September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುನ್ನೀ ಕೋರ್ಡಿನೇಷನ್ ಸಮಿತಿಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ

ಬೆಳ್ತಂಗಡಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ‌ ಸಮುದಾಯದ ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತೀಕರಿಸುವ ಉದ್ಧೇಶದಿಂದ ಸಯ್ಯಿದ್ ಸಾದಾತ್ ತಂಙಳ್ ನೇತೃತ್ವದ ಬೆಳ್ತಂಗಡಿ ತಾಲೂಕು ಸುನ್ನೀ ಕೋರ್ಡಿನೇಷನ್ ಕಮಿಟಿ ವತಿಯಿಂದ ಸಬರ ಬೈಲ್ ನಲ್ಲಿ ಮೊಹಲ್ಲಾ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕೆಲವೊಮ್ಮೆ ಓದುವಿಕೆಯ ಸರಿಯಾದ ಕ್ರಮ ಅಳವಡಿಸಿಕೊಳ್ಳದೇ ಇರುವುದು, ಸಮಯದ ಹೊಂದಾಣಿಕೆಯಲ್ಲಿ ವಿಫಲತೆ, ಪರೀಕ್ಷಾ ಸಮಯದಲ್ಲಿ ಇತರೇ ಕಾರ್ಯಕ್ರಮಗಳ ಬಗ್ಗೆ‌ ಹೆಚ್ಚು ಅಶಕ್ತಿ ತೋರುವುದು, ಕೆಟ್ಟ ಸ್ನೇಹಿತರ ಸಹವಾಸ, ಅತಿಯಾದ ನಿರ್ಲಕ್ಷ್ಯ, ಮೊಬೈಲ್ ಟಿವಿಯಂತಹಾ ಹವ್ಯಾಸ ಇತ್ಯಾಧಿಗಳ ಕಾರಣದಿಂದ ಕೆಲವೊಮ್ಮೆ ಒಳ್ಳೆಯ ಕಲಿಯುವ ವಿದ್ಯಾರ್ಥಿಗಳು ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದನ್ನು ಕಾಣಬಹುದು. ಇಂಥಾ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಹೆತ್ತವರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಗಮನಸೆಳೆದರು.

ಸುನ್ನೀ ಕೋಡಿನೇಷನ್ ಸಮಿತಿ ಸದಸ್ಯರಾದ ವಾದಿ ಇರ್ಫಾನ್ ತಂಙಳ್, ಕಾರ್ಯಾಧ್ಯಕ್ಷ ಜಿ.ಕೆ ಉಮರ್ ಗುರುವಾಯನಕರೆ ಇವರು ನೇತೃತ್ವ ವಹಿಸಿದ್ದರು.

ಕಾರ್ಯಾಗಾರದ ಉದ್ಘಾಟನೆ ಎಸ್ ಎಂ ಕೋಯ ತಂಙಳ್ ಉಜಿರೆ ನೆರವೇರಿಸಿದರು.
ಮದ್ದಡ್ಕ ಮಸ್ಜಿದ್ ಅಧ್ಯಕ್ಷ ಅಶ್ರಫ್ ಚಿಕಿಂಬಿ ಮದ್ದಡ್ಕ, ಮುಸ್ಲಿಂ ಜಮಾಅತ್ ನಾಯಕ ಅಬ್ಬೋನು ಮದ್ದಡ್ಕ ಮೊದಲಾದವರು ವಿದ್ಯಾರ್ಥಿಗಳನುದ್ದೇಶಿಸಿ‌ ಮಾತನಾಡಿದರು.‌
ಕಾರ್ಯದರ್ಶಿ ಸಲೀಂ ಕನ್ಯಾಡಿ ನಾಡ್ಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಉಮ್ಮರ್ ಕುಂಞ ನಾಡ್ಜೆ ಧನ್ಯವಾದ ಸಲ್ಲಿಸಿದರು.

Related posts

ಆರಂಬೋಡಿ ಗ್ರಾಮ‌ ಪಂಚಾಯತ್ 2024-25ನೇ ಸಾಲಿನ ಪ್ರಥಮ‌ ಸುತ್ತಿನ ಗ್ರಾಮ ಸಭೆ

Suddi Udaya

ಮಾಲಾಡಿ: ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಮಾಹಿತಿ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸೆಲೆಕ್ಷನ್ ಚಾಂಪಿಯನ್ ಶಿಪ್ ನಲ್ಲಿ ರಿತ್ವಿಕ್ ಕೆ. ಪಿ ಪ್ರಥಮ: ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಭಾಷಣ ಸ್ಪರ್ಧೆ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ವರದಿ ಸಾಲಿನಲ್ಲಿ ರೂ. 394.12 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ.1.54 ಕೋಟಿ ಲಾಭ: ರಾಕೇಶ್ ಹೆಗ್ಡೆ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!