23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ

ಆರಂಬೋಡಿ: ಇತಿಹಾಸ ಪ್ರಸಿದ್ಧ, ಧಾರ್ಮಿಕ ಹಿನ್ನಲೆಯ ನಂಟು ಹೊಂದಿರುವ ಬೆಳ್ತಂಗಡಿ ತಾಲೂಕಿನ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಪೂಂಜ ಕ್ಷೇತ್ರದ ಆಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯರವರು ಡಿ . 21 ರಂದು ಚಾಲನೆಯನ್ನು ನೀಡಿದರು.

ಬಳಿಕ ಮಾತನಾಡಿದ ಅವರು, ಕೃಷಿಕರು ಮತ್ತು ಸ್ಥಳೀಯ ಗ್ರಾಮಸ್ಥರು ಒಟ್ಟುಗೂಡಿ ಮನೋರಂಜನೆ ಜೊತೆಗೆ ಧಾರ್ಮಿಕವಾಗಿ ನಂಬಿಕೆಗೆ ಪೂರಕವಾಗಿ ಮಾಗಣೆ ದೇವರು ಮತ್ತು ದೈವಗಳ ಅನುಗ್ರಹ ಪಡೆಯುವ ನಿಟ್ಟಿನಲ್ಲಿ ಕಂಬಳ ನಿರಂತರವಾಗಿ ನಡೆಯುವ ಅಗತ್ಯವಿದೆ, ಗ್ರಾಮ ಸುಭೀಕ್ಷೆ ಆಗಲಿದೆ ಎಂದರು. ಪಡ್ಯಾರಬೆಟ್ಟು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಧರ್ಮದರ್ಶಿ ಎ. ಜೀವಂದರ ಕುಮಾರ್ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಸಿದ್ದಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಪಿಡಿಒ ಗಣೇಶ್ ಶೆಟ್ಟಿ ಆರಂಬೋಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಯಿ ಗ್ರಾ. ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಬ್ಯಾಂಕ್ ಅಧಿಕಾರಿ ಸಂತೋಷ್ ಕುಮಾರ್ ಚೌಟ, ಸಮಿತಿ ಗೌರವಾಧ್ಯಕ್ಷ ಜಗತ್ಪಾಲ ಶೆಟ್ಟಿ ಉಮನೊಟ್ಟು, ಸಂಜೀವ ಶೆಟ್ಟಿ ಗುಂಡ್ಯಾರು, ಕೆ ಎಂಎಫ್ ನಿರ್ದೇಶಕ ಪ್ರಭಾಕರ ಹುಲಿಮೇರು, ಕೃಷಿಕ ಚಂದ್ರಶೇಖರ ಗೌಡ, ಓಟಗಾರ ಆನಂದ ಶೆಟ್ಟಿ ಹಕ್ಕೇರಿ, ಕುಟ್ಟಿ ಶೆಟ್ಟಿ ಹಕ್ಕೇರಿ, ಕರಿಯಣ್ಣ ಶೆಟ್ಟಿ ಹಕ್ಕೇರಿ, ದಿನೇಶ್ ಹುಲಿಮೇರು, ಸ್ಥಳದಾನಿ ಸುಧೀರ್ ಶೆಟ್ಟಿ ಹೊಕ್ಕಾಡಿಗೋಳಿ, ಪಶು ವೈದ್ಯಾಧಿಕಾರಿ ಡಾ. ಬಾಲಕೃಷ್ಣ, ಪ್ರಮುಖರಾದ ಸುಧಾಕರ ಚೌಟ ಬಾವ, ಪುಷ್ಪರಾಜ ಜೈನ್, ಪುಷ್ಪರಾಜ್ ಶೆಟ್ಟಿ, ಪ್ರವೀಣ್ ಕುಲಾಲ್, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸುಂದರ ಪೂಜಾರಿ ಎನ್., ಸಂತೋಷ್ ಶೆಟ್ಟಿ ಕೊನೆರೊಟ್ಟು, ಆಂಡ್ರು ರೇಗೋ, ನೋಣಯ ಪೂಜಾರಿ, ಅರುಣ್ ಬಾಕ್ಯಾರುಕೋಡಿ, ಕರಿಯ ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ಶಾಜಲ್ ಕಾರ್ಯಕ್ರಮ ನಿರೂಪಿಸಿದರು.

Related posts

ಕಳಿಯ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಬುರುಡೆ ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ: ಗೃಹ ಸಚಿವ ಪರಮೇಶ್ವರ್

Suddi Udaya

ಕುವೆಟ್ಟು ಜನಸ್ಪಂದನ ಸಭೆ

Suddi Udaya

ವಿಪರೀತ ಮಳೆ ಕಾರಣ ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ಮೇಲ್ಚಾವಣಿ ಕುಸಿತ: ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ

Suddi Udaya

ಉಜಿರೆ ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಓಡಿಲ್ನಾಳ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ಶಾರದೋತ್ಸವ ವಿಸರ್ಜನಾ ಕಾರ್ಯಕ್ರಮ

Suddi Udaya
error: Content is protected !!