23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುಲ್ಕೇರಿ ಹಾ.ಉ. ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುಷ್ಪಾವತಿ ನಿತ್ಯಾನಂದ, ಉಪಾಧ್ಯಕ್ಷರಾಗಿ ವಿದ್ಯಾ ಗೋರೆ

ಸುಲ್ಕೇರಿ: ಸುಲ್ಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ನಿತ್ಯಾನಂದ ನಾವರ, ಉಪಾಧ್ಯಕ್ಷರಾಗಿ ಶ್ರೀಮತಿ ವಿದ್ಯಾ ಗೋರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷೆ ಪುಷ್ಪಾವತಿ ಎನ್ ನಾವರ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳ್ತಂಗಡಿ ಲಯನೆಸ್ಸ್ ಕ್ಲಬ್ ಅಧ್ಯಕ್ಷೆಯಾಗಿ, ಅಳದಂಗಡಿ ಗ್ರಾ.ಪಂ ಸದಸ್ಯೆಯಾಗಿ, ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ. ಸಂಘದ ನಿರ್ದೇಶಕರಾಗಿ, ಮಹಿಳಾ ಬಿಲ್ಲವ ವೇದಿಕೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕಳೆದ ಅವಧಿಯ ಯಶಸ್ವಿ ಅಧ್ಯಕ್ಷೆ ವಿದ್ಯಾ ಗೋರೆ ಅವರು ಈ ಭಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಶ್ರೀಮತಿ ರುಕ್ಮಿಣಿ ಹೆಗ್ಡೆ, ಶ್ರೀಮತಿ ಹೇಮಲತಾ ಶೆಟ್ಟಿ, ಶ್ರೀಮತಿ ಲಲಿತ, ಶ್ರೀಮತಿ ಸ್ವಪ್ನ, ಶ್ರೀಮತಿ ವಿದ್ಯಾಶ್ರೀ ಪಿ ಜೈನ್, ಶ್ರೀಮತಿ ಪುಷ್ಪ, ಶ್ರೀಮತಿ ವಾರಿಜಾ, ಶ್ರೀಮತಿ ಸುಚಿತ್ರ, ಶ್ರೀಮತಿ ಸೌಮ್ಯ, ಶ್ರೀಮತಿ ಪ್ರೇಮಲತಾ, ಶ್ರೀಮತಿ ಲೀಲಾ ಇವರುಗಳು ಅವಿರೋಧವಾಗಿ ಆಯ್ಕೆಯಾಗುರುತ್ತಾರೆ. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿಯಾಗಿ ಬಿ ನಾಗೇಂದ್ರ ನಡೆಸಿಕೊಟ್ಟರು.

Related posts

ಬೆಳ್ತಂಗಡಿ ನ್ಯಾಯಾಲಯಕ್ಕೆ‌ ಹಾಜರಾದ ಬುರುಡೆ ಚಿನ್ನಯ್ಯ ವಾಪಸ್ ಶಿವಮೊಗ್ಗ ಜೈಲಿಗೆ ಭದ್ರತೆಯಲ್ಲಿ ಪ್ರಯಾಣ

Suddi Udaya

ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಧರ್ಮಸ್ಥಳ ಶ್ರೀ ಮಂ.ಅ. ಪ್ರೌಢಶಾಲೆ ಶಿಕ್ಷಕ ಶಶಿಧರ ಡಿ. ಆಯ್ಕೆ

Suddi Udaya

ಮರೋಡಿ ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಸಮಾರೋಪ ಸಮಾರಂಭ

Suddi Udaya

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಎಸ್ ಡಿ ಯಂ ಪಾಲಿಟೆಕ್ನಿಕ್ – ಪ್ರಥಮ ಚಿಕಿತ್ಸೆ ತರಬೇತಿ

Suddi Udaya
error: Content is protected !!