ಬೆಳ್ತಂಗಡಿ: ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಂಗಳೂರು ಜಿಲ್ಲಾ ಸಮಿತಿಯ ಮಹಾಸಭೆಯು ಮಂಗಳೂರಿನ ಊರ್ವ ಕ್ರೀಡಾ ಪ್ರಾಧಿಕಾರದ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ, ಮಹಾ ಪೋಷಕರಾದ ಪೀತಾಂಬರ ಹೆರಾಜೆ, ತೇಜೋಮಯ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ರಂಜನ್ ಜಿ ಗೌಡ, ನಾಮದೇವ್ , ಹಕೀಮ್, ಧನಂಜಯ ರಾವ್ ಹಾಗೂ ಇತರರು ಹಾಜರಿದ್ದರು.











