32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಸುಲ್ಕೇರಿ-ಅಟ್ರಿಂಜೆ ಸೇತುವೆಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಸುನಿಲ್ ಅಸೌಖ್ಯದಿಂದ ಮೃತ್ಯು

ಬೆಳ್ತಂಗಡಿ: ಇಲ್ಲಿಯ ಸುಲ್ಕೇರಿ ಗ್ರಾಮದ ಸುಲ್ಕೇರಿ- ಅಟ್ರಿಂಜೆ ಸೇತುವೆಯ ಸೆಂಟ್ರಿಂಗ್ ಕಾಮಗಾರಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಸುನಿಲ್(19ವರ್ಷ) ಎಂಬಾತ ಅನಾರೋಗ್ಯದಿಂದ ಮೃತಪಟ್ಟ ಘಟನೆ ಜ.2ರಂದು ವರದಿಯಾಗಿದೆ.

ಅಟ್ರಿಂಜೆ ಸೇತುವೆ ಬಳಿ ತನ್ನ ಜೊತೆಗಾರರೊಂದಿಗೆ ಬಿಡಾರದಲ್ಲಿ ವಾಸ್ತವ್ಯವಿದ್ದ ಸುನೀಲ್ ಜ.1ರಿಂದ ಹೊಟ್ಟೆನೋವು ಹಾಗೂ ಗಂಟಲು ನೋವು ಎಂದು ಹೇಳಿ ಕೆಲಸಕ್ಕೆ ರಜೆ ಮಾಡಿ ಬಿಡಾರದಲ್ಲಿ ವಿಶ್ರಾಂತಿಯಲ್ಲಿದ್ದರು. ಜ. 2 ರಂದು ಮಧ್ಯಾಹ್ನ ಅನಾರೋಗ್ಯ ಉಲ್ಬಣಗೊಂಡಿದ್ದು, ಅವರ ಜೊತೆಗಿದ್ದ ಪುತ್ತೂರಿನ ರವಿಕುಮಾರ್ ಅವರು ಹರಿಸಿಂಗ್ ಹಾಗೂ ತೇಜ್ ಸಿಂಗ್ ಎಂಬವರೊಂದಿಗೆ ಮದ್ಯಾಹ್ನ ಸುಮಾರು 3 ಗಂಟೆಗೆ ಅಂಬ್ಯುಲೆನ್ಸ್ ವಾಹನದಲ್ಲಿ ಸುನಿಲ್‌ರನ್ನು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶಿಶಿಲ: ಪೇರಿಕೆ ನಿವಾಸಿ ಸುಪ್ರೀತಾ ಅನಾರೋಗ್ಯದಿಂದ ನಿಧನ

Suddi Udaya

ಹಳೆಪೇಟೆಯಿಂದ ಕುತ್ರೋಟ್ಟು ರಸ್ತೆ ದುರಸ್ತಿಪಡಿಸುವ ಬಗ್ಗೆ ಕುಂಟಿನಿ ಕಾಂಗ್ರೆಸ್ ಬೂತ್ ಸಮಿತಿಯಿಂದ ಮನವಿ

Suddi Udaya

ಚಾರ್ಮಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ: ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ವತಿಯಿಂದ ಅರ್ಹ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Suddi Udaya

ದಸ್ಕತ್ ಗೆ ತುಳುನಾಡಿನ ಕಿರೀಟ: ಈ ವರ್ಷದ ಉತ್ತಮ ತುಳು ಚಲನಚಿತ್ರ ದಸ್ಕತ್

Suddi Udaya

ಲಾಯಿಲ ಗ್ರಾಮಸಭೆಯಲ್ಲಿ ಗ್ರಾ.ಪಂ ಮತ್ತು ಅಧಿಕಾರಿಗಳ ನಿದ್ರಾವಸ್ಥೆಯನ್ನು ಖಂಡಿಸಿ ಶೇಖರ್ ಲಾಯಿಲ ಪಂಚಾಯತ್ ಸಭಾಭವನದ ಎದುರು ನಿದ್ದೆ ಮಾಡುವ ಮೂಲಕ ಆಕ್ರೋಶ

Suddi Udaya
error: Content is protected !!