ಅರಸಿನಮಕ್ಕಿ: ಅರಸಿನಮಕ್ಕಿಯಲ್ಲಿ ಜನೌಷಧಿ ಮಳಿಗೆ ಉದ್ಘಾಟನೆ ನೆರವೇರಿಸಿದ ಕೇಂದ್ರ ಕಾರ್ಮಿಕ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನಿಡ್ಲೆ ಅಗ್ರಿಲೀಫ್ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಅವಿನಾಶ್ ರಾವ್ ಅವರು ಭೇಟಿ ಮಾಡಿ, ತಮ್ಮ ಸಂಸ್ಥೆಯ ಉತ್ಪನ್ನಗಳನ್ನು ನೀಡಿದರು.
ಶೋಭಾ ಅವರ ಭಾವಚಿತ್ರವುಳ್ಳ, ಸಂಸ್ಥೆಯಲ್ಲಿ ತಯಾರು ಮಾಡಿದ ಬಾಕ್ಸ್ ಮಾದರಿಯ ಮರದ ಉತ್ಪನ್ನವನ್ನು ಉಡುಗೊರೆಯಾಗಿ ನೀಡಿದರು.ಅಗ್ರಿಲೀಫ್ ಉತ್ಪನ್ನ ಹಾಗೂ ಅವರ ಪರಿಸರ ಸ್ನೇಹಿ ಕೆಲಸಗಳಿಗೆ ಸಚಿವೆ ಶೋಭಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜಾ ಅವರು ಕೂಡ ಗ್ರಾಮೀಣ ಭಾಗದಲ್ಲಿ ಅಗ್ರಿಲೀಫ್ ಮಾಡುತ್ತಿರುವ ಕಾರ್ಯಗಳ ಬಗ್ಗೆ ಸಚಿವೆಗೆ ವಿವರಣೆ ನೀಡಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹತ್ಯಡ್ಕ ಸೊಸೈಟಿ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ರಾಜು ಸಾಲ್ಯಾನ್, ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು.











