September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಂಭಶ್ರೀ ಕಾಲೇಜು ವಿದ್ಯಾರ್ಥಿಗಳ 2K25: ಎಕ್ಸ್‌ಪ್ಲೋರಿಯಾ


ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜಿನ 2025 ಸಾಲಿನ ವಾರ್ಷಿಕ ಕಾರ್ಯಕ್ರಮಗಳು ಈ ಬಾರಿ ಕ್ರೀಡೆಯೂ ಸಂಸ್ಕೃತಿಯೂ ಎರಡು ದಿನ ಅದ್ದೂರಿಯಾಗಿ ಜರುಗಿದವು. ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಎಚ್. ಕಾರ್ಯಕ್ರಮದ ಅಧ್ಯಕ್ಷತೆಯೊಂದಿಗೆ, ಸಂಸ್ಥೆಯ ಸಂಚಾಲಕರಾದ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಅವರ ಸಮಗ್ರ ಸಂಯೋಜನೆ, ಅತಿಥಿ ಸ್ವಾಗತ ಮತ್ತು ಮಾರ್ಗದರ್ಶನದಿಂದ ಈ ಉತ್ಸವ ಮೆರಗುಗೊಂಡಿತು.

ಡಿ.18ರಂದು ಉದ್ಘಾಟಕರಾಗಿ ಕುಕ್ಕೇಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರ್, ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ ಆಗಮಿಸಿದರು.
ಗ್ರಾಮ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಮನೋಜ್ ಎಸ್. ಧನ್ಯವಾದವಿತ್ತರು.

ಡಿ.19ರಂದು ಕುಂಭಶ್ರೀ ಕ್ಯಾಂಪಸ್‌ನಲ್ಲಿ ಎಕ್ಸ್‌ಪ್ಲೋರಿಯಾ 2K25 ಸಾಂಸ್ಕೃತಿಕ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಶಿಧರ್ ಡಿ. ಉದ್ಯಮಿ (ಹಾಸನ) , ಸುರೇಶ್ ಪೂಜಾರಿ ಕೃಷಿಕ, ಉಪಸ್ಥಿತರಿದ್ದರು. ದಿನದ ವಿಶೇಷತೆಯನ್ನು ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಭಿಲಾಶ್ ಹಾಗೂ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಸಂತೋಷ್ ನಿಭಾಯಿಸಿದರು.
ಸಾಂಸ್ಕೃತಿಕ ಸ್ಪರ್ಧೆಗಳ ವೈವಿಧ್ಯ, ಫುಡ್ ಫೆಸ್ಟ್ , ಟ್ರೆಶರ್ ಹಂಟ್ , ರಂಗೋಲಿ , ಥೀಮ್ ಪರ್ಫಾರ್ಮೆನ್ಸ್ , ಪಾಟ್ ಪೈಂಟಿಂಗ್ , ವೀಡಿಯೋಗ್ರಫಿ ಹಾಗೂ ಇತರೆ ಪ್ರತಿಭಾ ಪ್ರದರ್ಶನಗಳು, ವಿಜೇತರಿಗೆ ಪದಕ–ಪ್ರಮಾಣಪತ್ರಗಳು ಪ್ರದಾನಿಸಲಾಯಿತು.

ಸಮಾರೋಪದ ಮುಖ್ಯ ಅತಿಥಿಯಾಗಿ ಕೃಷಿಕ ಜಾನ್ ಲಿನು ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿದರು.
ದ್ವಿದಿನ ಕಾರ್ಯಕ್ರಮಕ್ಕೆ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಲಿಖಿತಾ ಎಂ. ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸಕಿ ಶರಣ್ಯ ಕೆ.ಎಸ್. ಸಮರ್ಥ ನಿರೂಪಣೆ ನೀಡಿದರು.
ಎಲ್ಲ ವಿಭಾಗಗಳ ಪ್ರದರ್ಶನ, ಸಾಧನೆ, ಹಾಗೂ ತಂಡ ಸ್ಫೂರ್ತಿಗೆ ಮೆರಗು ತುಂಬುವಂತೆ, ಒಟ್ಟಾರೆ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ವಿದ್ಯಾರ್ಥಿಗಳಿಗೆ ಸಂಯುಕ್ತವಾಗಿ ಪ್ರದಾನ ಮಾಡಲಾಯಿತು.

Related posts

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್ ಶಿಪ್

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ

Suddi Udaya

ಕನ್ಯಾಡಿಯಲ್ಲಿ ಜನಾರ್ದನ ರೆಸಿಡೆನ್ಸಿ ಉದ್ಘಾಟನೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀದುರ್ಗಾಟೆಕ್ಸ್ ಟೆಲ್ಸ್ ನಲ್ಲಿ ಹೊಸ ಕಲೆಕ್ಷನ್‌ನೊಂದಿಗೆ ಶೇ.10 ರಿಂದ 20ರಷ್ಟು ಡಿಸ್ಕೌಂಟ್

Suddi Udaya

ಉಡುಪಿ ಜಿಲ್ಲಾ ಸಮಾವೇಶ 2024 ಮತ್ತು 26ನೇ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಜಾಗೃತಿ ಶಿಬಿರ

Suddi Udaya
error: Content is protected !!