September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

ಉಜಿರೆ: ಮನುಷ್ಯ ಎಲ್ಲ ಜೀವಿಗಳಿಗಿಂತಲೂ  ಶ್ರೇಷ್ಠ  ದೇವರ ಸ್ವರೂಪ ಹಾಗೂ ಆಕಾರ. ಮನುಷ್ಯನ ಪಾಪದ ಲೋಕಕ್ಕೆ ದೇವರ ಉಪದೇಶ,ಜ್ಞಾನ ಎಲ್ಲವನ್ನೂ ,ಎಲ್ಲರನ್ನೂ ಕಾಯುವವನು ದೇವನು.  ಮಾನವತೆಯಿಂದ ದೇವರ ಮತ್ತು ಪರರನ್ನು ,ಮ್ಮಕ್ಕಳನ್ನು  ಪ್ರೀತಿಯಿಂದ   ನೋಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿ.ಶಾಂತಿ,ಪ್ರೀತಿ,ಸಹನೆ,ಕ್ಷಮೆಯ ಸಂದೇಶ ಪಾಲಿಸಿದರೆ   ಮಾನವೀಯ ಸಮುದಾಯ ಅರ್ಥಪೂರ್ಣವಾಗುವುದು .  ಬದುಕಿನಲ್ಲಿ ಭರವಸೆ ಇರಿಸಿಕೊಂಡು ಇತರರಲ್ಲಿ  ಮಾನವೀಯತೆ ಮೆರೆದರೆ ಜೀವನ ಸಾರ್ಥಕ ಎಂದು  ಉಜಿರೆಯ  ಸಂತ  ಅಂತೋನಿ ಚರ್ಚ್  ಧರ್ಮಗುರು ರೆ!ಫಾ !ಅಬೆಲ್ ಲೋಬೊ ನುಡಿದರು. 

ಅವರು ಡಿ 20 ರಂದು  ಉಜಿರೆಯ  ಸಾನಿಧ್ಯ ಕೌಶಲ್ಯ ತರಬೇತಿ   ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ,ಕೇಕ್  ಶುಭ ಸಂದೇಶ ನೀಡಿದರು. ಬೆದ್ರಬೆಟ್ಟು ಮಸೀದಿ ಧರ್ಮಗುರು  ಅಬ್ದುಲ್  ರಜಾಕ್ ಹಶ್ಮಿ ಅವರು ಕ್ರಿಸ್ಮಸ್ ಸಂದೇಶ ನುಡಿದು ಶುಭ ಕೋರಿದರು.  ವೇದಿಕೆಯಲ್ಲಿ  ಮಂಗಳೂರು ಮ.ನ.ಪಾ ಸದಸ್ಯ  ಜಗದೀಶ್ ಶೆಟ್ಟಿ,   ಸಾನಿಧ್ಯ ಕೇಂದ್ರದ  ಸಹಕಾರ್ಯದರ್ಶಿ ಪ್ರೊ!ರಾಧಾಕೃಷ್ಣ, ಸಂತೋಷ್ ಸಿಕ್ವೇರಾ,  ಆಡಳಿತಾಧಿಕಾರಿ ಡಾ!ವಸಂತಕುಮಾರ್ ಶೆಟ್ಟಿ  ಉಪಸ್ತಿತರಿದ್ದು ಮಾತನಾಡಿದರು.  ಮಂಗಳೂರಿನ ಶ್ರೀ ಗಣೇಶ ಸೇವಾ  ಟ್ರಸ್ಟ್ ಟ್ರಸ್ಟಿಗಳಾದ ಸ್ಟಿಫನ್ ಪಿಂಟೋ  ಮತ್ತು ರೀಮಾ  ಪಿಂಟೋ ಅವರಿಂದ  ಸಾನಿಧ್ಯ ಕೇಂದ್ರದ ಸಿಬಂದಿಗಳಿಗೆ  ಉಡುಗೊರೆ ನೀಡಲಾಯಿತು. 

ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿ   ಎಲ್ಲ ಧರ್ಮಗಳ ಸಾರವೂ ಒಂದೇ .  ಅದನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದು  ಮುಖ್ಯ. ಕರ್ಮವನ್ನು ಮಾಡು,ಧರ್ಮವನ್ನು ಪಾಲಿಸು, ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದಿರು  ಎಂಬ ಕ್ರಿಸ್ತನ ಸಂದೇಶವನ್ನು ಪಾಲಿಸೋಣ ಎಂದರು. ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳಿಗೆ  ಕ್ರಿಸ್ಮಸ್ ಉಡುಗೊರೆ ನೀಡಲಾಯಿತು.     

ಸಾನಿಧ್ಯ ಕೇಂದ್ರದ  ಸಲಹಾ  ಸಮಿತಿ  ಸದಸ್ಯ ರೋಷನ್ ಸಿಕ್ವೇರಾ  ಸ್ವಾಗತಿಸಿ, ಪ್ರಸ್ತಾವಿಸಿದರು. ಅವರನ್ನು  ಸಾನಿಧ್ಯ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಮಹೇಶ್ ಕೆ.ನಿರೂಪಿಸಿದ  ಕಾರ್ಯಕ್ರಮದಲ್ಲಿ  ಸಾನಿಧ್ಯ ಕೇಂದ್ರದ  ಶಿಕ್ಷಕಿ ಮಲ್ಲಿಕಾ ವಂದಿಸಿದರು.

Related posts

ಅಂಡಿOಜೆ … ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

Suddi Udaya

ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಗ್ಯಾರಂಟಿ ನ್ಯೂಸ್ ನಿಂದ ಆರೋಗ್ಯ ರತ್ನ ಪ್ರಶಸ್ತಿ ಪ್ರದಾನ

Suddi Udaya

ಕಳೆಂಜ ಶಾಲೆತ್ತಡ್ಕ ಹಾ.ಉ.ಸ. ಸಂಘದ ಆಡಳಿತ ಮಂಡಳಿಯಿಂದ ಶಾಸಕ ಹರೀಶ್ ಪೂಂಜ ರವರಿಗೆ ಅಭಿನಂದನೆ

Suddi Udaya

ಕಣಿಯೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

Suddi Udaya

ಮುಂಡಾಜೆ ಮತ್ತು ಕಕ್ಕಿಂಜೆ ರೋಟರಿ ಸಮುದಾಯ ದಳಗಳ ಪದಾಧಿಕಾರಿಗಳ ಆಯ್ಕೆ

Suddi Udaya

ಕು.ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ನೈಜ್ಯ ಆರೋಪಿಗಳ ಪತ್ತೆಯಾಗಿ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

Suddi Udaya
error: Content is protected !!