25.7 C
ಪುತ್ತೂರು, ಬೆಳ್ತಂಗಡಿ
March 7, 2026
ಶಾಲಾ ಕಾಲೇಜು

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾಗಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಸವಣಾಲು:ಡಿ. 27ರಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಇಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾಗಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರಗಿತು.


ಬೆಳಿಗ್ಗೆ 9-00 ಗಂಟೆಗೆ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀ ಗಜಾನನ ಭಟ್ ನಿವೃತ್ತ (ACF)ಅರಣ್ಯ ಇಲಾಖೆಯ ಸಹಾಯಕ ಆಯುಕ್ತರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಣೇಶ್ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಇವರು ಕಾರ್ಯಕ್ರಮ ಉದ್ಘಾಟಿಸಿದರು ಆಟೋಟ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀ ಲೋಕನಾಥ ಶೆಟ್ಟಿ, ಸದಸ್ಯರಾದ ಶ್ರೀ ಚಂದ್ರಶೇಖರ , ಶ್ರೀ ಪ್ರಭಾಕರ ಆಚಾರ್ಯ, ಶ್ರೀಮತಿ ಜಯಲಕ್ಷ್ಮೀ, ಲ|ಮುರಳಿ ಬಲಿಪ ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರು ,ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ದಯಾನಂದ ರೈ, ಉಪಾಧ್ಯಕ್ಷ ಶ್ರೀ ದಾಮೋದರ ಬಂಗೇರ, ಶ್ರೀಮತಿ ಪ್ರೇಮಾ, ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ ಜಿ, ಶ್ರೀಮತಿ ಮಲ್ಲಿಕಾ , ವಿದ್ಯಾರ್ಥಿ ನಾಯಕ ಧನ್ ರಾಜ್ ಇವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಕಾರ್ಯದರ್ಶಿ ಶ್ರೀ ಕೂಸಪ್ಪ ಇವರು ಸ್ವಾಗತಿಸಿದರು,ಶ್ಶ್ರೀ ದಯಾನಂದ ರೈ ಧನ್ಯವಾದವಿತ್ತರು,ಶ್ರೀ ಶಿವಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು . ರಾಷ್ಟ ಗೀತೆಯೊಂದಿಗೆ ಬೆಳಗಿನ ಕಾರ್ಯಕ್ರಮ ಮುಕ್ತಾಯವಾಯಿತು.

Related posts

ಧರ್ಮಸ್ಥಳದಲ್ಲಿ ಎಸ್.ಡಿ.ಎಮ್. ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶ

Suddi Udaya

ರಾಣಿ ಅಬ್ಬಕ್ಕ 500 ವಿಶೇಷ ಉಪನ್ಯಾಸ ಕಾರ್ಯಕ್ರಮ: ಶ್ರೀಮತಿ ರಶ್ಮಿತಾ ಜೈನ್ ಇವರಿಗೆ ರಾಣಿ ಅಬ್ಬಕ್ಕ ವಿಶೇಷ ಪುರಸ್ಕಾರ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬ ಅವಿನ್ಯ- 2025

Suddi Udaya

ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುಟ್ಟಿಕಲದ್ದಲ್ಲಿ ಆಂಗ್ಲ ಮಾಧ್ಯಮ ಒಂದನೇ ತರಗತಿಯ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ಸರ್ಕಾರಿ ಮಾದರಿ ಹಿ.ಪ್ರಾ ಶಾಲೆಯಲ್ಲಿ ಸಂಭ್ರಮ ಶನಿವಾರಕ್ಕೆ ಚಾಲನೆ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದ ಉದ್ಘಾಟನೆ

Suddi Udaya
error: Content is protected !!