25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿ

ಕರಂಬಾರು: ತಾಯಿಯ ಉತ್ತರಕ್ರಿಯೆ ಬೆನ್ನಲ್ಲೇ ಮಗ ನಿಧನ

ಬೆಳ್ತಂಗಡಿ : ತಾಯಿಯ ಉತ್ತರಕ್ರಿಯೆ ಬೆನ್ನಲ್ಲೇ ಮಗ ಅನಾರೋಗ್ಯದಿಂದ ಮೃತರಾದ ಘಟನೆ ಕರಂಬಾರು ಗ್ರಾಮದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಾಜಿಮುಗೇರು ದರ್ಬೆ ನಿವಾಸಿ ಚನ್ನು (70) ಎಂಬವರು ಇತ್ತೀಚೆಗೆ ನಿಧನರಾಗಿದ್ದು ಇವರ ಉತ್ತರಕ್ರಿಯೆಯು ಕಳೆದ ಮಂಗಳವಾರ ನಡೆದಿತ್ತು.

ತಾಯಿಯ ಉತ್ತರಕ್ರಿಯೆ ಮರುದಿನ ಅವರ ಮಗ ಮಹಾಬಲ ಎಂಬವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಹಾಬಲ (42) ಅವರು ಚಿಕಿತ್ಸೆಗೆ ಸ್ಪಂದಿಸದೆ ತಮ್ಮ ತಾಯಿ ಮರಣದ 18ನೇ ದಿನಕ್ಕೆ ನಿಧನರಾಗಿದ್ದು ಇವರ ಕುಟುಂಬಕ್ಕೆ ಒಂದರ ಬೆನ್ನಲ್ಲೇ ಇನ್ನೊಂದು ಆಘಾತ ಬಂದಂತಾಗಿದೆ.
ಮೃತರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಸಹೋದರ ಇಬ್ಬರು ಸಹೋದರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಆರಂಬೋಡಿ ಬಿರ್ವೆರ್ ಕೂಟ ವತಿಯಿಂದ ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ. ಕಾಶಿಪಟ್ಣ ರವರಿಗೆ ಸನ್ಮಾನ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ನಡ/ ಕನ್ಯಾಡಿ ಗ್ರಾಮ ಸಮಿತಿ ಮಹಿಳಾ ವೇದಿಕೆ ವತಿಯಿಂದ ಒಂಬತ್ತನೇ ವರ್ಷದ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ಕರಂಬಾರು ಹಿ.ಪ್ರಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

Suddi Udaya

ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ ರಾಜ ಕೇಸರಿ ಸಂಘಟನೆಯಿಂದ ಸ್ವಚ್ಛತಾ ಕಾರ್ಯ

Suddi Udaya

ನಾರಾವಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!