25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು ಸರಕಾರಿ ಪ್ರೌಢ ಶಾಲೆಯ ಗಣಿತ ಶಿಕ್ಷಕಿ ಪುಷ್ಪರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ನಾವೂರು ಸರಕಾರಿ ಪ್ರೌಢಶಾಲೆ ಯಲ್ಲಿ 14 ವರ್ಷ 5 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಪ್ರಸಕ್ತ ಸಾಲಿನಲ್ಲಿ ಮಂಗಳೂರಿಗೆ ವರ್ಗಾವಣೆಗೊಂಡಿರುವ ಗಣಿತ ಶಿಕ್ಷಕಿ ಶ್ರೀಮತಿ ಪುಷ್ಪ ಇವರ ಬೀಳ್ಕೊಡುಗೆ ಕಾರ್ಯಕ್ರಮ ಡಿ.20 ರಂದು ನೆರವೇರಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನಂದ, ಸದಸ್ಯರಾದ ಗಣೇಶ ಗೌಡ, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಮಮತಾ ಪ್ರಿಯಾ ಉಪಸ್ಥಿತರಿದ್ದರು. ಅಲ್ಲದೆ ಎಸ್ ಡಿ ಯಂ ಸಿ ಉಪಾಧ್ಯಕ್ಷ ಉಮೇಶ್ ಪ್ರಭು ಹಡೀಲ್ ,ಮುಖ್ಯ ಶಿಕ್ಷಕರು ರಾಜೇಂದ್ರ ಭಟ್ ಹಾಗೂ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಹಾಗೂ ಬಿಸಿ ಊಟ ಸಿಬ್ಬಂದಿ ಉಪಸ್ಥಿತರಿದ್ದರು.

ಮಕ್ಕಳು, ಶಿಕ್ಷಕರು ಅವರ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು. ವೈದ್ಯರು ಪ್ರದೀಪ್ ನಾವೂರು ಇವರ ಉಪಸ್ಥಿತಿಯಲ್ಲಿ ಪುಷ್ಪ ಅವರನ್ನು ಅಭಿನಂದಿಸಲಾಯಿತು. ಪುಷ್ಪ ರವರ ವತಿಯಿಂದ ರೂ,. 20,000 ಮೊತ್ತವನ್ನು ಎಸ್ ಎಸ್ ಎಲ್ ಸಿ ಯಲ್ಲಿ 500 ಅಂಕ ಕ್ಕಿಂತ ಹೆಚ್ಚು ಅಂಕ ಬಂದ ವಿದ್ಯಾರ್ಥಿಗಳಿಗೆ ಅದರ ಬಡ್ಡಿ ಹಣ ನೀಡಿ ಗೌರವಿಸುವ ಸಲುವಾಗಿ ಶಾಲೆಗೆ ಹಸ್ತಾಂತರ ಮಾಡಿದರು.

ಮೀನಾ ಕಾರ್ಯಕ್ರಮ ನಿರೂಪಿಸಿ, ವಿನೋದ ಸ್ವಾಗತಿಸಿ, . ಭವ್ಯ ಧನ್ಯವಾದವಿತ್ತರು.

Related posts

ಬೆಳ್ತಂಗಡಿ : ಗ್ರಾಮೀಣ ಭಾಗದ ವಿವಿಧೆಡೆ ಕಾಲುಸಂಕ ನಿರ್ಮಾಣಕ್ಕೆ ರೂ.1 ಕೋಟಿ ಅನುದಾನ ಮಂಜೂರು: ಶಾಸಕ ಹರೀಶ್ ಪೂಂಜ

Suddi Udaya

ಮೂರು ತಿಂಗಳ ಹಿಂದೆ ಗೇರುಕಟ್ಟೆ ಕೆರೆಯಲ್ಲಿ ಸಿಕ್ಕ ಶವದ ಗುರುತು ಪತ್ತೆ: ಮೃತಪಟ್ಟವರು ಗೇರುಕಟ್ಟೆಯ ಉಮರ್ ಫಾರೂಕ್ ಡಿಎನ್‌ಎ ವರದಿಯಲ್ಲಿ ದೃಢ

Suddi Udaya

ಮೊಗ್ರು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಸಭೆ; ನೂತನ ಸಮಿತಿ ರಚನೆ

Suddi Udaya

ನಾರಾವಿ ಕಾಲೇಜಿನಲ್ಲಿ ಉಚಿತ ಫಿಸಿಯೋಥೆರಪಿ ಹಾಗೂ ಹೋಮಿಯೋಪಥಿಕ್ ತಪಸಣಾ ಶಿಬಿರ

Suddi Udaya

ಕುತ್ಲೂರು: ಅಡಿಕೆ ಬೆಳೆ ಕೊಳೆರೋಗ ನಿಯಂತ್ರಣ, ಎಲೆಚುಕ್ಕಿ ರೋಗದ ಬಗ್ಗೆ ಹಾಗೂ ಬಯೊಗ್ಯಾಸ್ ಅಳವಡಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಕಳೆಂಜ ಗ್ರಾ.ಪಂ. ನಲ್ಲಿ ನೌಕರರು ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya
error: Content is protected !!