32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ; ಆಶೀರ್ವಾಚನ

ಉಜಿರೆ: ಪವಾಡ ಪುರಷರೆಂದು ಹೆಸರುವಾಸಿಯಾದ ಪಾದುವಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆಯ ಕ್ರೈಸ್ತ ದೇವಾಲಯವು ದುರಸ್ತಿ ಹಾಗೂ ನವೀಕರಣಗೊಂಡು ಆಶೀರ್ವಚನ ಕಾರ್ಯಕ್ರಮವು
ಡಿ. 22ರಂದು ನಡೆಯಿತು.

ರೈ.ರೆ.ಡಾ.ಪೀಟರ್ ಪೌಲ್ ಸಲ್ದಾನ್ಹಾರವರು ಮುಖ್ಯ ರಸ್ತೆಯ ಬಳಿ ನಿರ್ಮಿಸಿದ ಸಂತ ಅಂತೋನಿಯವರ ಗ್ರೋಟ್ಟೋ ಆಶೀರ್ವಚನ, ನಂತರ ಮುಖ್ಯ ದ್ವಾರದ ಉದ್ಘಾಟನೆ, ವೆಲಂಕಣಿ ಮಾತೆಯ ಗ್ರೋಟ್ಟೋ ಬಳಿಕ ಚರ್ಚ್ ಶುದ್ಧಿಕರಣ, ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಪವಿತ್ರ ಪರಮ ಪ್ರಸಾದ ಮಂಟಪ ಉದ್ಘಾಟಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಬಲಿಪೂಜೆಯಲ್ಲಿ ಧರ್ಮಾಧ್ಯಕ್ಷರೊಂದಿಗೆ, ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ಅ. ವಂ. ವಾಲ್ಟರ್ ಡಿಮೆಲ್ಲೊರವರು, ಉಜಿರೆ ಧರ್ಮಕೇಂದ್ರದ ಧರ್ಮಗುರು ವಂ. ಆಬೆಲ್ ಲೋಬೋ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ. ವಿಜಯ್ ಲೋಬೊ ಹಾಗೂ ವಲಯದ ಮತ್ತು ಇದೆ ಚರ್ಚ್ ನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಹಾಗೂ ಇನ್ನಿತರ ಗುರುಗಳು, ಧರ್ಮ ಭಗೀನಿಯರು, ಕ್ರೈಸ್ತ ಭಾಂದವರು ಭಾಗವಹಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆರ್ಥಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related posts

ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ

Suddi Udaya

ನಿಡ್ಲೆ ಸಿಡಿಲು ಬಡಿದು ಹಾನಿಗೊಳಗಾದ ರಾಜೇಂದ್ರ ಗೌಡ ರವರ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನಿಂದ ಭೇಟಿ

Suddi Udaya

ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ: ಕುಸುಮಾವತಿಯವರೊಂದಿಗೆ ಮಾತುಕತೆ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಆಪತ್ಕಾಲದ 29ನೇ ಕ್ಷೇಮ ನಿಧಿ ಯೋಜನೆಯ ಸಹಾಯಧನ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕರಾಗಿ ವೃತ್ತಿ ಪದೋನ್ನತಿ ಹೊಂದಿದ್ದ ಡಾ. ಶ್ರೀಧರ ಭಟ್ ರವರಿಗೆ ಅಭಿನಂದನೆ ಸಲ್ಲಿಸಿದ ಶ್ರೀ ಕ್ಷೇತ್ರ ಸೌತಡ್ಕದ ಮಾಜಿ ವ್ಯವಸ್ಥಾಪನ ಸಮಿತಿ

Suddi Udaya
error: Content is protected !!