September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಲಾಯಿಲ : ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯ ಹಳೆವಿದ್ಯಾರ್ಥಿಗಳಿಂದ ಸಿ.ಸಿ. ಟಿ.ವಿ ಹಸ್ತಾಂತರ ಹಾಗೂ ವರ್ಗಾವಣೆಗೊಂಡ ಶಿಕ್ಷಕಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಲಾಯಿಲ: ಕರ್ನೋಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿ ಸಂಘ ಕರ್ನೋಡಿ 2000-2001 ನೇ ಸಾಲಿನ 7 ನೇ ತರಗತಿಯ ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ಅಳವಡಿಸಲಾದ ಸಿ.ಸಿ. ಟಿ.ವಿ ಹಸ್ತಾಂತರ ಕಾರ್ಯಕ್ರಮ ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆ ಗೊಂಡಿರುವ ಶಿಕ್ಷಕಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಪೋಷಕರ ಸಭೆಯನ್ನು ಜ.3ರಂದು ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿ ಸಂಘದ ಗೌರಾಧ್ಯಕ್ಷ ಬಿ.ಕೆ ಧನಂಜಯ್ ರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಲ್ ಸಂತೋಷ್ ಕುಮಾರ್ , ಶಾಲೆಯ ಹಿರಿಯ ವಿದ್ಯಾರ್ಥಿ ನಿವೃತ್ತ ಏರ್ಪ್ರೋಸ್ ಅಧಿಕಾರಿ ಸುನೀಲ್‌ ಶೆಣೈ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗಣೇಶ್.ಆರ್., ಶಾಲಾ ಮುಖ್ಯೋಪಾಧ್ಯಾಯರಾದ ಜಗನ್ನಾಥ.ಎಂ., ಎಸ್.ಡಿ.ಎಮ್.ಸಿ ಅಧ್ಯಕ್ಷೆ ಸೌಮ್ಯ, ಮತ್ತು ವರ್ಗಾವಣೆಗೊಂಡ ಶಿಕ್ಷಕಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಭಾಗವಾಗಿ 65,000 ಮೌಲ್ಯದಲ್ಲಿ ಶಾಲೆಗೆ ಅಳವಡಿಸಲಾದ ಸಿಸಿ ಟಿವಿ ಹಾಗೂ ರೂ.15,000 ಮೌಲ್ಯದಲ್ಲಿ ಶಾಲೆಗೆ ಕೊಡುಗೆಯಾಗಿ ನೀಡಿದ ಇನ್ವರ್ಟರ್ ಅನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು.

ಶ್ರೀಮತಿ ಲಕ್ಷ್ಮೀ ಮತ್ತು ಕನ್ನಾಜೆ ಶ್ರೀ ರಾಯಪ್ಪ ಯಾನೆ ಲಕ್ಷ್ಮಣ ಶೆಣೈ ಸ್ಮಾರಕ ದತ್ತಿನಿಧಿ ಯೋಜನೆಯು ಕಳೆದ 15 ವರುಷಗಳಿಂದ ಶಾಲೆಯಲ್ಲಿ ನಡೆಯುತ್ತಿದ್ದು ಪ್ರತಿ ವರುಷ ಶಾಲೆಯಲ್ಲಿ ಕಲಿಯುತ್ತಿರುವ 1 ತರಗತಿಯ ಒಬ್ಬ ಬಡ ವಿದ್ಯಾರ್ಥಿಯ ಹೆಸರಿನಲ್ಲಿ ರೂ. 10,000 ಮೊತ್ತವನ್ನು ಬ್ಯಾಂಕ್ ನಲ್ಲಿ ನಿರಖು ಠೇವಣಿ ಇಡುವ ಮೂಲಕ ಆ ವಿದ್ಯಾರ್ಥಿಗೆ 18 ವರುಷ ತುಂಬಿದ ನಂತರ ಅಸಲು ಹಾಗೂ ಬಡ್ಡಿಯ ಮೊತ್ತವು ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗ ಆಗುವ ಸದುದ್ದೇಶದಿಂದ ಈ ಬಾರಿ ಶ್ರೀಮತಿ ಇಂದಿರಾ ನಾರಾಯಣ ಜೋಗಿ ಇವರ ಮಗ 1 ನೇ ತರಗತಿ ಚೇತನ್ ನನ್ನು ದತ್ತಿನಿಧಿ ಯೋಜನೆಗೆ ಆಯ್ಕೆ ಮಾಡಿ ಆತನ ಹೆಸರಿನಲ್ಲಿ ಇರಿಸಿದ ಮೊತ್ತದ ಬಾಂಡ್ ಅನ್ನು ಯೋಜನೆಯ ಸಂಚಾಲಕ ಸುನಿಲ್ ಶೆಣೈ ಅವರು ಫಲಾನುಭವಿ ವಿದ್ಯಾರ್ಥಿಗೆ ವಿತರಿಸಿದರು.

