯಿಂದ ಸಂಜೆ 3 ಗಂಟೆಗೆ ರ‍್ಯಾಲಿ  ಆರಂಭಗೊಳ್ಳಲಿದೆ. ತ್ವಾಹ ತಂಙಳ್ ಬೆಳ್ತಂಗಡಿಯವರಿಂದ ಪಣಕಜೆ ಮಕಾಂ ಝಿಯಾರತ್ ಮೂಲಕ ಆರಂಭಗೊಳ್ಳಲಿದೆ. ಮಧ್ಯಾಹ್ನ 2 ಗಂಟೆಗೆ SKSBV ಬೆಳ್ತಂಗಡಿ ರೇಂಜ್ ತಹ್ದೀಸ್ ಮೀಟ್ ವಿಧ್ಯಾರ್ಥಿ ಸಂಗಮದಲ್ಲಿ ಮಜೀದ್ ದಾರಿಮಿಯವರು ತರಗತಿ ನಡೆಸಲಿದ್ದಾರೆ. ನಂತರ ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯ ವಿಖಾಯ ಸಂಗಮ ನಡೆಯಲಿದೆ.ಕಿನ್ನಿಗೋಳಿಯಿಂದ ನಡೆಯುವ ಪ್ರಚಾರ ಜಾಥಾಕ್ಕೆ ಮುಂಡೂರು ತಂಙಳ್ ಚಾಲನೆಯನ್ನು ನೀಡಲಿದ್ದಾರೆ. ಮಿತ್ತಬೈಲ್ ಇರ್ಷಾದ್ ದಾರಿಮಿ ರ‍್ಯಾಲಿ  ಉದ್ಘಾಟನೆಯನ್ನು ಮಾಡಲಿದ್ದಾರೆ. ಸದಖತುಲ್ಲಾ ದಾರಿಮಿ, ಶಂಸುಧ್ಧೀನ್ ದಾರಿಮಿ,ನೌಶಾದ್ ಅಝ್ಹರಿ,ಅಝೀಝ್ ಅಶ್ಶಾಫಿ,ಬಶೀರ್ ದಾರಿಮಿ, ಇಸ್ಮಾಯಿಲ್ ತಂಙಳ್, ನೌಶಾದ್ ಮದ್ದಡ್ಕ, ಝುಬೈರ್ ಕಕ್ಕಿಂಜೆ ರಾಲಿಯನ್ನು ನಿಯಂತ್ರಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯ ಅಧ್ಯಕ್ಷ ಅಬ್ದುರ್ರಝಾಕ್ ದೂಂಧಮಾಕ ಅಧ್ಯಕ್ಷತೆ ವಹಿಸಲಿದ್ದಾರೆ. ಆದಂ ದಾರಿಮಿ ದುಆ ನೆರವೇರಿಸುವ ಈ ಕಾರ್ಯಕ್ರಮದಲ್ಲಿ ಮದ್ದಡ್ಕ ಸ್ವಾಗತ ಸಮೀತಿ ಚೆಯರ್ಮೇನ್ ಸಿರಾಜ್ ಚಿಲಿಂಬಿ ಸ್ವಾಗತ ಭಾಷಣ ಮಾಡಲಿದ್ದು ಬೆಳ್ತಂಗಡಿ ರೇಂಜ್ ಅಧ್ಯಕ್ಷರಾದ ಅಶ್ರಫ್ ಫೈಝಿ ಪುಂಜಾಲಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಮಸ್ತ ಕರ್ನಾಟಕ ಕೋಶಾಧಿಕಾರಿಯಾದ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ತೋಡಾರ್ ಉಸ್ತಾದ್ ಅನುಗ್ರಹ ಭಾಷಣವನ್ನು ನಡೆಸಲಿದ್ದು ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿಯವರಾದ ಅನೀಸ್ ಕೌಸರಿ ಮುಖ್ಯಪ್ರಭಾಷಣಗೈಯಲಿದ್ದಾರೆ. ನಝೀರ್ ಅಝ್ಹರಿ ಮತ್ತು ಶಂಸುದ್ದೀನ್ ಅಶ್ರಫೀ ಆಶಂಸಾ ಭಾಷಣ ನಡೆಸುವರು.

