25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ: ಸುಶೀಲಾ ಬಾಯಿ ಮರಾಠೆ ಸಂಸ್ಮರಣೆ: ಕವಿಗೋಷ್ಠಿ ಕಾರ್ಯಕ್ರಮ

ಬೆಳ್ತಂಗಡಿ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ಮತ್ತು ಗುಪ್ತಗಾಮಿನಿ ಸಾಹಿತ್ಯ ಶಾಲೆ, ಮುಂಡಾಜೆ ಸಹಭಾಗಿತ್ವದಲ್ಲಿ ಅಭಿಜಾತ ಕವಯತ್ರಿ ಕೊಪ್ಪಲ ಸುಶೀಲಾ ಬಾಯಿ ಮರಾಠೆ ಅವರ ಸಂಸ್ಮರಣ ದಿನವನ್ನು ಉಜಿರೆ ಗ್ರಾಪಂ ಸಭಾಭವನದಲ್ಲಿ ಆಚರಿಸಲಾಯಿತು.

ಅಭಾಸಾಪ ಬೆಳ್ತಂಗಡಿ ಘಟಕದ ಅಧ್ಯಕ್ಷ ಗಣಪತಿ ಭಟ್ ಕುಳಮರ್ವ ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿ ಆಮಂತ್ರಣ ಅಧ್ಯಕ್ಷೆ ವಿದ್ಯಾಶ್ರೀ ಅಡೂರು ಸುಶೀಲಾಬಾಯಿ ಮರಾಠೆ ಅವರ ಸಂಸ್ಮರಣೆಯನ್ನ ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಪ್ತಗಾಮಿನಿ ಸಾಹಿತ್ಯ ಶಾಲೆಯ ಸಂಚಾಲಕ ಶ್ರೀಕರ ಮರಾಠೆ ಮಾತನಾಡಿ ಕವಿತೆ ಕಟ್ಟುವ ಕೌಶಲ್ಯದ ಬಗೆಗೆ, ಕವಿತೆ ಕಟ್ಟುವಾಗಿನ ಸವ್ಯ ಅಪಸವ್ಯಗಳ ಬಗೆಗೆ ತಿಳಿಸಿ ಕಾವ್ಯ ಸರಸ್ವತಿ ಎಂಬುದು ಎಲ್ಲರ ಮನಸ್ಸಿನಲ್ಲಿ ನಿರಂತರ ಹರಿಯುವ ಗುಪ್ತಗಾಮಿನಿ ಅದನ್ನು ಗುರುತಿಸಿಕೊಳ್ಳುವುದೇ ಕೌಶಲ್ಯ ಎಂದು ಹೇಳಿದರು.

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಸಂಸ್ಥಾಪಕ ವಿಜಯಕುಮಾರ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿಯ ಅಧ್ಯಕ್ಷೆ ಸುಮನಾ ಹೇರಳೆ, ತೀರ್ಪುಗಾರರಾದ ಆಶಾಮಯ್ಯ, ಆಮಂತ್ರಣ ಜಿಲ್ಲಾ ಘಟಕದ ಅಧ್ಯಕ್ಷೆ ವಿಂಧ್ಯಾ ಎಸ್. ರೈ ಕಡೆಶಿವಾಲಯ, ಜಿಲ್ಲಾ ನಿರ್ದೇಶಕ ಚೇತನ್ ಕುಮಾರ್ ಬಿ., ರಾಜ್ಯ ಸದಸ್ಯೆ ಆಶಾ ಅಡೂರ್, ಬಂಟ್ವಾಳ ಘಟಕದ ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು ಉಪಸ್ಥಿತರಿದ್ದರು. ರೇಣುಕಾ ಸುಧೀರ್ ಅರಸಿನಮಕ್ಕಿ, ಶ್ವೇತಾ ಗೋಡ್ಬೋಲೆ, ಸರೀನ್ ತಾಜ್ ಕಾಶಿಪಟ್ಣ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯಾ ಕಾರಂತ್ ಪ್ರಾರ್ಥಿಸಿದರು.ಮಂಜು ವಂದಿಸಿದರು.

ಆಮಂತ್ರಿತ ಕವಿಗಳಿಂದ ಕವಿತೆಯ ರಚನೆ ಮತ್ತು ವಾಚನದ ಆಧಾರದಲ್ಲಿ ಕವಿಗೋಷ್ಠಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಹರೀಶ್ ವಿ. ನೆರಿಯ ಪ್ರಥಮ, ಸತ್ಯವತಿ ಸಿದ್ದಮೂಲೆ ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಕವಿತೆಯ ವಾಚನದ ಸ್ಪರ್ಧೆಯಲ್ಲಿ ರಮ್ಯಾ ರಘುಪತಿ ಹೆಬ್ಬಾರ್ ಕೊಕ್ಕಡ ಪ್ರಥಮ ಮತ್ತು ಅಶೋಕ್ ಕಡೆಶಿವಾಲಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.


ಭಾಗವಹಿಸಿದ ಕವಿಗಳು
ಹರೀಶ್ ವಿ. ನೆರಿಯ, ಸತ್ಯಲತಾ ಸಿದ್ದಮೂಲೆ, ಕುಸುಮಾವತಿ ಚಂದ್ರಶೇಖರ ಶೆಟ್ಟಿ, ಬಾಲಕೃಷ್ಣ ಸಹಸ್ರಬುದ್ಧೆ, ಮುಂಡಾಜೆ, ವನಜಾ ಜೋಶಿ, ವಿಶ್ವನಾಥ್ ಕುಲಾಲ ಮಿತ್ತೂರ್, ರಮ್ಯಾ ರಘುಪತಿ ಹೆಬ್ಬಾರ್, ಶ್ರೀಲತಾ ಪದ್ಯಾಣ, ಶ್ರೇಯಾ ಸಿ. ಪಿ., ಅಶೋಕ್ ಎನ್. ಕಡೆಶಿವಾಲಯ, ಆಶಾ ಅಡೂರ್, ದಿಲೀಪ್ ಕಡಬ, ರಶ್ಮಿತಾ ಸುರೇಶ ಜೋಗಿಬೆಟ್ಟು, ದಿನೇಶ್ ಕುಂದರ್, ಚೈತ್ರಾ ಸತ್ಯಜಿತ್ ಬರ್ವೆ, ಶಾಮಪ್ರಸಾದ್ ಭಟ್ ಮತ್ತು ಶಂಕರ್ ತಾಮನ್ಕರ್

Related posts

ಒಡಿಶಾದ ರೈಲು ದುರಂತದಲ್ಲಿ ಪಾರಾದ ವೇಣೂರಿನ ಪ್ರಯಾಣಿಕರು

Suddi Udaya

ಕರಾಟೆ ಸ್ಪರ್ಧೆ : ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗೆ ಚಿನ್ನದ ಪದಕ

Suddi Udaya

ಕನ್ಯಾಡಿ I : ನೇರೊಳ್ದಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಮತ್ತು ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

Suddi Udaya

ತಣ್ಣೀರುಪಂತ: ಅಳಕೆ ಎಂಬಲ್ಲಿ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ವೃದ್ಧ ಸಾವು : ಕೊಲೆಯೇ, ಆತ್ಮಹತ್ಯೆಯೇ ಪೊಲೀಸರ ತನಿಖೆ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya
error: Content is protected !!