ಸಿಸಿ ಟಿವಿ ಅಳವಡಿಸಲು ಧನ ಸಹಾಯ ಮಾಡಿದ 2000- 2001 ನೇ ಸಾಲಿನ 7 ನೇ ತರಗತಿಯ ಉಪಸ್ಥಿತರಿದ್ದ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇನ್ವರ್ಟರ್ ಕೊಡುಗೆ ನೀಡಿದ ಆರಿಫ್ ಆದರ್ಶ ನಗರ ಇವರ ಪರವಾಗಿ ಇವರ ತಂದೆಯವರಾದ ಇಬ್ರಾಹಿಂ ರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ, ದ.ಕ.ಜಿಲ್ಲಾ ಕೆ. ಡಿ. ಪಿ ಸದಸ್ಯ ಸಂತೋಷ್ ಕುಮಾರ್ ಅವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಲಾಯಿತು. ಶಾಲೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆ ಗೊಂಡಿರುವ ಗಂಗಾರಾಣಿ ನಾ ಜೋಶಿ, ತ್ರಿಶಾಲ ಜೈನ್, ಮಮತಾ. ಕೆ. ಇವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ, ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಎಮ್.ಸಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರು ವರ್ಗಾವಣೆಗೊಂಡ ಶಿಕ್ಷಕಿಯರ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿಯರು ತಮ್ಮ ಸೇವಾ ಅವಧಿಯ ಅನುಭವವನ್ನು ಹಂಚಿಕೊಂಡರು. ವರ್ಗಾವಣೆಗೊಂಡ ಶಿಕ್ಷಕಿಯರು ಶಾಲೆಗೆ ಮುಂದಿನ ದಿನಗಳಲ್ಲಿ ನಿತ್ಯೋಪಯೋಗವಾಗುವ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾ ಸಹ ಶಿಕ್ಷಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಜಗನ್ನಾಥ್. ಎಮ್ ಸ್ವಾಗತಿಸಿ, ಸಹ ಶಿಕ್ಷಕ ಕೃಷ್ಣ ಕುಮಾರ್ ಧನ್ಯವಾದಗೈದರು. ಸಹ ಶಿಕ್ಷಕಿ ಶ್ರೀಮತಿ ಲೀನಾ ಡಿ ಸೋಜಾ ಮತ್ತು ಶ್ರೀಮತಿ ಅಶ್ವಿನಿ ವರ್ಗಾವಣೆಗೊಂಡ ಶಿಕ್ಷಕಿಯರ ವೈಯಕ್ತಿಕ ಪರಿಚಯವನ್ನು ಮಾಡಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, 2000-2001 ರ 7 ನೇ ತರಗತಿಯ ಹಳೆ ವಿದ್ಯಾರ್ಥಿಗಳು, ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು ಮತ್ತು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು

Related posts

ಶ್ರೀ ರಾಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಡಿಎ ದಿಗ್ದರ್ಶನ ಕಾರ್ಯಕ್ರಮ: ಜವಾಬ್ದಾರಿಯುತ ಪ್ರಜೆಯಾಗಿ ದೇಶಸೇವೆ ಮಾಡಲು ಲೆ.ಕ. ರೋಹಿತ್ ಪ್ರಕಾಶ್ ರೈ ಕರೆ

Suddi Udaya

ಕೊಲ್ಲಿ ದೇವಸ್ಥಾನದ ವಠಾರದಲ್ಲಿ ಸಂಗಮ ಕಲಾವಿದರು ಉಜಿರೆ ಇದರ 14ನೇ ವರ್ಷದ ವಾರ್ಷಿಕೋತ್ಸವ; ಸನ್ಮಾನ

Suddi Udaya

ಮಿತ್ತಬಾಗಿಲು ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಮುಂಡಾಜೆ ಸದಾಶಿವ ಶೆಟ್ಟಿ ವಿಧಿವಶ

Suddi Udaya

ಬಿಸಿರೋಡ್ ಬಿಂಎಂಬಿ ಸಮನ್ವಯ ಜೀತೋ ಚಾಲಕ ಮಾಲಕ ಸಂಘದಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ

Suddi Udaya
error: Content is protected !!