ಕಾಶಿಪಟ್ಣದ ದಾರುನ್ನೂರ್ ವಿದ್ಯಾ ಸಂಸ್ಥೆಯಲ್ಲಿರುವ ಬಹರುನ್ನೂರ್ ಜುಮ್ಮಾ ಮಸೀದಿಯನ್ನು ನಿರ್ಮಿಸಿರುವ ದಾನಿ ಯು.ಎ.ಇ.ಯ ಪ್ರಜೆ ಮ. ಶೈಖ್ ಅಬ್ದುಲ್ ಬಾರಿಯವರ ಮಗ ಖಾಲಿದ್ ಅಲ್ ಝುಬೈರ್ ಅವರು ಇತ್ತೀಚೆಗೆ ದಾರುನ್ನೂರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ದಾರುನ್ನೂರ್ ಕೇಂದ್ರ ಸಮಿತಿಯ ಅಧ್ಯಕ್ಷರೂ, ದ.ಕ.ಜಿಲ್ಲಾ ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ದಾರುನ್ನೂರ್ ಯು.ಎ.ಇ. ರಾಷ್ಟ್ರೀಯ ಸಮಿತಿಯ ನೇತಾರರಾದ ಶಂಶುದ್ದೀನ್ ಒಳಪಟ್ಟಣಂ, ದುಬೈ ಸಮಿತಿಯ ಅಧ್ಯಕ್ಷ ಶಂಶುದ್ದೀನ್ ಕಲ್ಕರ್ ಹಾಗೂ ಯು.ಎ.ಇ.ಕೋರ್ ಕಮಿಟಿ ಮುಖ್ಯಸ್ಥ ರಫೀಕ್ ಸುರತ್ಕಲ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಕೋಶಾಧಿಕಾರಿ ಡಿ.ಎ. ಉಸ್ಮಾನ್ ಏರ್ ಇಂಡಿಯಾ, ಉಪಾಧ್ಯಕ್ಷರಾದ ಅಬ್ದುಲ್ ಸಮದ್ ಹಾಜಿ, ಪಿ.ಟಿ.ಏ.ಅಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಸದರ್ ಮುದರ್ರಿಸ್ ಹುಸೈನ್ ರಹ್ಮಾನಿ, ಮೆನೇಜರ್ ಅಬ್ದುಲ್ ಹಕೀಮ್, ಅರೆಬಿಕ್ ವಿಭಾಗದ ಮುಖ್ಯಸ್ಥ ರವೂಫ್ ಹುದವಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಹೆಚ್.ಮುಹಮ್ಮದ್ ವೇಣೂರು











