September 6, 2026
Uncategorized

ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಸಮ್ಮೇಳನ ಸಂಯೋಜನ ಸಮಿತಿ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿಪೂರ್ವ ಕಾಲೇಜು, ಕೊಯ್ಯರು ಇದರಸಂಯುಕ್ತ ಆಶ್ರಯ: . ಕೊಯ್ಯೂರಿನಲ್ಲಿ ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಕೊಯ್ಯೂರು : ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಸಮ್ಮೇಳನ ಸಂಯೋಜನ ಸಮಿತಿ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿಪೂರ್ವ ಕಾಲೇಜು, ಕೊಯ್ಯರು ಇದರ
ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳ ಡಿ.28ರಂದು ಸರಕಾರಿ ಪ್ರೌಢ ಶಾಲೆ, ಕೊಯ್ಯರು ನಲ್ಲಿ ಆರಂಭ ಗೊಂಡಿತು.
ಬೆಳಗ್ಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ಸ. ಹಿ. ಪ್ರಾ. ಶಾಲೆ, ಕೊಯ್ಯರು – ಅಮೃತಕೊಯ್ಲು ಸಭಾಂಗಣದಿಂದ ಸಮ್ಮೇಳನದ ಸಭಾಂಗಣದವರೆಗೆ ಅದ್ದೂರಿಯಾಗಿ ನಡೆಯಿತು.


ಮೆರವಣಿಗೆಗೆ ಚಾಲನೆಯನ್ನು ಕೆ. ಮೋಹನ್ ಕುಮಾರ್, ಸಂಚಾಲಕರು, ‘ಬದುಕು ಕಟ್ಟೋಣ ಬನ್ನಿ, ಸೇವಾ ಟ್ರಸ್ಟ್ ಉಜಿರೆ ನೆರವೇರಿಸಿದರು.

ಬೆಳಗ್ಗೆ ರಾಷ್ಟ್ರ ಧ್ವಜರೋಹಣವನ್ನು ಶಿವಶಂಕರ್ ನಾಯಕ್, ರೈತಬಂಧು, ಮಾರುತಿಪುರ, ಕಣಿಯೂರು,ಪರಿಷತ್ತು ಧ್ವಜಾರೋಹಣವನ್ನು ಡಾ. ಎಂ. ಪಿ. ಶ್ರೀನಾಥ, ಅಧ್ಯಕ್ಷರು, ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನ ಧ್ವಜಾರೋಹಣವನ್ನು ಡಿ. ಯದುಪತಿ ಗೌಡ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಘಟಕ ನೆರವೇರಿಸಿದರು.

ಬೆಳ್ತಂಗಡಿ ತಾಲೂಕು ಯ19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸಿ, ಹಿಂಗಾರ ಅರಳಿಸಿ‌ ಕೆ. ಚಿನ್ನಪ್ಪ ಗೌಡ, ವಿಶ್ರಾಂತ ಕುಲಪತಿಗಳು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ, ಹಾವೇರಿ ಉದ್ಘಾಟಿಸಿ,ದಿಕ್ಕೂಚಿ ಭಾಷಣ ಮಾಡಿದರು.

ಸಮ್ಮೇಳನಾಧ್ಯಕ್ಷತೆಯನ್ನು ಬಿ. ಭುಜಬಲಿ, ಧರ್ಮಸ್ಥಳ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಎ. ಕೃಷ್ಣಪ್ಪ ಪೂಜಾರಿ ಅವರು ರೇಣುಕಾ ಸುಧೀರ್ ಅರಸಿನಮಕ್ಕಿ ಇವರ ಕವನ ಸಂಕಲನ ‘ಹೃದಯಾಂತರಾಳದ ಮಾತು’ ಕೃತಿಯನ್ನು ಬಿಡುಗಡೆಗೊಳಿಸಿದರು.

ಮುಖ್ಯ ಅಭ್ಯಾಗತರಾಗಿ ಶ್ರೀಮತಿ ದಯಾಮಣಿ, ಅಧ್ಯಕ್ಷರು, ಗ್ರಾ. ಪಂ., ಕೊಯ್ಯೂರು,., ಶ್ರೀಮತಿ ತಾರಕೇಸರಿ, ಕ್ಷೇ. ಶಿ., ಶಾಲಾ ಶಿಕ್ಷಣ ಇಲಾಖೆ ಬೆಳ್ತಂಗಡಿ ಭಾಗವಹಿಸಿದ್ದರು.


