27.4 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಿಯೋನ್ ಆಶ್ರಮದಲ್ಲಿ ಹೊಸವರ್ಷ ಸಂಭ್ರಮ ಹಾಗೂ ಸ್ನೇಹಭೋಜನ ಕಾರ್ಯಕ್ರಮ

ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್ , ಗಂಡಿಬಾಗಿಲು ಇಲ್ಲಿ ಹೊಸವರ್ಷ ಸಂಭ್ರಮಾಚರಣೆ, ವಾಹನ ಚಾಲಕ-ಮಾಲಕರ ಸಂಘ ಹಾಗೂ ಊರ-ನೆರೆಕರೆಯ ಗ್ರಾಮಸ್ಥರಿಂದ 13ನೇ ವರ್ಷದ ಸ್ನೇಹಭೋಜನ ಕಾರ್ಯಕ್ರಮವನ್ನು ಜ.01 ರಂದು ಆಚರಿಸಲಾಯಿತು.

ಅನುಗ್ರಹ ಮೆಲೋಡಿಯಸ್ ಕಕ್ಕಿಂಜೆ ತಂಡದವರಿಂದ ಗಾನ ಸಂಗೀತ ಕಾರ್ಯಕ್ರಮ ಸುಗಮವಾಗಿ ನೆರವೇರಿತು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಡಾ.ಯು.ಸಿ.ಪೌಲೋಸ್ ರವರು ಹೊಸ ವರ್ಷಕ್ಕೆ ಶುಭಾಶಯಗಳನ್ನು ಹಾರೈಸಿದರು. ಸಿಯೋನ್ ಆಶ್ರಮ ನಿವಾಸಿಗಳಿಗೋಸ್ಕರ ವಾಹನ ಚಾಲಕ-ಮಾಲಕರ ಸಂಘ ಹಾಗೂ ಊರ ನೆರೆಕರೆಯ ಗ್ರಾಮಸ್ಥರು ಪ್ರತೀ ವರ್ಷ ಜನವರಿ ಒಂದರಂದು ಒಂದು ದಿನದ ಅನ್ನದಾನ ನೀಡುತ್ತಿದ್ದು, ಈ ಕಾರ್ಯಕ್ರಮದ ಮುಂದಾಳತ್ವವನ್ನು ಸಂಸ್ಥೆಯ ಹಿತೈಷಿಗಳಾದ ಜೋಸೆಫ್ ಪರುವಕಾರನ್ ಮತ್ತು ಡೆನ್ನಿಯವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ದಿನವತಿ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ರತ್ನತ್ರಯ ತೀರ್ಥಕ್ಷೇತ್ರದಲ್ಲಿಶ್ರವಣಬೆಳಗೊಳದ ಪೂಜ್ಯ ಚಾರುಕೀರ್ತಿ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಚಂದನ ಷಷ್ಠಿ ನೋಂಪಿ ಉದ್ಯಾಪನೆ

Suddi Udaya

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳ ಸಭೆ

Suddi Udaya

ಬೆಳ್ತಂಗಡಿ: ಜಿಲ್ಲಾಮಟ್ಟದ ಯುವಜನ ಮೇಳ

Suddi Udaya

ಪುಂಜಾಲಕಟ್ಟೆ : ತೀರ ಹದಗೆಟ್ಟ ರಸ್ತೆ: ಜೂ. 23 ರಂದು ಸ್ಪಂದನ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಅನಿರ್ದಿಷ್ಟವಾಗಿ ಆಟೋ ರಿಕ್ಷಾ ಸ್ಥಗಿತ

Suddi Udaya

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya
error: Content is protected !!