ಮಗ್ರಿಬ್ ನಮಾಝಿನ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಚೆಯರ್ಮಾನ್ ಐ.ಕೆ ಮೂಸಾ ದಾರಿಮಿ ಕಕ್ಕಿಂಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ವೀನರ್ ಇಸ್ಮಾಯಿಲ್ ದಾರಿಮಿ ಸ್ವಾಗತ ಭಾಷಣ ಮಾಡಲಿದ್ದಾರೆ. ಸಂಚಾಲಕರಾದ ರಿಯಾಝ್ ಫೈಝಿ ಕಕ್ಕಿಂಜೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು ಜಲಾಲಿ ಉಸ್ತಾದ್ ಕಕ್ಕಿಂಜೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.. ಅಶ್ಫಾಕ್ ಫೈಝಿ ಬ್ಯಾರಿ ಭಾಷಣ ಮಾಡಲಿದ್ದಾರೆ. ಅಝೀಝ್ ದಾರಿಮಿ ಚೊಕ್ಕಬೆಟ್ಟು,ಹೈದರ್ ದಾರಿಮಿ ಕರಾಯ,ಇಸ್ಮಾಯಿಲ್ ಫೈಝಿ ,ಜುನೈದ್ ಜಿಫ್ರಿ ತಂಙಳ್ ಆಶಂಸ ಭಾಷಣವನ್ನು ಮಾಡಲಿದ್ದಾರೆ.ಪ್ರಖ್ಯಾತ ಸುನ್ನತ್ ಜಮಾಅತಿನ ವಾಗ್ಮಿ ಜಝೀಲ್ ಕಮಾಲಿ ಫೈಝಿ ಉಸ್ತಾದ್ ಮುಖ್ಯ ಪ್ರಭಾಷಣಗೈಯಲಿದ್ದಾರೆ. ವಲಯ ಕಾರ್ಯದರ್ಶಿ ಹಾಶಿಂ ಫೈಝಿ ಧನ್ಯವಾದ ನಡೆಸುವರು.
ಈ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ಗಣ್ಯರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಮೂಸಾ ದಾರಿಮಿ ಕಕ್ಕಿಂಜೆ ಸ್ವಾಗತ ಸಮಿತಿ ಕನ್ವೀನರ್ ರಿಯಾಝ್ ಫೈಝಿ, ರೇಂಜ್ ಅಧ್ಯಕ್ಷರಾದ ಅಶ್ರಫ್ ಫೈಝಿ, ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯ ಅಧ್ಯಕ್ಷರಾದ ರಝಾಕ್ ದೂಂ ದಮಾಕ, ಮದ್ದಡ್ಕ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷರಾದ ಇಲ್ಯಾಸ್ ಚಿಲಿಂಬಿ, ಶಂಶುಲ್ ಉಲೆಮಾ ಕ್ರಿಯಾ ಸಮಿತಿ ಉಪಾಧ್ಯಕ್ಷ ರಿಝ್ವಾನ್ ಮದ್ಡಡ್ಕ , ಅಝೀಝ್ ಅಶ್ಶಾಫಿ ಉಪಸ್ಥಿತರಿದ್ದರು.

Related posts

ಅಂತರಾಷ್ಟ್ರೀಯ ಫೋಟೋಗ್ರಾಫಿ, ವೀಡಿಯೋಗ್ರಾಫಿ ಕಾರ್ಯಾಗಾರ

Suddi Udaya

ಕೊಯ್ಯೂರು : ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರ ಎಳೆದು ಪರಾರಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ

Suddi Udaya

ಸೌಜನ್ಯ ಕೊಲೆ ಪ್ರಕರಣ: ಆ.27 ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗಳ ಶಾಸಕರುಗಳು ಭಾಗಿ:

Suddi Udaya

ಶಿಬಾಜೆ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾ ಯಾಗ: ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಆಹ್ವಾನ

Suddi Udaya

ಜ. 24- ಫೆ. 2 ರವರಿಗೆ ಕಾಜೂರು ಉರೂಸ್ ಮಹಾ ಸಂಭ್ರಮ : ಜ. 30 ಬ್ರಹತ್ ಝಿಕ್ರ್ ಮಜ್ಲಿಸ್ ಹಾಗೂ ಮುಸಾಫಿರ್ ಖಾನ ಕಟ್ಟಡ ಉದ್ಘಾಟನೆ; ಫೆ. 2 ಉರೂಸ್ ಸಮಾರೋಪ- ಮಹಾ ಅನ್ನದಾನ

Suddi Udaya
error: Content is protected !!