September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

ಬೆಳ್ತಂಗಡಿ : ‘ಆಧ್ಯಾತ್ಮಿಕತೆ ನಮ್ಮ ದೇಶದ ಆತ್ಮ. ಆಧ್ಯಾತ್ಮಿಕವಾಗಿ ಜೀವನಕ್ಕೆ ಮಾರ್ಗದರ್ಶನ ನೀಡುವ ಆದರ್ಶಗಳ ಪುಣ್ಯಭೂಮಿ ಈ ಭಾರತ. ಹಾಗಾಗಿ ನಮಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಮೇಲೆ ಅಭಿಮಾನವಿರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಜ.26 ರಂದು ರಾತ್ರಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ‘ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾದ ತಿಂಗಳಲ್ಲೇ ನಾಳ ದೇವಸ್ಥಾನಕ್ಕೆ ಚಂದ್ರಮಂಡಲ ರಥ ಸಮರ್ಪಣೆಯಾಗಿದ್ದು ಭವ್ಯ ಕ್ಷಣವಾಗಿದೆ. ದೇವಸ್ಥಾನಕ್ಕೆ ಬರುವಾಗ ಚಪ್ಪಲಿ ಹೊರಗಿಟ್ಟು ಬರುವಂತೆ ಮನಸ್ಸಿನಿಂದ ರಾಜಕೀಯವನ್ನು ಹೊರಗಿಟ್ಟು ಸ್ವಚ್ಛವಾಗಿ ಬರಬೇಕು ಎಂದರು.


ಸಭೆಯನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮೈಸೂರಿನ ಉದ್ಯಮಿ ಹೇಮಂತ್ ಕುಮಾರ್ ಗೇರುಕಟ್ಟೆ, ಬೆಂಗಳೂರಿನ ಉದ್ಯಮಿ ಕಿರಣ್ ಚಂದ್ರ ಹಲೇಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ ಪ್ರಸ್ತಾವಿಸಿ, ಸ್ವಾಗತಿಸಿದರು.

ವೇದಿಕೆಯಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಕಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಮೆದಿನ, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ಓಡೀಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬದಿನಡೆ ಮಂಜಲಡ್ಡ ಪರಿವಾರ ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಜೈನ್ ಕಳಿಯಬೀಡು, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಭಜನಾ ಮಂಡಳಿ ಅಧ್ಯಕ್ಷ ಉಮೆಶ್ ಶೆಟ್ಟಿ ಸಂಬೊಳ್ಯ, ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ. ಜನಾರ್ದನ ಪೂಜಾರಿ, ದಿನೇಶ್ ಗೌಡ ಕೆ ಕಲಾಯಿತೊಟ್ಟು, ಅಂಬಾ ಬಿ ಆಳ್ವಾ, ವಿಜಯ ಹೆಚ್ ಪ್ರಸಾದ್, ಉಮೇಶ್ ಕೆ ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ ಉಪಸ್ಥಿತರಿದ್ದರು.

ರಥ ನಿರ್ಮಾಣಕ್ಕೆ ಮರ ನೀಡಿದ ಆನಂದ ಶೆಟ್ಟಿ ಐಸಿರಿ, ಗಣಪತಿ ಭಟ್, ಅಂಬಿಕೆ, ಮೋಹನ್, ರಥದ ಕೆತ್ತನೆ ಕಾರ್ಯ ಮಾಡಿದ ಶಶಿಧರ ಬೆಳಾಲು, ವಸಂತ ಆಚಾರ್ಯ, ಸದಾಶಿವ ಹಾಗೂ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತನೆ ಕಾರ್ಯದಲ್ಲಿ ಪಾಲ್ಗೊಂಡ ಶಿಲ್ಪಿ ಸ್ಥಳೀಯ ನಿವಾಸಿ ಜಯಚಂದ್ರ ಆಚಾರ್ಯರನ್ನು ಗೌರವಿಸಲಾಯಿತು.

ಎಸ್.ಕೆ.ಡಿ.ಆರ್.ಡಿ.ಪಿ. ವತಿಯಿಂದ ಯೋಜನಾಧಿಕಾರಿ ಸುರೇಂದ್ರರವರು ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ರೂ.2.50 ಲಕ್ಷದ ಚೆಕ್ ಅನ್ನು ಹಸ್ತಾಂತರಿಸಿದರು.

ಸತೀಶ್ ಭಂಡಾರಿ ಪ್ರಾರ್ಥನೆ ನೆರವೇರಿಸಿದರು. ಉಪನ್ಯಾಸಕ, ಕಳಿಯ ಪ್ಯಾಕ್ಸ್ ನ ನಿರ್ದೇಶಕ ಕೇಶವ ಬಂಗೇರ ನಿರೂಪಿಸಿದರು. ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ವಂದಿಸಿದರು.

Related posts

ಜೂ.12 ರಂದು ವಿದ್ಯುತ್ ನಿಲುಗಡೆ

Suddi Udaya

ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನಲ್ಲಿ ಸಿ.ಎ ಸಾಧಕರಿಗೆ ಸನ್ಮಾನ

Suddi Udaya

ಗೇರುಕಟ್ಟೆ: ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ, ಕಠಿಣ ಕ್ರಮಕೈಗೊಳ್ಳುವಂತೆ ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದಿಂದ ಜಿಲ್ಲಾಧಿಕಾರಿಯವರಿಗೆ, ಪೊಲೀಸ್ ಕಮಿಷನರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ

Suddi Udaya

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಅಳದಂಗಡಿ: ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!