ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ವತಿಯಿಂದ ಪ್ರಗತಿಬಂಧು ಜ್ಞಾನ ವಿಕಾಸಗಳು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ಹುಣ್ಸೆಕಟ್ಟೆ, ಬೆಳ್ತಂಗಡಿ ಬಿ. ಮತ್ತು ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹುಣ್ಸೆಕಟ್ಟೆ ಹಾಗೂ ಶ್ರೀ ರಾಮ ಭಜನಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ 26ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಡಿ.21ರಂದು ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಜರುಗಿತು.

ಶ್ರದ್ಧೆ, ಭಕ್ತಿ, ಆಸಕ್ತಿಯಿಂದ ದೇವರ ಸೇವೆ ಮಾಡಿದಾಗ ಪೂಜೆ ದೇವರಿಗೆ ಸಲ್ಲುತ್ತದೆ. ಪ್ರತಿಯೊಂದು ಮನೆಯ ತಾಯಿಯಂದಿರು ಮಕ್ಕಳಿಗೆ ಬಾಲ್ಯದ ದಿನಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ರಾಷ್ಟ್ರ,ದೇಶ ಭಕ್ತಿಯೊಂದಿಗೆ ಧರ್ಮ ಪ್ರಜ್ಞೆಯನ್ನು ಮೈಗೂಡಿಸಿಕೊಂಡು, ಪಾಶ್ಚಿಮಾತ್ಯ ರಾಷ್ಟ್ರಗಳ ಅನುಕರಣೆಯಿಂದ ದೂರವಿರುವ ಸಂಸ್ಕೃತಿಯ ಮಕ್ಕಳಿಗೆ ಬೋಧಿಸಿಬೇಕು ಎಂದು ದಾಮೋದರ ಶರ್ಮ ಬಾರ್ಕೂರು ಧಾರ್ಮಿಕ ಪ್ರವಚನ ಮಾಡಿದರು.

ಸತ್ಯ ನಾರಾಯಣ ಪೂಜೆ ಸಮಿತಿ ಅಧ್ಯಕ್ಷ ಲಕ್ಷ್ಮಣ ಪಿ.ಕೆಂಬರ್ಜೆ ಅಧ್ಯಕ್ಷತೆ ವಹಿಸಿದ್ದರು.
ಉಜಿರೆ ಲಕ್ಷ್ಮೀ ಗ್ರೂಪ್ ಮಾಲಕ ಮೋಹನ್ ಕುಮಾರ್, ಬೆಳ್ತಂಗಡಿ ವಲಯ ಯೋಜನಾಧಿಕಾರಿ ಯಶೋಧರ, ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಭಟ್ ಮುಗುಳಿ, ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ನಾಯಕ್, ಬೆಳ್ತಂಗಡಿ ಪ್ರ.ಜ್ಞಾ.ವಿ.ಸ್ವ.ಸ.ಸಂ.ಕೇಂದ್ರ ಅಧ್ಯಕ್ಷ ಚರಣ್ ಕುಮಾರ್, ಹುಣ್ಸೆಕಟ್ಟೆ ಒಕ್ಕೂಟ ಪ್ರ.ಜ್ಞಾ.ಸ್ವ.ಸ.ಸಂಘದ ಅಧ್ಯಕ್ಷ ದಯಾನಂದ ಕೊಟ್ಯಾನ್ ಉಪಸ್ಥಿತರಿದ್ದರು.
ಯೋಜನೆ ಮೇಲ್ವಿಚಾರಕ ರವಿ ಸ್ವಾಗತಿಸಿದರು. ಪೂಜಾ ಸಮಿತಿ ಉಪಾಧ್ಯಕ್ಷೆ ಕಲ್ಯಾಣಿ, ಕಾರ್ಯದರ್ಶಿ ಸುಧಾರಾಣಿ, ಜೊತೆ ಕಾರ್ಯದರ್ಶಿ ಹೈಡಾ ಡಿಸೋಜ, ಕೋಶಾಧಿಕಾರಿ ಅಕ್ಷತಾ, ಸುಮಂತ್, ಸೇವಾ ಪ್ರತಿನಿಧಿ ಕೇಶವ ಮತ್ತಿತರರಿದ್ದರು. ಸೇವಾ ಪ್ರತಿನಿಧಿ ಜ್ಯೋತಿ ವರದಿ ವಾಚಿಸಿದರು. ದೀಕ್ಷಿತ್ ಗಾಣಿಗ ನಿರೂಪಿಸಿದರು. ಬೆಳ್ತಂಗಡಿ ಕೇಂ.ಒ.ಪ್ರ.ಬಂಧು.ಸ್ವ.ಸ.ಸಂಘದ ಅಧ್ಯಕ್ಷ ಸೀತಾರಾಮ ಆರ್. ವಂದಿಸಿದರು.











