27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

“ಶಾಂತಿವನ ಟ್ರಸ್ಟ್ ” ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ 31 ನೇ ವರ್ಷದ ರಾಜ್ಯಮಟ್ಟದ “ಜ್ಞಾನ ರಥ- ಜ್ಞಾನ ಪಥ” ನೈತಿಕ ಮೌಲ್ಯಾಧಾರಿತ ಪುಸ್ತಕ ಸ್ಪರ್ಧೆಗಳ ಪುರಸ್ಕಾರ

ಧರ್ಮಸ್ಥಳ: ಗಿನ್ನಿಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶಾಂತಿವನ ಟ್ರಸ್ಟ್ ಆಡಳಿತಕ್ಕೊಳಪಟ್ಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ 31 ನೇ ವರ್ಷದ ರಾಜ್ಯಮಟ್ಟದ ಜ್ಞಾನ ರಥ ಮತ್ತು ಜ್ಞಾನ ಪಥ (ಪುಷ್ಪ 55 ಮತ್ತು 56 ನೈತಿಕ ‘ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ಪುರಸ್ಕಾರ ಸಮಾರಂಭವು ಜ.2 ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಿತು.

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಶಾಂತಿವನದ ಟ್ರಸ್ಟಿಗಳಾದ ಡಾ. ಹೇಮಾವತಿ ವೀ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್,ಕ್ಷೇಮನದ ನಿರ್ದೇಶಕರಾದ ಶ್ರೀಮತಿ ಶ್ರದ್ದಾ ಅಮಿತ್,ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಯು. ಜಗನ್ನಾಥ್ ಉಪಸ್ಥಿತರಿದ್ದರು .

ಜೀವನ ಮೌಲ್ಯ ಹಾಸ್ಯ ಭಾಷಣಕಾರರು ಶ್ರೀಮತಿ ಸಂಧ್ಯಾ ಶೆಣೈ ಉಡುಪಿ ಶುಭಾಶಂಸನೆಗೈದರು.

ನಂತರ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರಿಸಲಾಯಿತು. ಉಜಿರೆ ಎಸ್.ಡಿ.ಎಮ್ ಕಲಾಕೇಂದ್ರದಿಂದ ಕಥಕ್ ನೃತ್ಯ ನಡೆಯಿತು.

ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ನಿರ್ದೇಶಕ ಡಾ. ಐ ಶಶಿಕಾಂತ್ ಜೈನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪಡುಬಿದ್ರೆ ಶಿಕ್ಷಕ ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಪೂಜಾರಿ ಬಾರ್ಕೂರು ಧನ್ಯವಾದವಿತ್ತರು.

Related posts

ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ. 7 ಡಿವಿಡೆಂಟ್

Suddi Udaya

ವಿ. ಹರೀಶ್ ನೆರಿಯ ರವರಿಗೆ ದ್ವಾರಕಾ ಮಯಿ ಮಠ ದಿಂದ “ಭಜಕ ವಿಠಲ ಪ್ರಿಯ” ಗೌರವ ಪುರಸ್ಕಾರ ಪ್ರಧಾನ ಮಾಡಿ ಆಶೀರ್ವದಿಸಿದ ಯತಿ ವರೇಣ್ಯರು

Suddi Udaya

ಮಚ್ಚಿನ: ಹೆನ್ರಿ ರೋಡ್ರಿಗಸ್ ನಿಧನ

Suddi Udaya

ಬೆಳಾಲು ಪ್ರೌಢಶಾಲೆಯ ಮಕ್ಕಳಿಗೆ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ:ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಬೇಸಾಯದ ಪಾಠ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾದ್ಯಮ (ರಾಜ್ಯ ಪಠ್ಯಾಕ್ರಮ) ಶಾಲೆಯಲ್ಲಿ ಹೊಸ ವರ್ಷ ಆಚರಣೆ

Suddi Udaya

ಬೆಳ್ತಂಗಡಿ :ಸ್ಕ್ರೀನ್ ಪ್ರಿಂಟ್ ಮಾಲಕ ಬಿ.ಕೆ. ಹರಿಪ್ರಸಾದ್ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya
error: Content is protected !!