September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

‘ಹೆಚ್ಚುವರಿ ನೀರಿನ ಶುಲ್ಕದಿಂದಾಗಿ ಜನಸಾಮಾನ್ಯರಿಗೆ ಹೊರೆ’ : ನಾವೂರು ಎಸ್ ಡಿ ಪಿ ಐ ನೇತೃತ್ವದಲ್ಲಿ ಮನವಿ

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಹೆಚ್ಚುವರಿ ಬಿಲ್, ಅನಿಯಮಿತ ನೀರು ಸರಬರಾಜು ಹಾಗೂ ಬೀದಿ ದೀಪಗಳ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಕೋರಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಮನೆಗಳಿಗೆ ಇತ್ತೀಚೆಗೆ ವಿತರಿಸಲಾದ ನೀರಿನ ಬಿಲ್ಲುಗಳಲ್ಲಿ, ತಿಂಗಳ ನಿಗದಿತ ಶುಲ್ಕವನ್ನು ಹೊರತುಪಡಿಸಿ ಹೆಚ್ಚುವರಿ ನೀರಿನ ಬಳಕೆ ನಡೆದಿದೆ ಎಂದು ಸೂಚಿಸಿ, ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗಿದ್ದು, ಇದರಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಭಾರೀ ಆರ್ಥಿಕ ಹೊರೆಯಾಗುತ್ತಿದೆ. ಇದಲ್ಲದೆ ಗ್ರಾಮದ ಕೆಲವೊಂದು ಪ್ರದೇಶಗಳಿಗೆ ಪ್ರತಿದಿನ ನೀರಿನ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಕೆಲವು ಕಡೆಗಳಲ್ಲಿ ದಿನಗಟ್ಟಲೆ ನೀರು ಸರಬರಾಜು ಇಲ್ಲದ ಪರಿಸ್ಥಿತಿಯೂ ಇದೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ನೀರಿನ ಬಳಕೆ ಎಂದು ಹೆಚ್ಚುವರಿ ಬಿಲ್ ವಿಧಿಸಿರುವುದು ಜನರಲ್ಲಿ ಗೊಂದಲ ಮತ್ತು ಅಸಮಾಧಾನವನ್ನುಂಟು ಮಾಡಿದೆ. ಅದೇ ರೀತಿ, ಗ್ರಾಮದ ಹಲವೆಡೆ ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಭದ್ರತಾ ಸಮಸ್ಯೆಯೂ ಎದುರಾಗುತ್ತಿದೆ. ಆದುದರಿಂದ ನೀರಿನ ಬಿಲ್ಲುಗಳಲ್ಲಿ ವಿಧಿಸಿರುವ ಹೆಚ್ಚುವರಿ ಶುಲ್ಕವನ್ನು ಪುನರ್‌ಪರಿಶೀಲಿಸಿ ರದ್ದುಪಡಿಸಬೇಕು. ಎಲ್ಲಾ ಪ್ರದೇಶಗಳಿಗೆ ಸಮರ್ಪಕ ಹಾಗೂ ನಿಯಮಿತ ನೀರು ಸರಬರಾಜು ವ್ಯವಸ್ಥೆ ಮಾಡಬೇಕು. ಕಾರ್ಯನಿರ್ವಹಿಸದ ಬೀದಿ ದೀಪಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಇದಕ್ಕೂ ಮುಂಚೆ ಮನೆ ಮನೆಗೆ ಭೇಟಿ ನೀಡಿ ಗ್ರಾಮಸ್ಥರ ಸಂಕಷ್ಟಗಳ ಮಾಹಿತಿಗಳನ್ನು ಕಲೆ ಹಾಕಿ ಸಹಿ ಸಂಗ್ರಹ ಮಾಡಲಾಗಿದ್ದ ಪ್ರತಿಯನ್ನು ಮನವಿಯೊಂದಿಗೆ ಲಗತ್ತಿಸಿ ನೀಡಲಾಯಿತು.

ಎಸ್ ಡಿ ಪಿ ಐ ನಾವೂರು ಬ್ರಾಂಚ್ ಅಧ್ಯಕ್ಷರಾದ ಮುಹಮ್ಮದ್ ಸ್ವಾದಿಕ್ ನಾವೂರು, ಜೊತೆ ಕಾರ್ಯದರ್ಶಿ ಸಲೀಂ ಮುರ, ಖಾದರ್ ನಾವೂರು, ನೌಶಾದ್ ಕೈಕಂಬ, ಇಬ್ರಾಹಿಂ ಮುರ, ಹಸೈನಾರ್ ಸೇರಿದಂತೆ ಊರಿನ ಮಹಿಳೆಯರು ಉಪಸ್ಥಿತರಿದ್ದರು.

Related posts

ಮಂಗಳೂರು ವಿ ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್: ಆಳ್ವಾಸ್ ಚಾಂಪಿಯನ್

Suddi Udaya

ದೇವರ ಆಶೀರ್ವಾದ ಕ್ಷೇತ್ರದ ಮೇಲಿರಲಿದೆ. ಭಗವಂತ ನಮ್ಮೊಂದಿಗೆ ಇದ್ದಾರೆ: ಡಾ.ಹೆಗ್ಗಡೆ

Suddi Udaya

ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕೊಕ್ಕಡ ಬಾರ್ ನಲ್ಲಿ ಇಬ್ಬರ ಮೇಲೆ ಹಲ್ಲೆ: ಪ್ರಕರಣ ದಾಖಲು

Suddi Udaya

ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಮ್ಯಾಟ್ ಕಬಡ್ಡಿ ಪಂದ್ಯಾಟ : ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಗೆ ಪ್ರಶಸ್ತಿ

Suddi Udaya

ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!