September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪ್ರೊ.ಎಸ್ ಪ್ರಭಾಕರ್ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ

ಧರ್ಮಸ್ಥಳದ ವತಿಯಿಂದ ನಾವು ಹೊಸ ಸಂಸ್ಥೆಗಳನ್ನು ಪ್ರಾರಂಭಿಸುವಾಗ, ಇತರ ಸಂಸ್ಥೆಗಳ ಆಡಳಿತವನ್ನು ವಹಿಸಿಕೊಳ್ಳುವಾಗ, ಶಿಕ್ಷಣತಜ್ಞರೂ, ಆಡಳಿತ ಪರಿಣತರೂ ಆದ ಪ್ರೊ. ಎಸ್. ಪ್ರಭಾಕರ್ ಅವರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಪ್ರವೃತ್ತರಾಗುತ್ತಿದ್ದೆವು.

ಧಾರವಾಡದ ಜನತಾ ಶಿಕ್ಷಣ ಸಮಿತಿಯ ಆಡಳಿತ ವಹಿಸಿಕೊಳ್ಳುವಾಗ, ಉಡುಪಿ ಆಯುರ್ವೇದ ಕಾಲೇಜಿನ ಆಡಳಿತ ವಹಿಸುವಾಗ, ಮಂಗಳೂರಿನಲ್ಲಿ ಕಾನೂನು ಕಾಲೇಜು ಪ್ರಾರಂಭ, ಮೈಸೂರಿನಲ್ಲಿ ಎಸ್.ಡಿ.ಎಂ. ಐ.ಎಂ.ಡಿ. ಪ್ರಾರಂಭಿಸುವಾಗ, ರುಡ್‌ಸೆಟ್ ಸಂಸ್ಥೆಗಳ ಪ್ರಾರಂಭ, ಎಂ.ಎಂ.ಕೆ. ಮಹಿಳಾ ಕಾಲೇಜು ಆಡಳಿತ ವಹಿಸುವಾಗ ಪ್ರೊ. ಪ್ರಭಾಕರ್‌ರೊಂದಿಗೆ ಸಮಾಲೋಚನೆ ನಡೆಸಿರುವುದಲ್ಲದೆ, ಅನೇಕ ಬಾರಿ ನಾವು ಜೊತೆಯಾಗಿ ಧಾರವಾಡ, ಮೈಸೂರು, ಉಡುಪಿಗೆ ಹೋಗಿ ಪರಿಶೀಲನೆ ನಡೆಸಿ, ವಿಚಾರ, ವಿಮರ್ಶೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವು.

ನಮ್ಮ ಸಂಸ್ಥೆಗಳಿಗೆ ಅರ್ಹ ಪ್ರಾಂಶುಪಾಲರು, ನಿರ್ದೇಶಕರುಗಳು, ಉಪನ್ಯಾಸಕರುಗಳ ಆಯ್ಕೆ ಮತ್ತು ನೇಮಕಾತಿಯಲ್ಲಿಯೂ ಪ್ರೊ. ಎಸ್. ಪ್ರಭಾಕರ್ ಸಹಕಾರ ನೀಡಿರುತ್ತಾರೆ.
ಧರ್ಮಸ್ಥಳಕ್ಕೆ ಪ್ರಧಾನಿ ಇಂದಿರಾಗಾಂಧಿ, ರಾಷ್ಟ್ರಪತಿ ವಿ.ವಿ. ಗಿರಿ ಮೊದಲಾದ ಗಣ್ಯವ್ಯಕ್ತಿಗಳ ಭೇಟಿ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜನೆಯಲ್ಲಿ, ಲಕ್ಷದೀಪೋತ್ಸವ ಸಂದರ್ಭ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳಿಗೆ ಉದ್ಘಾಟಕರು, ಅಧ್ಯಕ್ಷರು ಹಾಗೂ ಸಾಹಿತಿಗಳು ಮತ್ತು ಕಲಾವಿದರನ್ನು ಆಹ್ವಾನಿಸುವಲ್ಲಿಯೂ ಅವರು ವಿಶೇಷ ಪಾತ್ರವಹಿಸಿದ್ದಾರೆ.

ಶಿಸ್ತುಬದ್ಧವಾಗಿ ಎಲ್ಲಾ ಕಾರ್ಯಕ್ರಮಗಳ ಸಂಘಟನೆಯಲ್ಲಿ ಅವರು ಸಹಕರಿಸುತ್ತಿದ್ದರು. ಅವರ ನಿಧನ ನಮ್ಮ ಸಂಸ್ಥೆಗಳಿಗೆ ತುಂಬಲಾರದ ನಷ್ಟವೇ ಸರಿ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

Related posts

ಎಕ್ಸೆಲ್ ನಲ್ಲಿ ದ್ವಿತೀಯ ಪಿಯುಸಿ ರಾಜ್ಯ ಟಾಪರ್ಸ್ ಗೆ ಲಕ್ಷ ಮೊತ್ತದೊಂದಿಗೆ, ಸನ್ಮಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಗುರುವಾಯನಕೆರೆ – ‘ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ-

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಅಂತರ್ ಕಾಲೇಜು ಚರ್ಚಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ -ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ತೃತೀಯ ಸ್ಥಾನ

Suddi Udaya

ಬೆಳ್ತಂಗಡಿ ರಾಜಕೇಸರಿ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ ರವರಿಗೆ ಸ್ಪೂರ್ತಿ ಕುಮಾರ ಸೇವಾ ರತ್ನ ಪ್ರಶಸ್ತಿ

Suddi Udaya

ಉಜಿರೆಯಲ್ಲಿ ಆಟಿಡೊಂಜಿ ದಿನ ಆಚರಣೆ

Suddi Udaya
error: Content is protected !!