ಧರ್ಣಪ್ಪ ಗೌಡ ಹಲೆಕ್ಕಿ, ಗೌರವಾಧ್ಯಕ್ಷರು, ಸ. ಸಂ. ಸಮಿತಿ, ಬಿ. ಬಾಲಕೃಷ್ಣ ಪೂಜಾರಿ ಬಜೆ, ಗೌರವಾಧ್ಯಕ್ಷರು, ಸ. ಸಂ. ಸಮಿತಿ, ಪಿ. ಪ್ರಚಂಡಭಾನು ಭಟ್ ಪಾಂಬೇಲು, ಗೌರವಾಧ್ಯಕ್ಷರು, ಸ. ಸಂ. ಸಮಿತಿ ಗೌರವ ಉಪಸ್ಥಿತರಿದ್ದರು.
ಡಾ. ಎಂ. ಪಿ. ಶ್ರೀನಾಥ, ಅಧ್ಯಕ್ಷರು, ದ. ಕ. ಜಿ. ಕ. ಸಾ. ಪ. ಅವರು ‘ಚಾರುಮುಡಿ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ,. ಆಶಯ ನುಡಿಗಳನ್ನಾಡಿದರು.


ಯದುಪತಿ ಗೌಡ, ಅಧ್ಯಕ್ಷರು, ಕ. ಸಾ. ಪ. ಬೆಳ್ತಂಗಡಿ ತಾಲೂಕು ಘಟಕ ಪ್ರಾಸ್ತಾವಿಕವಾಗಿ ಮಾತನಾಡಿದರು.


ವೇದಿಕೆಯಲ್ಲಿ ಸ.ಸಂ.ಸಮಿತಿ ಕಾಯಾ೯ಧ್ಯಕ್ಷರಾದ ಮೋಹನ್ ಗೌಡ, ರಾಧಾಕೃಷ್ಣ ತಚ್ಚಮೆ, ಪ್ರಧಾನ ಸಂಚಾಲಕ ದಾಮೋದರ ಗೌಡ ಬೆಕೆ೯,
ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ ಪಾಂಬೇಲು, ಸಂಘಟನಾ ಕಾರ್ಯದರ್ಶಿ ಕೇಶವ ಗೌಡ ಕೋಂಗುಜೆ, ಕಾಯ೯ದಶಿ೯ ಗೀತಾ ರಾಮಣ್ಣ ಗೌಡ, ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್, ಶ್ರೀಮತಿ ಪ್ರಮೀಳಾ ಹೋಬಳಿ ಅಧ್ಯಕ್ಷ ದಿವಾ ಕೊಕ್ಕಡ ಉಪಸ್ಥಿತರಿದ್ದರು.

ಅಶೋಕ್ ಭಟ್ ಅಗ್ರಸಾಲೆ, ಅಧ್ಯಕ್ಷರು, ಸ. ಸಂ. ಸಮಿತಿ, ಕೊಯ್ಯರು ಸ್ವಾಗತಿಸಿದರು. ರಾಮಚಂದ್ರ ದೊಡಮನಿ ಮತ್ತು ಶ್ರೀಮತಿ ದೀಪ್ತಿ ಹೆಗ್ಡೆ
ಕಾರ್ಯಕ್ರಮ ನಿರ್ವಹಣೆ ಮಾಡಿದರು. ರಾಮಕೃಷ್ಣ ಭಟ್, ಬೆಳಾಲು, ಕಾರ್ಯದರ್ಶಿ, ಕ. ಸಾ. ಪ. ಬೆ. ತಾ. ಘಟಕ ಧನ್ಯವಾದವಿತ್ತರು.

Related posts

ಮಡಂತ್ಯಾರು ಗ್ರಾ.ಪಂ ಪಾರೆಂಕಿ 1 ನೇ ಕ್ಷೇತ್ರದ ಉಪಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಡೆ

Suddi Udaya

ಕೆದ್ದುವಿನಲ್ಲಿ ಅನಾಥವಾಗಿದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

Suddi Udaya

ಅರಣ್ಯ ಇಲಾಖೆಯಿಂದ ಪ್ರಗತಿ ಬಂಧು ತಂಡಗಳಿಗೆ ಗಿಡ ವಿತರಣೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಳ್ತಂಗಡಿ ಎಸ್.ಡಿ.ಎಂ. ಶಾಲಾ ವಿದ್ಯಾರ್ಥಿ ಅಭಿಷೇಕ್ ತಾಲೂಕಿಗೆ ಪ್ರಥಮ

Suddi Udaya

ಆ.22: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಶ್ರೀ ಧರ್ಮಸ್ಥಳದಲ್ಲಿ 27ನೇ ವಷ೯ದ ಭಜನಾ ಕಮ್ಮಟ ಆರಂಭ182 ಮಂದಿ ಶಿಬಿರಾರ್ಥಿಗಳು ಭಾಗಿ

Suddi Udaya
error: Content is protected !!