23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಂಡಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ “ಕ್ಷೀರ ಸಮೃದ್ಧಿ” ಲೋಕಾರ್ಪಣೆ

ಬೆಳ್ತಂಗಡಿ: ಅಂಡಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕ್ಷೀರ ಸಮೃದ್ಧಿಯ ಉದ್ಘಾಟನಾ ಸಮಾರಂಭ ಡಿ.22ರಂದು ನಡೆಯಿತು.

ಮಂಗಳೂರು ದ.ಕ.ಸ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ನೂತನ ಕಟ್ಟಡ “ಕ್ಷೀರ ಸಮೃದ್ಧಿಯನ್ನು
ಉದ್ಘಾಟಿಸಿ ಶುಭ ಕೋರಿದರು.

ಶಾಸಕ ಹರೀಶ್ ಪೂಂಜ ನೂತನ ಕಛೇರಿ ಉದ್ಘಾಟಿಸಿದರು. ದ.ಕ.ಸ. ಹಾಲು ಒಕ್ಕೂಟ ಉಪಾಧ್ಯಕ್ಷ ಉದಯ ಕೋಟ್ಯಾನ್, ಪಶು ಆಹಾರ ಗೋದಾಮು ಉದ್ಘಾಟನೆ, ಮಂಗಳೂರು ದ.ಕ.ಹಾ. ಒಕ್ಕೂಟ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳಜ್ಜ ನಾಮಫಲಕ ಉದ್ಘಾಟಿಸಿದರು.

ಅಂಡಿಂಜೆ ಹಾ.ಉ.ಸ. ಸಂಘದ ಅಧ್ಯಕ್ಷ ಮೋಹನ್ ಅಂಡಿಂಜೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದ.ಕ.ಹಾ. ಒಕ್ಕೂಟ ಮಂಗಳೂರು ಇದರ ನಿರ್ದೇಶಕರಾದ ಪ್ರಭಾಕರ ಆರಂಬೋಡಿ,ಸವಿತಾ ಎನ್ ಶೆಟ್ಟಿ,ಸುಧಾಕರ ಶೆಟ್ಟಿ,ಮಾಜಿ ನಿರ್ದೇಶಕರ ಪದ್ಮನಾಭ ಅರ್ಕಜೆ, ಚಂದ್ರಶೇಖರ ರಾವ್, ಭರತ್ ನೆಕ್ರಾಜೆ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ವ್ಯವಸ್ಥಾಪಕ ಡಾ.ರವಿರಾಜ ಉಡುಪ, ಮಹಾಬಲ ಕುಲಾಲ್, ಸಮುದಾಯ ಅಭಿವೃದ್ಧಿ ಧರ್ಮಸ್ಥಳ, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ  ನಿತೀನ್ ಎಂ., ನಾರಾವಿ ಪಾ.ಕೃ.ಪ.ಸ. ಸಂಘದ ಅಧ್ಯಕ್ಷ ಎನ್.ಸುಧಾಕರ ಭಂಡಾರಿ,ದ.ಕ.ಹಾ. ಒಕ್ಕೂಟ ಮಂಗಳೂರು ಇದರ ಉಪವ್ಯವಸ್ಥಾಪಕರಾದ ಡಾ.ಡಿ.ಆರ್. ಸತೀಶ್ ರಾವ್, ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ. ರಘು, ಮಂಗಳೂರು ದ.ಕ.ಹಾ. ಒಕ್ಕೂಟದ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಡಾ. ಪೂಜಾ ಯಂ.ಜಿ, ಬೆಳ್ತಂಗಡಿ ವಿಸ್ತರಣಾಧಿಕಾರಿ ಸುಚಿತ್ರಾ, ವೇಣೂರು ಸಿ ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ ಉಪಸ್ಥಿತರಿದ್ದರು.

ಅಂಡಿಂಜೆ ಹಾ.ಉ.ಸ. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪವಿತ್ರ ಬಿ.,ಉಪಾಧ್ಯಕ್ಷ ರತ್ನಕುಮಾರ್ ಹೆಗ್ಡೆ, ನಿರ್ದೇಶಕರಾದ ಪ್ರಶಾಂತ ನವಜ್ಯೋತಿ, ಚೈತನ್ಯ, ಪ್ರದೀಪ ಶೆಟ್ಟಿ, ಶಶಿಧರ, ಸೂರ್ಯನಾರಾಯಣ ಡಿ.ಕೆ, ಪ್ರಶಾಂತ ಆಚಾರ್ಯ, ಯಶೋಧರ ಕಜೆ, ಸುಚಿತ್ರಾ, ಪದ್ಮಶ್ರೀ, ವಿಮಲ, ಹಾಲು ಪರೀಕ್ಷಕ ಸುಧಾಕರ ಪೂಜಾರಿ, ಸಹಾಯಕ ರಾಜೇಶ್ ಉಪಸ್ಥಿತರಿದ್ದರು.

ಅಂಡಿಂಜೆ ಹಾ.ಉ.ಸ.ಸಂಘದ ಅಧ್ಯಕ್ಷ ಮೋಹನ್ ಅಂಡಿಂಜೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಸ್ಯ ಸುಕುಮಾರ್  ಕೈತ್ರೋಡಿ ವಂದಿಸಿ, ಸೌಮ್ಯಾ ಆರಂಬೋಡಿ ನಿರೂಪಿಸಿದರು.

Related posts

ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಪ್ರದೀಶ್ ಮರೋಡಿ ಆಯ್ಕೆ

Suddi Udaya

ಮುಂಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ : ಧಾರ್ಮಿಕ ಸಭೆ ಮತ್ತು ಭಜನಾ ಕಾರ್ಯಕ್ರಮ

Suddi Udaya

ಜಿಲ್ಲಾಧಿಕಾರಿ ಸಭೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮಲೆಕುಡಿಯ ಸಮುದಾಯದ ಮುಖಂಡರ ಒತ್ತಾಯ

Suddi Udaya

ವಿದ್ವತ್ ಜೆಇಇ ಸಾಧಕರಿಗೆ ಕಾಲೇಜು ವತಿಯಿಂದ ಅಭಿನಂದನೆ: 35 ವಿದ್ಯಾರ್ಥಿಗಳ ಪೈಕಿ 21 ಮಂದಿ ಶೇ.90 ಅಧಿಕ ಪರ್ಸೆಂಟೈಲ್ ಪಡೆದ ದಾಖಲೆ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ

Suddi Udaya

ಅಳದಂಗಡಿಯಲ್ಲಿ ಲೋಕೋಪಯೋಗಿ ಇಲಾಖೆಯವರು ಅಳವಡಿಸಿದ ನಾಮಫಲಕದಲ್ಲಿ ಗೊಂದಲ

Suddi Udaya
error: Content is protected !!