25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಾಜ್ಯ ಮಟ್ಟದ ಸ್ಕೌಟ್ಸ್‌ & ಗೈಡ್ಸ್‌ ಜಾಂಬೋರೇಟ್‌ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಕ್ಕಿ ಕೊಡುಗೆ

ಬೆಳ್ತಂಗಡಿ: ಡಿ.27 ರಿಂದ ಜ. 1 ರವರೆಗೆ 7 ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ 29 ನೇ ಸ್ಕೌಟ್ಸ್‌ & ಗೈಡ್ಸ್‌ ಜಾಂಬೋರೇಟ್ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಕ್ವಿಂಟಾಲ್‌ ಅಕ್ಕಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಸಾದ ರೂಪದಲ್ಲಿ ನೀಡಿ ಜಾಂಬೋರೇಟ್ ಗೆ ಶುಭ ಹಾರೈಸಿದ್ದಾರೆ.

ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೆಂದ್ರ ಕುಮಾರ್‌ ಇವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಛತ್ರದಿಂದ ಕಳುಹಿಸಿಕೊಡಲಾಯಿತು. ಅಕ್ಕಿಯನ್ನು ಕಳುಹಿಸುವ ಸಂದರ್ಭದಲ್ಲಿ ಭಾರತ್‌ ಸ್ಸ್ಕೌಟ್ಸ್‌ & ಗೈಡ್ಸ್‌, ಬೆಳ್ತಂಗಡಿ ಸ್ಧಳೀಯ‌ ಸಂಸ್ದೆಯ ಕಾರ್ಯದರ್ಶಿ ಪ್ರಮೀಳಾ , ಜಿಲ್ಲಾ ಸಹಾಯಕ ಆಯುಕ್ತರಾದ ಬಿ ಸೋಮಶೇಖರ ಶೆಟ್ಟಿ ಮತ್ತು ಅನ್ನಪೂರ್ಣ ಛತ್ರದ ನಿರ್ವಹಣಾಧಿಕಾರಿಯಾದ ಜಿ ಸುಬ್ರಮಣ್ಯ ಪ್ರಸಾದ್‌ ಹಸಿರು ನಿಶಾನೆ ತೋರಿಸಿ ಪ್ರಯಾಣಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅನ್ನಪೂರ್ಣ ಛತ್ರದ ಭರತ್‌ರಾಜ್‌ ಜೈನ್‌, ಎಸ್.ಡಿ.ಎಂ.ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ರಾಜೇಶ ಬಿ, ರೋವರ್‌ ಸ್ಕೌಟ್‌ ಲೀಡರ್‌ ಲಕ್ಷ್ಮೀಶ ಭಟ್ಟ,ರೋವರ್ ಸರ್ವೇಶ್‌ ಜೈನ್‌, ತೇಜಸ್ವಿ ಹೆಗಡೆ ಉಪಸ್ಥಿತರಿದ್ದು ಶುಭ ಹಾರೈಸಿದರು.

Related posts

ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜು: ಸ್ಕಾರ್ಫ್ ಡೇ ಆಚರಣೆ

Suddi Udaya

ಅಳದಂಗಡಿ:ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್ ಮತ್ತು ಪೂಜಾ ಸಾಮಾಗ್ರಿಗಳ ಅಂಗಡಿ ಶುಭಾರಂಭ

Suddi Udaya

ಭಾರಿ ಮಳೆ ನಾಳೆ (ಜೂ.27) ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Suddi Udaya

ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜಿಗೆ ಅಂತಾರಾಷ್ಟ್ರೀಯ ಗಣ್ಯರ ಭೇಟಿ: ಜಪಾನ್ ದೇಶದ ಪ್ರೋ. ಮಾಸ ಕಟೋಕ, ಕಾಂಬೋಡಿಯಾ ಸಚಿವ ಇಕೆ ಬುಂತ  ಭೇಟಿ

Suddi Udaya

ಹೊಸಂಗಡಿ: ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಂದ ಉದ್ಘಾಟನೆ

Suddi Udaya

ಕುತ್ಲೂರು : ಬಿಜೆಪಿಯಿಂದ ಮನೆ‌ ಮನೆ ಭೇಟಿ ಕಾರ್ಯಕ್ರಮ

Suddi Udaya
error: Content is protected !!